More

    ಪ್ರತಿಯೊಬ್ಬರೂ ಸಂವಿಧಾನ ತಿಳಿದುಕೊಳ್ಳಿ : ಪ್ರೊ.ಜಿ. ಹೇಮಂತ್‌ಕುಮಾರ್


    ಮೈಸೂರು: ಪ್ರತಿಯೊಬ್ಬ ನಾಗರಿಕರು ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತ್‌ಕುಮಾರ್ ಹೇಳಿದರು.


    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ, ಕರ್ನಾಟಕ ಜಾನಪದ ವಿವಿ ಸಹಯೋಗದಲ್ಲಿ ಸೋಮವಾರ ಮೈಸೂರು ವಿವಿ ಎನ್‌ಎಸ್‌ಎಸ್ ಭವನದಲ್ಲಿ ಆಯೋಜಿಸಿದ್ದ ‘ಸಂವಿಧಾನ ಓದು’ ವಿಶ್ವವಿದ್ಯಾಲಯ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.


    ಸಂವಿಧಾನ ತಿಳಿಯುವುದು ಎಂದರೆ ನಮ್ಮ ಬದುಕನ್ನು ರೂಪಿಸಿಕೊಂಡಂತೆ, ನಮ್ಮನ್ನು ರಕ್ಷಿಸಿಕೊಂಡಂತೆ. ಆದರೂ, ಅಕ್ಷರಸ್ಥರಿಗೆ ಸಂವಿಧಾನದ ಅರಿವಿನ ಕೊರತೆ ಇದೆ ಎಂದರು.
    ಸಂವಿಧಾನ ಎಂಬುದು ಪ್ರತಿಯೊಬ್ಬರ ಅಭಿವೃದ್ಧಿ ಸೂಚಕ, ಜೀವರಕ್ಷಕ, ಗೌರವದ ಸಂಕೇತ. ಹಾಗಾಗಿ ಎಲ್ಲರೂ ಸಂವಿಧಾನ ಅಧ್ಯಯನ ಮಾಡುವುದು ಒಂದು ರಾಷ್ಟ್ರದ ಅಭಿವೃದ್ಧಿಗೆ ಹಾಗೂ ನಮ್ಮ ಬೆಳವಣಿಗೆಗೆ ಪೂಕರ. ಸಂವಿಧಾನದ ಅರಿವಿದ್ದರೆ, ಗೌರವಯುತ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದರು.


    ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎಂ.ರಾಜಶೇಖರ ಮಾತನಾಡಿ, ಸಂವಿಧಾನವನ್ನು ಒಪ್ಪಿಕೊಂಡಿರುವ ನಾವು ಅದರ ಆಶಯಗಳನ್ನು ಜಾರಿಗೊಳಿಸಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮಲ್ಲಿ ನಾನಾ ಜಾತಿ, ಸಂಸ್ಕೃತಿಗಳಿವೆ. ಹೀಗಾಗಿ ಇಲ್ಲಿ ಸಾಮರಸ್ಯ ಅತ್ಯಗತ್ಯ. ಇಲ್ಲವಾದಲ್ಲಿ ದೇಶದ ಪ್ರಗತಿ ಸಾಧ್ಯವಿಲ್ಲ. ನಮಗೆ ರಾಷ್ಟ್ರ ಮೊದಲು. ಧರ್ಮ ಸೇರಿದಂತೆ ಇನ್ನಿತರ ವಿಚಾರಗಳು ವೈಯಕ್ತಿಕ ಆಚರಣೆಗಳಾಗಿರಬೇಕು. ಸಮಾನತೆಯ ತತ್ವದ ಆಧಾರದ ಮೇಲೆ ಜಾತ್ಯತೀತತೆಯನ್ನು ಸಾಧಿಸಬೇಕಿದೆ ಎಂದರು.

    ಸಂವಿಧಾನ ಓದು ಅಭಿಯಾನದ ರಾಜ್ಯ ನೋಡಲ್ ಅಧಿಕಾರಿ ಡಾ.ಮಲ್ಲಿಕಾರ್ಜುನ ಮಾನ್ಪಡೆ, ಸಂಯೋಜನಾಧಿಕಾರಿ ಪ್ರೊ.ಬಿ. ಚಂದ್ರಶೇಖರ, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಬಿ.ಸುರೇಶ್, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಮಧುಸೂದನ್, ಪ್ರಾಧ್ಯಾಪಕ ನಿಂಗರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts