More

    ಸಂಸ್ಕೃತ ಕಲಿಕೆಯಿಂದ ಸಂಸ್ಕೃತಿ ಅರಿವು

    ಶಿವಮೊಗ್ಗ: ಸಂಸ್ಕೃತ ದೇವ ಭಾಷೆ ಮಾತ್ರವಲ್ಲ. ಸುಂದರವಾದ, ಸಂಸ್ಕರಿಸಿದ ಭಾಷೆ. ಎಲ್ಲರೂ ಸಂಸ್ಕೃತ ಕಲಿಕೆಗೆ ಒಲವು ತೋರಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಹೇಳಿದರು.
    ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯಿಂದ ಐದು ವರ್ಷದೊಳಗಿನ ಮಕ್ಕಳಿಗೆ ಏರ್ಪಡಿಸಿದ್ದ ಸಂಸ್ಕೃತ ಸುಭಾಷಿತ ಕಂಠಪಾಠ ಸ್ಪರ್ಧೆ ಏರ್ಪಡಿಸಿ ಮಾತನಾಡಿದ ಅವರು, ಸಂಸ್ಕೃತದಲ್ಲಿ ನಮ್ಮ ಸಂಸ್ಕೃತಿಯ ಸೊಗಡಿದೆ ಎಂದರು.
    ಸಂಸ್ಕೃತ ಕಲಿತರೆ ಸಂಸ್ಕೃತಿ ತಾನಾಗಿಯೇ ತಿಳಿಯುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕೃತ ಕಲಿಸಬೇಕು. ಸಂಸ್ಕೃತ ಕಲಿಕೆಯಿಂದ ಬೇರೆ ಭಾಷೆ ಕಲಿಕೆಯೂ ಸುಲಭವಾಗುತ್ತದೆ. ಭಾರತದ ವೈಶಿಷ್ಟ್ಯಗಳನ್ನು ಅರಿಯಲು ಸಂಸ್ಕೃತ ಪೂರಕವಾಗಿದೆ. ಸುಭಾಷಿತಗಳು ನಮಗೆ ಉತ್ತಮವಾದ ಜೀವನವನ್ನು ನಡೆಸಲು ಮಾರ್ಗದರ್ಶಕವಾಗಿವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts