ಒಂದು ಸಿನಿಮಾ 100 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಮಾಡಿಕೊಂಡರೆ, ಅದು ಭರ್ಜರಿ ಯಶಸ್ಸಿ ಕಂಡಂತೆ ಎನ್ನುವ ಕಾಲವಿತ್ತು. ಆದರೆ, ಈಗ ಕಾಲ ಬದಲಾಗಿದೆ ಎಂದಿದ್ದಾರೆ ಬಾಲಿವುಡ್ ನಟ ಸಲ್ಮಾನ್ ಖಾನ್.
ಇದನ್ನೂ ಓದಿ : VIDEO | ದುಬಾರಿ ಕಾರನ್ನು ಬಿಟ್ಟು ಆಟೋದಲ್ಲಿ ತಿರುಗಾಡಿದ ಕೀರ್ತಿ ಸುರೇಶ್, ವರುಣ್ ಧವನ್!

ಇತ್ತೀಚೆಗಷ್ಟೆ ಪಂಜಾಬಿ ಸಿನಿಮಾ ‘ಮೌಜಾ ಹೀ ಮೌಜಾ’ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ‘100 ಕೋಟಿ ರೂ. ಗಳಿಕೆ ತೀರಾ ಸಾಮಾನ್ಯ. ಪಂಜಾಬಿ, ಹಿಂದಿ ಸೇರಿ ಮರಾಠಿ ಚಿತ್ರಗಳು ಕೂಡ 400 ಕೋಟಿ ರೂ. ಅಥವಾ 600 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಮಾಡುತ್ತಿವೆ. ಹೀಗಾಗಿ 100 ಕೋಟಿ ರೂ. ಕಲೆಕ್ಷನ್ ಈಗ ದೊಡ್ಡ ವಿಷಯ ಅಲ್ಲವೇ ಅಲ್ಲ. ಸದ್ಯ 1000 ಕೋಟಿ ರೂ. ಗಳಿಕೆ ಹೊಸ ಮಾನದಂಡವಾಗಿದೆ’ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಸಲಾರ್ ರಿಲೀಸ್ ಡೇಟ್ ಮತ್ತೆ ಪೋಸ್ಟ್‌ಪೋನ್, ಎರಡು ಭಾಗಗಳಲ್ಲಿ ರಿಲೀಸ್ ಆಗಲಿರುವ ಚಿತ್ರ

ಅಂದಹಾಗೆ, ಈ ವರ್ಷ ‘ಪಠಾಣ್’, ‘ಜವಾನ್’, ‘ಗದರ್ 2’ ಸೇರಿ ಕೆಲವು ಬಾಲಿವುಡ್ ಚಿತ್ರಗಳು 500 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಮಾಡಿಕೊಂಡಿವೆ. ಸದ್ಯ ಸಲ್ಮಾನ್ ಖಾನ್ ‘ಟೈಗರ್ 3’ ಚಿತ್ರದಲ್ಲಿ ಬಿಜಿಯಿದ್ದು, ಸಿನಿಮಾ ನ. 10ರಂದು ರಿಲೀಸ್ ಆಗಲಿದೆ.
-ಏಜೆನ್ಸೀಸ್