More

    ದೇಶಪ್ರೇಮಿಗಳ ತ್ಯಾಗ, ಸ್ಮರಣೆ ಪ್ರತಿಯೊಬ್ಬರ ಕರ್ತವ್ಯ

    ಬ್ಯಾಡಗಿ: ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ದೇಶಪ್ರೇಮಿಗಳು ಪ್ರಾಣತ್ಯಾಗ ಮಾಡಿದ್ದು, ಅವರ ಸ್ಮರಣೆ ಮಾಡುವ ಮೂಲಕ ಯುವಕರಲ್ಲಿ ದೇಶಾಭಿಮಾನ ಮೂಡಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಭಾರತ ಮಾತಾ ಮೆರವಣಿಗೆ ಜಾಗೃತಿ ಮೂಡಿಸುತ್ತಿದೆ ಎಂದು ಪುರಸಭೆ ಅಧ್ಯಕ್ಷ ಸರೋಜಾ ಉಳ್ಳಾಗಡ್ಡಿ ಹೇಳಿದರು.
    ಪಟ್ಟಣದ ತಾಪಂ ಆವರಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ಏರ್ಪಡಿಸಿದ್ದ ಭಾರತ ಮಾತಾ ಮೂರ್ತಿಯ ಮೆರವಣಿಗೆ ಹಾಗೂ ಜನಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯಿಂದ ನೂರಾರು ಹಿರಿಯ ಸ್ವಾತಂತ್ರ್ಯೊಧರು ಪಾಲ್ಗೊಂಡಿದ್ದರು. ಅವರಲ್ಲಿ ಬ್ಯಾಡಗಿ ಮಹದೇವ ಮೈಲಾರ, ಸಿದ್ದಮ್ಮ ಮೈಲಾರ ಮಹಾತ್ಮ ಗಾಂಧೀಜಿಯೊಂದಿಗೆ ಪಾಲ್ಗೊಂಡಿದ್ದರು. ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಸೇನಾನಿ ಜಿ.ಪಿ. ಮಹಾನುಭವಿಮಠ 1940ರಲ್ಲಿ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಭಾರತ ಮಾತಾ ಜಾಗ್ರತ ಅಭಿಯಾನ ಆರಂಭಿಸಿ ಆರೇಳು ದಶಕ ಕಳೆದಿದೆ. ಅವರ ಆಶಯದಂತೆ ರಾಣೆಬೆನ್ನೂರಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಪ್ರತಿವರ್ಷ ಆಗಸ್ಟ್ ತಿಂಗಳಲ್ಲಿ ಜರುಗುತ್ತಿದೆ. ದೇಶದ ಪುಣ್ಯಕ್ಷೇತ್ರ ಕಾಶಿ ಹೊರತುಪಡಿಸಿ, ಭಾರತಮಾತೆ ಮಂದಿರ ಎಲ್ಲಿಯೂ ನಿರ್ವಿುಸಿಲ್ಲ. ರಾಣೆಬೆನ್ನೂರು ಮಾರುತಿ ನಗರದ ಮಂದಿರ ದೇಶದ ಎರಡನೇ ಮಂದಿರವಾಗಿದ್ದು, ಭಾರತೀಯರು ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.
    ಭಾರತ ಮಾತಾ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಶಿವಯೋಗಿ ಮಹಾನುಭವಿಮಠ ಮಾತನಾಡಿ, 108 ಗ್ರಾಮ ಹಾಗೂ ಜಿಲ್ಲೆಯ 8 ತಾಲೂಕುಗಳಲ್ಲಿ 30 ದಿನ ಭಾರತ ಮಾತಾ ಮೂರ್ತಿಯ ಮೆರವಣಿಗೆ ನಡೆಯುತ್ತಿದೆ ಎಂದರು.
    ಮೂರ್ತಿಯ ಮೆರವಣಿಗೆಯಲ್ಲಿ ಎಸ್.ಎಸ್.ಪಿ.ಎನ್. ನೂತನ, ಡಾ.ಬಿ.ಆರ್. ಅಂಬೇಡ್ಕರ್ ಪ್ರೌಢ ಶಾಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮೆರವಣಿಗೆಗೆ ಚಾಲನೆ ನೀಡಿದರು.
    ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೀರೇಂದ್ರ ಶೆಟ್ಟರ, ತಾಲೂಕಾಧ್ಯಕ್ಷ ಹಾಲೇಶ ಜಾಧವ, ಅಂಬಿಗರ ಚೌಡಯ್ಯ ನಿಗಮದ ನಿರ್ದೇಶಕ ಜೀತೇಂದ್ರ ಸುಣಗಾರ, ಪುರಸಭೆ ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ, ಸದಸ್ಯರಾದ ವಿನಯ ಹಿರೇಮಠ, ಚಂದ್ರಪ್ಪ ಶೆಟ್ಟರ, ಫಕೀರಮ್ಮ ಚಲವಾದಿ, ಕಲಾವತಿ ಬಡಿಗೇರ, ಶಿವಯೋಗಿ ಅಂಗಡಿ, ವಿಜಯಭರತ ಬಳ್ಳಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕಪ್ಪ, ಪ್ರಾಂಶುಪಾಲ ಬಸವರಾಜ ದೊಡ್ಡಮನಿ, ಪತ್ರಕರ್ತ ಕುಮಾರಸ್ವಾಮಿ ಮಹಾನುಭಾವಿಮಠ, ಬಸವಂತಪ್ಪ ಹುಲ್ಲತ್ತಿ, ಕರಿಬಸಯ್ಯ ಹಿರೇಮಠ, ಪರಮೇಶಪ್ಪ ಅಂಗಡಿ, ಶಿಕ್ಷಕಿ ಸಿ. ಮಂಗಳಾ, ಸಿ.ಬಿ. ನಾಗಮ್ಮನವರ, ಎ.ವಿ. ಮನ್ನಂಗಿ, ಬಿ.ಎನ್. ಸವಿತಾ, ಅಟಲ್​ಜಿ ಅಂಗಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts