More

  1 ರೂ.ಪಾವತಿಸಿ, ಲಿಖಿತವಾಗಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕಾನೂನು ಕ್ರಮ ನಿಶ್ಚಿತ: ಸಚಿನ್​ ಪೈಲಟ್​

  ಜೈಪುರ: ರಾಜಸ್ಥಾನದ ಡೆಪ್ಯೂಟಿ ಸಿಎಂ ಹಾಗೂ ಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಂಡ ಸಚಿನ್​ ಪೈಲಟ್​ ಅವರ ವಿರುದ್ಧ ಕಾಂಗ್ರೆಸ್​ ಶಾಸಕ ಗಿರಿರಾಜ್​ ಸಿಂಗ್​ ಮಾಲಿಂಗಾ ಅವರು ಕುದುರೆ ವ್ಯಾಪಾರದ ಆರೋಪ ಹೊರೆಸಿದ್ದರು.
  ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರ ವೋಟ್​ ಮಾಡಿದರೆ 35 ಕೋಟಿ ರೂ.ನೀಡುವುದಾಗಿ ಆಫರ್​ ನೀಡಿದ್ದರು ಎಂದು ಮಾಲಿಂಗಾ ಹೇಳಿದ್ದರು.

  ಈಗ ಸಚಿನ್​ ಪೈಲಟ್​ ಅವರು ಕಾಂಗ್ರೆಸ್ ಶಾಸಕ ಗಿರಿರಾಜ್​ ಸಿಂಗ್​ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ವಕೀಲರ ಮೂಲಕ ಲೀಗಲ್ ನೋಟಿಸ್ ನೀಡಿದ್ದಾರೆ.

  ಸುಳ್ಳು ಹಾಗೂ ಹುರುಳಿಲ್ಲದ ಆರೋಪ ಮಾಡಿರುವ ಎಂಎಲ್​ಎ ಗಿರಿರಾಜ್ ಸಿಂಗ್​ ಅವರು ಇನ್ನು ಏಳು ದಿನಗಳ ಒಳಗೆ ಲಿಖಿತ ಕ್ಷಮಾಪಣೆ ಪತ್ರದೊಂದಿಗೆ 1 ರೂ.ಪಾವತಿಸಬೇಕು. ಕ್ಷಮೆ ಕೇಳಿದ ಪತ್ರವನ್ನು ಮಾಧ್ಯಮದ ಎದುರು ಪ್ರಸ್ತುತ ಪಡಿಸಬೇಕು ಎಂದು ಸಚಿನ್ ಪೈಲಟ್​ ಕಳಿಸಿದ ನೋಟಿಸ್​ನಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ನಟ ದರ್ಶನ್​, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರ ವಿರುದ್ಧ ಹೈಕೋರ್ಟ್​ಗೆ ದೂರು!

  ಒಂದೊಮ್ಮೆ ನೋಟಿಸ್​ನಲ್ಲಿ ಹೇಳಲಾಗಿದ್ದನ್ನು ಗಿರಿರಾಜ್​ ಅವರು ಕಾರ್ಯರೂಪಕ್ಕೆ ತರದೆ ಇದ್ದಲ್ಲಿ, ಅವರ ವಿರುದ್ಧ ಕ್ರಿಮಿನಲ್​ ಮತ್ತು ಸಿವಿಲ್​ ಕೇಸ್ ದಾಖಲಿಸಲಾಗುವುದು ಎಂದು ಹೇಳಲಾಗಿದೆ.

  ಗಿರಿರಾಜ್​ ಸಿಂಗ್ ಮಾಲಿಂಗಾ ಅವರು ಮೊನ್ನೆ ಆರೋಪ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಸಚಿನ್​ ಪೈಲಟ್​, ಇಂಥ ಆರೋಪಗಳನ್ನು ಇನ್ನು ಮುಂದೆ ನನ್ನ ವಿರುದ್ಧ ಪದೇಪದೆ ಮಾಡಲಾಗುತ್ತದೆ. ಆದರೆ ಇದು ಸುಳ್ಳು ಆರೋಪ. ನಾನು ಗಿರಿರಾಜ್​ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು.(ಏಜೆನ್ಸೀಸ್​)

  ರಾಜ್ಯದಲ್ಲಿ ಹೊಸ ದಾಖಲೆ ಬರೆದ ಸೋಂಕಿತರ ಸಂಖ್ಯೆ; ಕೋವಿಡ್​ ಸಾವು ನಿಯಂತ್ರಣ; ಹೊಸ ಪ್ರಕರಣಕ್ಕಿಲ್ಲ ಕಡಿವಾಣ

  See also  ಹಿಟ್​ಮ್ಯಾನ್​ ರೋಹಿತ್​ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಹಾರ್ದಿಕ್: ಮುಂಬೈ ಇಂಡಿಯನ್ಸ್ ಫ್ಯಾನ್ಸ್​ ಶಾಕ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts