More

    ಸ್ನಾತಕೋತ್ತರ ಪದವೀಧರರಿಗೆ ಭರ್ಜರಿ ಆಫರ್​, ಶಿಕ್ಷಣ ಸಚಿವಾಲಯದ ಓಪನ್ ಸ್ಕೂಲ್‍ನಲ್ಲಿ ಅವಕಾಶ

    ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಸ್ವಾಯತ್ತ ಸಂಸ್ಥೆಯಾಗಿರುವ ನೋಯ್ಡಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್​ ಓಪನ್ ಸ್ಕೂಲ್‍ನಲ್ಲಿ (ಎನ್‍ಐಒಎಸ್) ಒಪ್ಪಂದದ ಆಧಾರದ ಮೇಲೆ ಹಲವು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಒಟ್ಟು ಹುದ್ದೆಗಳು: 24
    ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ಮೂಲ ದಾಖಲೆಗಳ ಜತೆ ಅಧಿಸೂಚನೆ ಜತೆ ನೀಡಲಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸತಕ್ಕದ್ದು.

    ಹುದ್ದೆ ವಿವರ
    * ಕನ್ಸಲ್ಟಂಟ್ – 9
    (ಓಪನ್ ಬೇಸಿಕ್ ಎಜುಕೇಷನ್ – 1, ಅಕಾಡೆಮಿಕ್ ಅಡ್ಮಿನಿಸ್ಟ್ರೇಷನ್ ಆ್ಯಂಡ್ ಆಡಿಟ್-1, ಐಸಿಟಿ-2, ಎನ್‍ಇಪಿಐಎ ಪ್ರಾಜೆಕ್ಟ್-1, ಸಿಂಧಿ ಭಾಷೆ-1, ಟೀಚರ್ ಎಜುಕೇಷನ್-2, ಸ್ಪೆಷಲ್ ಎಜುಕೇಷನ್-1)
    * ಸೀನಿಯರ್ ಎಕ್ಸಿಕ್ಯೂಟೀವ್ ಆಫೀಸರ್ – 15
    (ಸೈನ್ ಲ್ಯಾಂಗ್ವೇಜ್ – 3, ಭಾರತೀಯ ಜ್ಞಾನ ಪರಂಪರೆ -1, ಫಿಜಕ್ಸ್-1, ಕೆಮಿಸ್ಟ್ರಿ-1, ಪೆÇಲಿಟಿಕಲ್ ಸೈನ್ಸ್-1, ಎಕನಾಮಿಕ್ಸ್-1, ಸೈಕಾಲಜಿ-1, ಹೋಮ್ ಸೈನ್ಸ್-1, ಮಾಸ್ ಕಮ್ಯುನಿಕೇಷನ್-1, ಲಿಂಗ್ವಿಸ್ಟಿಕ್ಸ್ ಆ್ಯಂಡ್ ಇಂಗ್ಲಿಷ್ ಲಾಂಗ್ವೇಜ್-1, ಓಪನ್ ಬೇಸಿಕ್ ಎಜುಕೇಷನ್-1, ಸಂಗೀತ್-1, ಗ್ರಾಫಿಕ್ ಆರ್ಟಿಸ್ಟ್-1)

    ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಬಿಇ, ಬಿಟೆಕ್, ಇತರ ಪದವಿ, ಹುದ್ದೆಗೆ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ, ಎಂಕಾಂ ಮಾಡಿರಬೇಕು. ಪದವಿಗಳಲ್ಲಿ ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಕನಿಷ್ಠ 2 ವರ್ಷದ ವೃತ್ತಿ ಅನುಭವ ಹೊಂದಿದ್ದು, ಕನ್ನಡ ಮತ್ತು ಹಿಂದಿ ಭಾಷಾ ಜ್ಞಾನ ಅವಶ್ಯ.

    ವೇತನ: ಕನ್ಸಲ್ಟಂಟ್ ಹುದ್ದೆಗೆ ಮಾಸಿಕ 51,000 ರೂ., ಸೀನಿಯರ್ ಎಕ್ಸಿಕ್ಯೂಟೀವ್ ಆಫೀಸರ್‍ಗೆ ಮಾಸಿಕ 33,000 ರೂ. ವೇತನ ಇದೆ.

    ನೇರ ಸಂದರ್ಶನ ನಡೆಯುವ ದಿನಾಂಕ: 2021ರ ಮಾ.10 ಮತ್ತು 11ರಂದು ಬೆಳಗ್ಗೆ 9 ಗಂಟೆಯಿಂದ.
    ಸಂದರ್ಶನ ನಡೆಯುವ ಸ್ಥಳ: ಘೆಐuಖ ಏಕಿo, ಅ24 25, ಖಛ್ಚಿಠಿಟ್ಟ62, ಘೆuಐಈಅ201309 (ಖಿ.P.)

    ಅಧಿಸೂಚನೆಗೆ: https://bit.ly/3qh37nt
    ಮಾಹಿತಿಗೆ: http://www.nios.ac.in

    ಸಹಕಾರ ಗ್ರಾಹಕರ ಮಹಾಮಂಡಳದಲ್ಲಿ ಗುಮಾಸ್ತ, ಲೆಕ್ಕಿಗ, ಬೆರಳಚ್ಚುಗಾರ… ಇತ್ಯಾದಿ ಹುದ್ದೆಗಳು ಖಾಲಿ

    ಎಸ್​ಎಸ್​ಎಲ್​ಸಿಯಾದ ಮಹಿಳೆಯರಿಗೆ ಗುಡ್​ನ್ಯೂಸ್​: 159 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಉನ್ನತ ಪದವೀಧರರಿಗೆ ಉದ್ಯೋಗ: 89 ಹುದ್ದೆಗಳು ಖಾಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts