More

    ಎಸ್​ಎಸ್​ಎಲ್​ಸಿ ಕಲಿತವರಿಗೂ ಗುಡ್​ನ್ಯೂಸ್​: ಬೆಂಗಳೂರಿನ ಮಿಲಿಟರಿ ಶಾಲೆಯಲ್ಲಿದೆ ಉದ್ಯೋಗ

    ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಿಲಿಟರಿ ಸ್ಕೂಲ್‍ನಲ್ಲಿ ಗ್ರೂಪ್ ಸಿ ವರ್ಗದ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿರುವುದಾಗಿ ಶಾಲಾ ಆಡಳಿತ ಮಂಡಳಿ ಅಧಿಸೂಚನೆ ಹೊರಡಿಸಿದೆ. ಒಟ್ಟು ಹುದ್ದೆಗಳು: 16

    ರಾಷ್ಟ್ರೀಯ ಮಿಲಿಟಿರಿ ಸ್ಕೂಲ್‍ನಲ್ಲಿ ಬೋಧಕೇತರ ಹುದ್ದೆಗಳಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 10 ಸ್ಥಾನ, ಎಸ್ಸಿಗೆ 2, ಎಸ್ಟಿಗೆ 1, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 2, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 1 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಹುದ್ದೆ, ಸಂಖ್ಯೆ ವಿವರ
    * ಗುಮಾಸ್ತ- (ಎಲ್‍ಡಿಸಿ) – 3
    * ಲ್ಯಾಬ್ ಅಟೆಂಡೆಂಟ್ – 1
    * ಪ್ಯೂನ್- 2
    * ಮಾಲಿ – 1
    * ವಾಚ್‍ಮೆನ್ – 3
    * ಸಾಯಿವಾಲಾ- 4
    * ವಾಷರ್‍ಮನ್ – 1
    * ಟೇಬಲ್ ವೇಟರ್ – 1

    ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಪಿಯುಸಿ ಅಥವಾ ತತ್ಸಮಾನ ಶಿಕ್ಷಣ. ಎಲ್‍ಡಿಸಿ ಹುದ್ದೆಗೆ ಇಂಗ್ಲಿಷ್ ಟೈಪಿಂಗ್ ತಿಳಿದಿರಬೇಕು.

    ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

    ವೇತನ: ಎಲ್‍ಡಿಸಿ ಹುದ್ದೆಗೆ ವೇತನ ಶ್ರೇಣಿ 2ರ ಅನ್ವಯ ಮಾಸಿಕ 19,900 ರೂ.ನಿಂದ 63,200 ರೂ. ಇದ್ದು, ಉಳಿದ ಹುದ್ದೆಗಳಿಗೆ ವೇತನ ಶ್ರೇಣಿ 1ರ ಅನ್ವಯ ಮಾಸಿಕ 18,000 ರೂ.ನಿಂದ 56,900 ರೂ. ಇದೆ.

    ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯು ಬೆಂಗಳೂರಿನ ಮಿಲಿಟರಿ ಶಾಲೆಯಲ್ಲಿ ಮಾರ್ಚ್ 21ರಂದು ನಡೆಯಲಿದೆ. ಲಿಖಿತ ಪರೀಕ್ಷೆಯಲ್ಲಿ ಜನರಲ್ ಇಂಟೆಲಿಜೆನ್ಸ್, ಸಾಮಾನ್ಯ ಜ್ಞಾನ, ನ್ಯೂಮೆರಿಕಲ್ ಆಪ್ಟಿಟ್ಯೂಡ್, ಇಂಗ್ಲಿಷ್ ಭಾಷೆ ಸಂಬಂಧಿತ ಪ್ರಶ್ನೆಗಳಿರುತ್ತವೆ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಇತರ ಹಿಂದುಳಿದ ವರ್ಗ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ಮಿಲಿಟರಿ ಸ್ಕೂಲ್ ಬೆಂಗಳೂರು ಹೆಸರಿಗೆ ಕ್ರಾಸ್ ಮಾಡಿದ 50 ರೂ. ಮೌಲ್ಯದ  ಪೋಸ್ಟಲ್​ ಆರ್ಡರ್ ಅನ್ನು ಸಲ್ಲಿಸಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ: ಅಧಿಸೂಚನೆ ಹೊರಡಿಸಿದ 45 ದಿನ ಒಳಗೆ ಅರ್ಜಿ ಸಲ್ಲಿಸತಕ್ಕದ್ದು.

    ಅರ್ಜಿ ಸಲ್ಲಿಸುವ ವಿಳಾಸ: http://The Principal, Rashtriya Military School Bengaluru, Bengaluru- 560025
    ಅಧಿಸೂಚನೆಗೆ: https://bit.ly/3i8kvYS
    ಮಾಹಿತಿಗೆ: https://www.rashtriyamilitaryschools.edu.in

    ಹೆಚ್ಚಿನ ಉದ್ಯೋಗ ಮಾಹಿತಿಗೆ ನೋಡಿ  https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಫರ್ಟಿಲೈಸರ್ಸ್ ಸಂಸ್ಥೆಗೆ ಬೇಕಾಗಿದ್ದಾರೆ ಅಟೆಂಡೆಂಟ್ಸ್- ಎಸ್‌ಎಸ್‌ಎಲ್‌ಸಿ ಆದವರಿಗೂ ಇದೆ ಅವಕಾಶ

    ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ ಹುದ್ದೆಗಳು: ಪದವೀಧರರಿಗೂ ಸಿಗಲಿದೆ ಅವಕಾಶ

    ಅಂಚೆ ಕಚೇರಿಯಲ್ಲಿವೆ ಡಾಕ್ ಸೇವಕ್‌ ಹುದ್ದೆಗಳು: ಎಸ್‌ಎಸ್‌ಎಲ್‌ಸಿ ಆದವರಿಗೂ ಅವಕಾಶ

    ಸಿಮೆಂಟ್ ಕಾರ್ಪೋರೇಷನ್​ನಲ್ಲಿ ಅಪ್ರೆಂಟೀಸ್‍ಗಳ ನೇಮಕ – 100 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts