More

    ಲೋಕಸಭಾ ಸಚಿವಾಲಯದಲ್ಲಿ ಸಮಾಲೋಚಕರ ನೇಮಕ- 11 ಹುದ್ದೆಗಳಿಗೆ ಆಹ್ವಾನ

    ಲೋಕಸಭಾ ಸಚಿವಾಲಯದಲ್ಲಿ ಕನ್ಸಲ್ಟಂಟ್​ (ಸಮಾಲೋಚಕ) ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಲೋಕಸಭಾ ಕಾರ್ಯದರ್ಶಿ ಕಚೇರಿಯ ಪಿಪಿಆರ್​ ವಿಂಗ್​ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಮಾಧ್ಯಮ ಮತ್ತು ಸಂವಹನ ಟಕದಲ್ಲಿ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
    ಆಯ್ಕೆಯಾದ ಅಭ್ಯರ್ಥಿಗಳು ಲೋಕಸಭೆಯಲ್ಲಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ಇತರ ಕೆಲಸ ಮಾಡಲು ಅನುಮತಿ ಇರುವುದಿಲ್ಲ. ಅಭ್ಯರ್ಥಿಗಳನ್ನು ಪೂರ್ಣಾವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಯು ಒಂದು ವರ್ಷದ ಅವಧಿಗೆ ಒಳಪಟ್ಟಿದ್ದು, ನಂತರ ಅಭ್ಯಥಿರ್ಯ ಕಾರ್ಯಕ್ಷಮತೆ ಇಷ್ಟವಾದಲ್ಲಿ ಮತ್ತೆ 2 ವರ್ಷ ಅವಧಿ ವಿಸ್ತರಿಸಲಾಗುವುದು.

    ಹುದ್ದೆ ವಿವರ
    * ಸೋಷಿಯಲ್​ ಮೀಡಿಯಾ ಮಾರ್ಕೇಟಿಂಗ್​ (ಹಿರಿಯ ಹಾಗೂ ಕಿರಿಯ ಸಮಾಲೋಚಕರು) – 2
    * ಸೀನಿಯರ್​ ಕಂಟೆಂಟ್​ ರೈಟರ್​/ ಮೀಡಿಯಾ ಅನಾಲಿಸ್ಟ್​ (ಹಿಂದಿ) – 1
    * ಜೂನಿಯರ್​ ಕಂಟೆಂಟ್​ ರೈಟರ್​ (ಹಿಂದಿ ಹಾಗೂ ಇಂಗ್ಲಿಷ್​) – 2
    * ಸೋಷಿಯಲ್​ ಮೀಡಿಯಾ ಮಾರ್ಕೆಟಿಂಗ್​ (ಜೂನಿಯರ್​ ಅಸೋಸಿಯೇಟ್​) – 5
    * ಮ್ಯಾನೇಜರ್​ (ಇವೆಂಟ್ಸ್​) – 1

    ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 22 ರಿಂದ 58 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ಜವಾಬ್ದಾರಿಗಳೇನು?
    ಭಾಷಣಗಳು, ಭಾಷಣದಲ್ಲಿನ ಪ್ರಮುಖ ಅಂಶಗಳ ಪಟ್ಟಿ, ಸಂದೇಶಗಳನ್ನು ನೋಟ್​ ಮಾಡಿಕೊಳ್ಳುವುದು, ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ಹಾಗೂ ಲೋಕಸಭೆಗೆ ಸಂಬಂಧಿಸಿದ ಇತರ ಕೆಲಸಗಳನ್ನು ನೋಡಿಕೊಳ್ಳುವುದು ಸಮಾಲೋಚಕರ ಜವಾಬ್ದಾರಿಯಾಗಿರುತ್ತದೆ.

    ಶೈಕ್ಷಣಿಕ ಅರ್ಹತೆ: ಹೋಟೆಲ್​ ಮ್ಯಾನೇಜ್​ಮೆಂಟ್​/ ಇವೆಂಟ್​ ಮ್ಯಾನೇಜ್​ಮೆಂಟ್​ನಲ್ಲಿ 3 ವರ್ಷದ ಡಿಪ್ಲೊಮಾ/ ಪದವಿ/ ಸ್ನಾತಕೋತ್ತರ ಪದವಿ, ಬಿಜಿನೆಸ್​ ಮ್ಯಾನೇಜ್ಮೆಂಟ್​, ಮಾರ್ಕೇಟಿಂಗ್​, ರ್ಜನಲಿಸಂ, ಪಬ್ಲಿಕ್​ ರಿಲೇಷನ್​, ರಾಜ್ಯಶಾಸ್ತ್ರ/ ಕಾನೂನು, ಹಿಂದಿ ಭಾಷೆ ಅಥವಾ ಯಾವುದೇ ತತ್ಸಮಾನ ಪದವಿ ಪಡೆದಿದ್ದು, ಕನಿಷ್ಠ ವೃತ್ತಿ ಅನುಭವ, ಕಂಪ್ಯೂಟರ್​ ಜ್ಞಾನ ಕೇಳಲಾಗಿದೆ.

    ವೇತನ: ಸೀನಿಯರ್​ ಕನ್ಸಲ್ಟಂಟ್​ಗೆ ಮಾಸಿಕ 65,000 ರೂ., ಸೀನಿಯರ್​ ಕಂಟೆಂಟ್​ ರೈಟರ್​ಗೆ ಮಾಸಿಕ 45,000 ರೂ., ಮ್ಯಾನೇಜರ್​ಗೆ ಮಾಸಿಕ 50,000 ರೂ., ಜೂನಿಯರ್​ ಅಸೋಸಿಯೇಟ್​ಗೆ ಮಾಸಿಕ 30,000 ರೂ., ಉಳಿದ ಹುದ್ದೆಗಳಿಗೆ ಮಾಸಿಕ 35.000 ರೂ. ವೇತನ ಇದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 11.10.2021
    ಅರ್ಜಿ ಸಲ್ಲಿಕೆ ವಿಳಾಸ: Administration Branch-I, Room No. 619, Lok Sabha Secretariat, Parliament House Annexe, New Delhi – 110001


    ಅಧಿಸೂಚನೆಗೆ: https://bit.ly/3lP7B4y
    ಮಾಹಿತಿಗೆ:http://loksabhadocs.nic.in

    ಬೆಂಗಳೂರು ಅಂಗನವಾಡಿಯಲ್ಲಿ ಭರಪೂರ ಉದ್ಯೋಗಾವಕಾಶ: 357 ಹುದ್ದೆಗಳಿಗೆ ಆಹ್ವಾನ

    ಹೆಸ್ಕಾಂನಲ್ಲಿ ಡಿಪ್ಲೊಮಾ, ಪದವೀಧರರಿಗೆ ತರಬೇತಿ- 200 ಮಂದಿಗೆ ಅವಕಾಶ- 7 ಸಾವಿರ ರೂ. ಸ್ಟೈಪೆಂಡ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts