More

    ಕೇಂದ್ರ ಸರ್ಕಾರಿ ಇಲಾಖೆಯಲ್ಲಿ ಬೋಧಕ, ಬೋಧಕೇತರ 20 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಂಗವಿಕಲರ ಸಬಲೀಕರಣ ಇಲಾಖೆಯ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಎಂಪವರ್​ವೆುಂಟ್ ಆಫ್ ಪರ್ಸನ್ಸ್ ವಿತ್ ಇಂಟೆಲೆಕ್ಚುವಲ್ ಡಿಸಬಲಿಟೀಸ್​ನ ಸಿಕಂದರಾಬಾದ್, ನೋಯ್ಡಾ, ಸಿಆರ್​ಸಿ ದಾವಣಗೆರೆ, ಆಂಧ್ರಪ್ರದೇಶ, ಛತ್ತೀಸ್​ಗಢ್​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

    ಘಟಕವಾರು ಹುದ್ದೆಗಳ ವಿವರ (ತಲಾ ಒಂದು ಸ್ಥಾನ)

    – ಎನ್​ಐಇಪಿಐಡಿ ಸಿಕಂದರಾಬಾದ್: * ಪುನರ್ವಸತಿ ಮನೋವಿಜ್ಞಾನದಲ್ಲಿ ಉಪನ್ಯಾಸಕ * ವೃತ್ತಿಪರ ಸಮಾಲೋಚನೆ ಮತ್ತು ಉದ್ಯೋಗದಲ್ಲಿ ಉಪನ್ಯಾಸಕ * ಕಿರಿಯ ವಿಶೇಷ ಶಿಕ್ಷಣ ಶಿಕ್ಷಕ *ಸ್ಟೆನೋಗ್ರಫರ್

    – ಎಂಎಸ್​ಇಸಿ ನೋಯ್ಡಾ: * ಪ್ರಾಂಶುಪಾಲ

    – ಸಿಆರ್​ಸಿ ದಾವಣಗೆರೆ: * ಸಹಾಯಕ ಪ್ರಾಧ್ಯಾಪಕ * ಓರಿಯೆಂಟೇಷನ್ ಆಂಡ್ ಮೊಬಿಲಿಟಿ ಇನ್​ಸ್ಟ್ರಕ್ಟರ್

    – ಸಿಆರ್​ಸಿ ನೆಲ್ಲೂರು: * ನಿರ್ದೇಶಕ * ಸಹಾಯಕ ಪ್ರಾಧ್ಯಾಪಕ (ಮೆಡಿಕಲ್ ಪಿಎಂಆರ್) * ಸಹಾಯಕ ಪ್ರಾಧ್ಯಾಪಕ (ಕ್ಲಿನಿಕಲ್ ಸೈಕಾಲಜಿ) * ಆಡಳಿತಾಧಿಕಾರಿ * ಪ್ರೋಸ್ತೋಟಿಸ್ಟ್ ಆಂಡ್ ಆಥೋಟಿಸ್ಟ್ * ಕ್ಲಿನಿಕಲ್ ಅಸಿಸ್ಟೆಂಟ್ * ಸ್ಪೆಷಲ್ ಎಜುಕೇಟರ್ಸ್ * ವರ್ಕ್​ಶಾಪ್ ಸೂಪರ್​ವೈಸರ್-ಕಂ ಸ್ಟೋರ್ ಕೀಪರ್ * ಕ್ಲರ್ಕ್

    – ಸಿಆರ್​ಸಿ ರಾಜ್​ನಂದಗಾವ್: * ಸಹಾಯಕ ಪ್ರಾಧ್ಯಾಪಕ (ಮೆಡಿಕಲ್) * ಸ್ಪೆಷಲ್ ಎಜುಕೇಟರ್/ ಓರಿಯೆಂಟೇಷನ್ ಮೊಬಿಲಿಟಿ ಇನ್​ಸ್ಟ್ರಕ್ಟರ್ * ಪ್ರೋಸ್ತೋಟಿಸ್ಟ್ ಆಂಡ್ ಆಥೋಟಿಸ್ಟ್ * ರಿಹ್ಯಬಿಲಿಟೇಷನ್ ಅಧಿಕಾರಿ

    ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ (ಟೈಪ್​ರೈಟಿಂಗ್, ಶಾರ್ಟ್​ಹ್ಯಾಂಡ್), ದ್ವಿತೀಯ ಪಿಯುಸಿ, ಓರಿಯೆಂಟೇಷನ್ ಆಂಡ್ ಮೊಬಿಲಿಟಿಯಲ್ಲಿ ಡಿಪ್ಲೊಮಾ, ಸ್ಪೆಷಲ್ ಎಜುಕೇಷನ್​ನಲ್ಲಿ ಪದವಿ ಜತೆ ಡಿಪ್ಲೊಮಾ, ಮೆಟಿರಿಯಲ್ ಮ್ಯಾನೇಜ್​ವೆುಂಟ್​ನಲ್ಲಿ ಡಿಪ್ಲೊಮಾ ಜತೆ ಪದವಿ, ಬಿಎಸ್ಸಿ, ಪ್ರೋಸ್ತೋಟಿಸ್ಟ್ /ಆಥೋಟಿಸ್ಟ್ ಪದವಿ, ಸೋಷಿಯಲ್ ವರ್ಕ್/ ರಿಹ್ಯಾಬಿಲಿಟೇಷನ್ ವರ್ಕ್/ ಸೋಷಿಯಾಲಜಿ/ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಎಂಬಿಬಿಎಸ್, ಎಂಬಿಎ, ಎಂಫಿಲ್, ಎಂ.ಇಡಿ, ಪಿಎಚ್.ಡಿ

    ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 28 ರಿಂದ 45 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಮಹಿಳಾ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಅನ್ನು ಡಿಡಿ ಮೂಲಕ ಸಲ್ಲಿಸಬೇಕು.

    ವೇತನ: ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿ 4 ರಿಂದ 12ರ ವರೆಗೆ ವೇತನ ನೀಡಲಾಗುವುದು.

     ಅರ್ಜಿ ಸಲ್ಲಿಸಲು ಕೊನೇ ದಿನ: 23.8.2021

    ಅರ್ಜಿ ಸಲ್ಲಿಕೆ ವಿಳಾಸ: Director, NIEPID, Manovikasnagar, Secunderabad-500009
    ಅಧಿಸೂಚನೆಗೆ: https://bit.ly/3742FSf
    ಮಾಹಿತಿಗೆ : http://www.niepid.nic.in

    ವಿಜ್ಞಾನ ಪದವೀಧರರಿಗೆ ಕೇಂದ್ರದ ಜವಳಿ ಸಚಿವಾಲಯದ ಎನ್​ಐಎಫ್​ಟಿಯಲ್ಲಿ ಉದ್ಯೋಗಾವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts