More

    ಟೆಸ್ಲಾ ಇಲೆಕ್ಟ್ರಿಕ್‌ ಕಾರು ಭಾರತಕ್ಕೆ: ಎಲಾನ್‌ ಮಸ್ಕ್‌ ಮನವಿ ತಿರಸ್ಕರಿಸಿದ ಕೇಂದ್ರ ಸರ್ಕಾರ- ಕಾರಣ ಇಲ್ಲಿದೆ…

    ನವದೆಹಲಿ: ತೆಲಂಗಾಣ, ಮಹಾರಾಷ್ಟ್ರ ತಮಿಳುನಾಡು, ಪಂಜಾಬ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಉದ್ಯಮಿ ಎಲಾನ್ ಮಸ್ಕ್‌ಗೆ ತಮ್ಮ ರಾಜ್ಯಗಳಲ್ಲಿ ಟೆಸ್ಲಾ ಕಾರು ಘಟಕ ಆರಂಭಿಸುವಂತೆ ಆಹ್ವಾನ ನೀಡಿದ್ದವು. ಐದು ರಾಜ್ಯಗಳು ಆಹ್ವಾನ ನೀಡಿದ ಒಂದು ವಾರದ ಬಳಿಕ ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿ ಮರುಗೇಶ್ ನಿರಾಣಿ ಎಲಾನ್ ಮಸ್ಕ್‌ಗೆ ಅಹ್ವಾನ ನೀಡಿದ್ದರು. ಆದರೆ ಇದೀಗ ಇಲೆಕ್ಟ್ರಿಕ್‌ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ತೆರಿಗೆ ವಿನಾಯಿತಿ ಕೋರಿದ್ದ ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

    ಇದರಿಂದ ಟೆಸ್ಲಾ ಭಾರತದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ತನ್ನ ಕಾರ್ಯವನ್ನು ಆರಂಭಿಸಬಹುದು ಎಂದು ಅಂದುಕೊಂಡವರಿಗೆ ನಿರಾಸೆಯಾಗಿದೆ. ಅಷ್ಟಕ್ಕೂ ಕೇಂದ್ರ ಸರ್ಕಾರ ಈ ರೀತಿ ಮಾಡಲು ಕಾರಣ, ಪ್ರಸ್ತುತ ಜಾರಿಯಲ್ಲಿರುವ ನಿಯಮ. ಹಾಲಿ ಇರುವ ನಿಯಮಗಳ ಅನ್ವಯ ಭಾಗಶಃ ನಿರ್ಮಿತ ವಾಹನಗಳನ್ನು ತಂದು ಭಾರತದಲ್ಲಿ ಜೋಡಿಸಬಹುದಷ್ಟೇ. ಆದರೆ ಬೇರೆಡೆ ತಯಾರಾದ ವಾಹನವನ್ನು ದೇಶದಲ್ಲಿ ಮಾರಾಟ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಎಲಾನ್‌ ಮಸ್ಕ್‌ ಮನವಿ ತಿರಸ್ಕರಿಸಲಾಗಿದೆ.

    ಎಲಾನ್‌ ಮಸ್ಕ್‌ ತಮ್ಮ ದೇಶದಲ್ಲಿ ಇಲೆಕ್ಟ್ರಿಕ್‌ ಕಾರನ್ನು ತಯಾರಿಸಿ, ಅದನ್ನು ಆಮದು ಮಾಡಿಕೊಂಡ ಭಾರತವು ಇಲೆಕ್ಟ್ರಾನಿಕ್‌ ವಾಹನಗಳ ಮೇಲೆ ಶೇ.100ರಷ್ಟುಇರುವ ತೆರಿಗೆಯನ್ನು ಕಡಿಮೆ ಮಾಡಬೇಕು ಎಂದು ಕೋರಿದ್ದರು. ಆದರೆ ಇದರಿಂದ ದೇಶಿಯ ಉತ್ಪಾದನೆಗೆ ಹೊಡೆತ ಬೀಳಲಿದೆ. ಇಲೆಕ್ಟ್ರಿಕ್‌ ವಾಹನಗಳನ್ನು ಸ್ಥಳೀಯವಾಗಿ ಉತ್ಪಾದನೆ ಆರಂಭಿಸಲು ಕೇಂದ್ರ ಸರ್ಕಾರ ಉತ್ತೇಜಿಸುತ್ತದೆಯೇ ವಿನಾ, ಬೇರೆ ದೇಶಗಳಲ್ಲಿ ವಾಹನ ಉತ್ಪಾದನೆ ಮಾಡಿ ಈ ಮೂಲಕ ಕಡಿಮೆ ತೆರಿಗೆಯ ಸೌಲಭ್ಯ ಪಡೆಯುವುದು ಸಾಧ್ಯವಿಲ್ಲ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿಯ ಅಧ್ಯಕ್ಷ ವಿವೇಕ್‌ ಜೋಹ್ರಿ ಹೇಳಿದ್ದಾರೆ.

    ಇಲೆಕ್ಟ್ರಿಕ್‌ ವಾಹನಗಳಿಗಾಗಿ ಸ್ಥಳೀಯ ಉತ್ಪಾದನಾ ಘಟಕಗಳನ್ನು ನಿರ್ಮಿಸುತ್ತಿರುವ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್‌ನಂತಹ ದೇಶೀಯ ಕಂಪನಿಗಳ ನಡೆಯನ್ನು ಟೆಸ್ಲಾ ಅನುಸರಿಸಬೇಕು. ಭಾರತಕ್ಕೆ ಆಮದು ಮಾಡಿಕೊಳ್ಳುವ ಬಿಡಿ ಭಾಗಗಳ ಮೇಲೆ ಶೇ.15-30ರ ನಡುವೆ ಆಮದು ಸುಂಕ ಇದೆ. ಸ್ಥಳೀಯ ಉತ್ಪಾದನೆ ಮತ್ತು ಭಾರತದಿಂದ ಬಿಡಿಭಾಗಗಳನ್ನು ಖರೀದಿಸುವ ಬಗ್ಗೆ ಯಾವುದೇ ಬಗ್ಗೆ ಸರ್ಕಾರ ಕೇಳಿತ ನಂತರವೂ ಟೆಸ್ಲಾ ತನ್ನ ಯೋಜನೆಯ ಬಗ್ಗೆ ಏನೂ ಹೇಳಿಲ್ಲ’ ಎಂದು ಜೋಹ್ರಿ ಸ್ಪಷ್ಟಪಡಿಸಿದ್ದಾರೆ.

    ಆಫೀಸ್ ಕೆಲಸದ ಮೇಲೆ ಹೊರ ಹೋದಾಗಲೆಲ್ಲ ಅರಳುತ್ತಿದ್ದ ಗಂಡನ ಮುಖ: ಪತ್ನಿಗೆ ಬಂತು ಡೌಟ್‌- ಈಗ ಕಂಬಿ ಹಿಂದೆ ಪತಿ!

    ಉಪನ್ಯಾಸಕನ ಹುದ್ದೆ ಕೊಡಿಸ್ತೇನೆಂದು ಯುವಕನ ಬಟ್ಟೆ ಬಿಚ್ಚಿ ಯುವತಿ ಜತೆ ಮಲಗಿಸಿದರು! ಶಿರಸಿಯಲ್ಲೊಂದು ಭಯಾನಕ ಕೃತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts