More

    ನೂತನ ಸಿಎಂ ಪ್ರಮಾಣ ವಚನದ ದಿನ ಅಚ್ಚರಿಯ ಘಟನೆ: 7 ವರ್ಷಗಳಿಂದ ಕಾಣೆಯಾಗಿದ್ದ ಮಗ ಪಾಲಕರಿಗೆ ಸಿಕ್ಕ!

    ಖಟ್ಕರ್ ಕಲಾನ್‌ (ಪಂಜಾಬ್​): ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ (ಆಪ್​) ಭರ್ಜರಿ ಗೆಲುವು ಸಾಧಿಸಿ, ಪಕ್ಷದ ಭಗವಂತ್​​​ ಮಾನ್​​ ಸಿಂಗ್​​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದು ಆಪ್​ ಅಭಿಮಾನಿಗಳಿಗೆ ಐತಿಹಾಸಿಕ ದಿನವಾಗಿದ್ದರೂ, ಭಾವನಾತ್ಮಕ ಕ್ಷಣಕ್ಕೂ ಈ ದಿನ ಕಾರಣವಾಯಿತು. ಅದೇನೆಂದರೆ ಏಳು ವರ್ಷಗಳಿಂದ ಬೇರ್ಪಟ್ಟ ಮಗನೊಬ್ಬ ಮನೆಯನ್ನು ಸೇರಿದ ದಿನವಿದು!

    ಏಳು ವರ್ಷಗಳ ಹಿಂದೆ ಕಾಣೆಯಾಗಿದ್ದ ಫರೀದ್ಕೋಟ್​​ ಜಿಲ್ಲೆಯ ಶೇರ್​ ಸಿಂಗ್​ ವಾಲಾ ಗ್ರಾಮದ ನಿವಾಸಿ ಜಸ್ವಿಂದರ್​​ ಸಿಂಗ್ ಮಾನ್​ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದಾಗಿ ತಮ್ಮ ಹೆತ್ತವರನ್ನು ಸೇರಿದ್ದಾರೆ. ಏಳು ವರ್ಷಗಳವರೆಗೆ ಮಗನನ್ನು ಕಾಣದೇ ಕಂಗೆಟ್ಟಿದ್ದ ಅಪ್ಪ-ಅಮ್ಮನ ಹರ್ಷವನ್ನು ಕಂಡು ಅಲ್ಲಿದ್ದವರೂ ಕಣ್ಣೀರಾಗಿದ್ದಾರೆ.

    ಏನಿದು ಘಟನೆ?
    ಸೇನಾ ನೇಮಕಾತಿ ತಯಾರಿ ನಡೆಸಲು 2015ರಲ್ಲಿ ಜಸ್ವಿಂದರ್​ ಮನೆಯಿಂದ ಹೋಗಿದ್ದರು. ಆದರೆ ಅವರು ವಾಪಸ್ ಬರಲೇ ಇಲ್ಲ. ನಿಗೂಢವಾಗಿ ನಾಪತ್ತೆಯಾಗಿದ್ದರು. ಮಗನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರೂ ಯಾವುದೇ ಫಲ ಕೊಟ್ಟಿರಲಿಲ್ಲ.

    ಇದೀಗ ಭಗವಂತ್ ಮಾನ್​ ಅವರ​ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆ ಸಮಯದಲ್ಲಿ ಜಸ್ವಿಂದರ್ ಸಿಂಗ್ ಪತ್ತೆಯಾಗಿದ್ದಾನೆ. ಆತ ಕುಟುಂಬವನ್ನು ಸೇರಿದ್ದೇ ರೋಚಕ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಜಸ್ವಿಂದರ್ ಸಿಂಗ್​​ ಟೆಂಟ್ ಕೆಲಸ ಮಾಡುತ್ತಿದ್ದ. ಈ ವೇಳೆ ಪೊಲೀಸರು ಆತನ ಗುರುತಿನ ಚೀಟಿ ಕೇಳಿದ್ದಾರೆ. ಅದು ಆತನ ಬಳಿ ಇರಲಿಲ್ಲ. ಆದ್ದರಿಂದ ಅನುಮಾನಗೊಂಡ ಪೊಲೀಸರು ಫರೀದ್ಕೋಟ್​ ಜಿಲ್ಲೆಯ ಸಾದಿಕ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದ್ದಾರೆ. ಆಗ ಆಗಿರುವ ಘಟನೆಯನ್ನು ಈತ ಹೇಳಿದ್ದಾನೆ.

    ನನಗೆ ಗೊತ್ತಿಲ್ಲದ ವ್ಯಕ್ತಿಯೋರ್ವ ಅಮೃತಸರಕ್ಕೆ ಕರೆದೊಯ್ದರು. ಟೆಂಟ್ ಮಾಲೀಕರೊಂದಿಗೆ ಕೆಲಸ ಮಾಡುವಂತೆ ಸೂಚನೆ ನೀಡಿದರು. ಆದರೆ, ಅವರು ನನಗೆ ಪೂರ್ಣವಾದ ಸಂಬಳ ನೀಡಿಲ್ಲ. ನನ್ನ ಜೊತೆ ಅನೇಕ ಹುಡುಗರು ಕೆಲಸ ಮಾಡುತ್ತಿದ್ದಾರೆ. ಮನೆಗೆ ಹೋಗಲೂ ನನಗೆ ಅನುಮತಿ ಇರಲಿಲ್ಲ ಎಂದು ಸಿಂಗ್​ ಹೇಳಿದ್ದಾನೆ. ಕೊನೆಗೆ ಆತನ ಬಳಿಯಿಂದ ಪಾಲಕರ ವಿಳಾಸ ಪಡೆದು ಅವರಿಗೆ ಮಾಹಿತಿ ನೀಡಲಾಗಿದೆ. ಏಳು ವರ್ಷಗಳ ನಂತರ ಮಗನನ್ನು ಕಂಡ ಕುಟುಂಬಸ್ಥರು ಇದು ಕನಸೋ ನನಸೋ ಎಂದು ಊಹಿಸಿಕೊಳ್ಳಲಾಗದೇ ಮೂಕವಿಸ್ಮಿತರಾಗಿದ್ದಾರೆ.

    VIDEO: ಹೀಗೆ ಹೋಗಿ ಹಾಗೆ ಬರುವಷ್ಟರಲ್ಲಿ ನವಜಾತ ಶಿಶು ಗಾಯಬ್​! ದಾವಣಗೆರೆ ಆಸ್ಪತ್ರೆಯ ಸಿಬ್ಬಂದಿಯ ಕೈವಾಡ?

    ಬಟ್ಟೆ ತೆಗೆಯದಿದ್ದರೂ, ಒಳ ಉಡುಪು ಇದ್ದಾಗ ದೌರ್ಜನ್ಯ ಎಸಗಿದರೂ ಅದು ಅತ್ಯಾಚಾರವೇ ಎಂದ ಹೈಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts