More

    ಶಾಲೆಗಳು ತೆರೆಯುವುದು ಗ್ಯಾರೆಂಟಿ- ಸೂಚನೆ ನೀಡಿದ ಶಿಕ್ಷಣ ಸಚಿವ: ನಾಳೆನೇ ಆರಂಭಿಸಿ ಎಂದ ಬಾಲಕ!

    ಹಾಸನ: ಇದಾಗಲೇ 9ನೇ ತರಗತಿಯಿಂದ ಪದವಿಯವರೆಗೆ ಭೌತಿಕ ತರಗತಿಗಳು ಆರಂಭವಾಗಿವೆ. ಆನ್‌ಲೈನ್‌ ಜತೆಗೆ ಭೌತಿಕ ತರಗತಿಗಳನ್ನೂ ಶುರು ಮಾಡಲಾಗಿದೆ.
    ಇದೀಗ 1ರಿಂದ 8ನೇ ತರಗತಿಯವರೆಗೆ ಶಾಲೆಗಳು ಓಪನ್‌ ಆಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಕುರಿತು ಅಧಿಕೃತವಾಗಿ ಆದೇಶ ಇಂದು ಹೊರಬೀಳುವ ಸಾಧ್ಯತೆ ಇದೆ.

    ಆದರೆ ಇದರ ನಡುವೆಯೇ, ಶಿಕ್ಷಣ ಸಚಿವ ಬಿ.ನಾಗೇಶ್ ಹಾಸನದ ಅರಸೀಕೆರೆಯಲ್ಲಿ ಶಾಲೆಗಳನ್ನು ತೆರೆಯುವುದು ಖಚಿತ ಎಂದು ಸೂಚನೆ ನೀಡಿದ್ದಾರೆ. ಅರಸೀಕೆರೆಯಲ್ಲಿ ಮಾತನಾಡಿದ ಸಚಿವರು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ಚರ್ಚೆ ನಡೆಯಲಿದೆ.

    ಇದಾಗಲೇ ಆರಂಭಿಸಲಾಗಿರುವ ಭೌತಿಕ ತರಗತಿಗಳ ಬಗ್ಗೆ ಅದರಲ್ಲಿ ಚರ್ಚೆ ನಡೆಯಲಿದ್ದು, ಆ ವರದಿ ಆಧಾರದ ಮೇಲೆ ಬೇರೆ ತರಗತಿ ತೆರೆಯುವ ಬಗ್ಗೆ ಆಲೋಚನೆ ಇದೆ. ಸದ್ಯ 9 ರಿಂದ 12ನೇ ತರಗತಿಯವರು ಶೇ.70 ರಷ್ಟು ಮಕ್ಕಳು ಹಾಜರಾಗಿದ್ದಾರೆ. ಎಲ್ಲಿಯೂ ಸಮಸ್ಯೆಯಾಗಿಲ್ಲ. 9 ರಿಂದ 12 ನೇ ತರಗತಿಗೆ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ. ಆ ಮಾನದಂಡದ ಆಧಾರದ ಮೇಲೆ 6 ರಿಂದ 8 ಅಥವಾ 1 ರಿಂದ 8 ನೇ ತರಗತಿ ತೆರೆಯುವ ಆಲೋಚನೆ ಮಾಡುತ್ತೇವೆ. ಆನ್‍ಲೈನ್ ಎಷ್ಟು ಕಡಿಮೆ ಸಾಧ್ಯವೋ ಅಷ್ಟು ಕಡಿಮೆ ಮಾಡುತ್ತೇವೆ ಎಂದರು.

    ಇದೇ ವೇಳೆ ಅವರು ಮಾರ್ಗಮಧ್ಯೆ, ಉದ್ಯಮಿಯಾಗಿರುವ ದತ್ತಾತ್ರೇಯ ಅವರ ಮನೆಗೆ ಶಿಕ್ಷಣ ಸಚಿವರು ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರ ಮೊಮ್ಮಗ ಶಾಲೆ ಯಾವಾಗ ಆರಂಭವಾಗುತ್ತದೆ ಎಂಬ ಬಗ್ಗೆ ಪ್ರಶ್ನಿಸಿದ್ದಾನೆ. ಆಗ ಶಾಲೆ ಯಾವಾಗ ಆರಂಭಿಸಬೇಕು ಎಂದು ಸಚಿವರು ಮರು ಪ್ರಶ್ನಿಸಿದಾಗ ಬಾಲಕ ನಾಳೆ ಎಂದು ಉತ್ತರ ಕೊಟ್ಟಿದ್ದಾನೆ. ಅದಕ್ಕೆ ಹಾಸ್ಯ ಚಟಾಕಿ ಹಾರಿಸಿದ ಸಚಿವರು, ಹೌದಾ, ನಿಜನಾ? ನಾಳೆಯೇ ಶಾಲೆ ತೆರೆದರೆ ಹೋಗುವಿಯಾ? ಎಂದು ಪ್ರಶ್ನಿಸಿದ್ದಾರೆ.

    ಪೆಟ್ರೋಲ್ ಕದ್ದಿದ್ದು ನೋಡಿದ್ದೇ ತಪ್ಪಾಯ್ತು: ಯುವಕನ ಕೊಲೆ ಮಾಡಿ ತಿಪ್ಪೆಯಲ್ಲಿ ಹೂತಿಟ್ಟ ಪಾಪಿ!

    ಕೆಲವೆಡೆ ಕಾಲಿಟ್ಟಿದೆ ಮತ್ತೊಂದು ವಿಚಿತ್ರ ಜ್ವರ: ಉ.ಪ್ರದೇಶದಲ್ಲಿ ಹಲವರ ಸಾವು! ಹಾಸಿಗೆಗಾಗಿ ಪರದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts