More

    ಅಕ್ಷಯ ತೃತೀಯಕ್ಕೆ ರೈತರಿಗೆ ಸಿಹಿ ಸುದ್ದಿ ಕೊಟ್ಟ ಪ್ರಧಾನಿ- 19 ಸಾವಿರ ಕೋಟಿ ರೂ ಖಾತೆಗೆ ವರ್ಗ

    ನವದೆಹಲಿ: ಮೇ 14 ಅಕ್ಷಯ ತೃತೀಯ. ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಈ ಅವಧಿಯಲ್ಲಿ ಶುಭ ಸುದ್ದಿ ನೀಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂಕೆಎಸ್‌ಎನ್‌ವೈ) ಎಂಟನೇ ಕಂತು ಬಿಡುಗಡೆಯಾಗಿದ್ದು, ಅದು ಶುಕ್ರವಾರ ಅರ್ಹ ರೈತರ ಖಾತೆ ಸೇರಲಿದೆ.

    ಯೋಜನೆಯ ಅಡಿಯಲ್ಲಿ 7ನೇ ಕಂತನ್ನ ಡಿಸೆಂಬರ್ 25, 2020ರಲ್ಲಿ ಬಿಡುಗಡೆ ಮಾಡಿದ್ದು ಇದನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿತ್ತು. ಇದೀಗ 8ನೇ ಕಂತಿನ ಬಿಡುಗಡೆಯಾಗಿದ್ದು, 9.5 ಕೋಟಿಗಿಂತ ಹೆಚ್ಚು ಫಲಾನುಭವಿಗಳ ಖಾತೆಯನ್ನು ಇದು ಸೇರಿಲಿದೆ.

    ಒಟ್ಟು 19 ಸಾವಿರ ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇಷ್ಟೂ ಹಣ ಅರ್ಹರಿಗೆ ಹಂಚಿಕೆಯಾಗಲಿದೆ ಎಂದು ಪ್ರಧಾನಿ ಕಾರ್ಯಾಲಯವು ತಿಳಿಸಿದೆ. ಈ ಮೂಲಕ 2021-22ರ ಆರ್ಥಿಕ ವರ್ಷದ ಪಿಎಂ ಕಿಸಾನ್ ಯೋಜನೆಯ ಮೊದಲ ಕಂತು ರೈತರನ್ನು ಸೇರಲಿದೆ.

    ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಇದು ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಕೆಲ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿರುವುದಾಗಿ ಕಚೇರಿ ಮೂಲಗಳು ಹೇಳಿವೆ.

    ಈ ಯೋಜನೆ ಅಡಿ, ಅರ್ಹ ಫಲಾನುಭವಿ ರೈತ ಕುಟುಂಬಗಳಿಗೆ ವರ್ಷಕ್ಕೆ 6000 ರೂಪಾಯಿ ಸಿಗಲಿದೆ. ನಾಲ್ಕು ತಿಂಗಳಿಗೊಮ್ಮೆ ತಲಾ 2 ಸಾವಿರ ರೂಪಾಯಿಗಳು ವರ್ಗಾವಣೆ ಆಗಲಿದೆ. ಇದಾಗಲೇ ಈ ಯೋಜನೆ ಅಡಿ ಇಲ್ಲಿಯವರೆಗೆ 1.15 ಲಕ್ಷ ಕೋಟಿ ಬಿಡುಗಡೆ ಮಾಡಲಾಗಿದೆ. 2019ರ ಡಿಸೆಂಬರ್‌ನಿಂದ ಈ ಯೋಜನೆ ಜಾರಿಗೆ ಬಂದಿದ್ದು, ಸರ್ಕಾರಕ್ಕೆ ವರ್ಷಕ್ಕೆ 75 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.

    ಅಸಹಿಷ್ಣುತೆಯನ್ನು ಮುಸ್ಲಿಂ ಸಮುದಾಯಗಳು ತ್ಯಜಿಸಬೇಕು- ಹೈಕೋರ್ಟ್‌

    ಮದ್ವೆಯಾದಾಗಿನಿಂದಲೂ ದೂರ ಮಲಗುತ್ತಿರೋ ಪತಿಯನ್ನು ಕಟ್ಕೊಂಡು ಏನ್‌ ಮಾಡ್ಲಿ ಮೇಡಂ?

    ಕರೊನಾ ವೈರಸ್‌ 3ನೇ ಅಲೆ ತಡೆಯಬೇಕೆ? ಹಾಗಿದ್ದರೆ ಯಜ್ಞ ಮಾಡಿಸಿ ಎಂದ ಸಚಿವೆ ಉಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts