More

    ಪಾಕ್‌ನಲ್ಲಿ ಮತ್ತೆ ಹಿಂದೂ ದೇವಾಲಯಗಳು ಧ್ವಂಸ- ಹಿಂದೂ ಕುಟುಂಬಗಳ ಮೇಲೆ ದಾಳಿ

    ನವದೆಹಲಿ: ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳ ಧ್ವಂಸ ಪ್ರಕರಣ ಮತ್ತೆ ಮುಂದುವರೆದಿದೆ. ಸಿಂಧ್‌ನಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ಮೂರನೇ ದಾಳಿ ಇದಾಗಿದೆ.

    ಕಳೆದ ವಾರವಷ್ಟೇ ಪಾಕಿಸ್ತಾನದ ಆಗ್ನೇಯ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ದೇವಾಲಯವನ್ನು ಧ್ವಂಸ ಮಾಡಿರುವ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದರು.

    ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಇರುವ ಹಿಂದೂ ದೇವಾಲಯದ ಮೂರ್ತಿಗಳನ್ನು ಮೊಹಮ್ಮದ್ ಇಸ್ಮಾಯಿಲ್ ಎಂಬ ವ್ಯಕ್ತಿ ಧ್ವಂಸ ಮಾಡಿದ್ದಾರೆ ಎಂದು ಅಶೋಕ್ ಕುಮಾರ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ಇದು ತನಿಖಾ ಹಂತದಲ್ಲಿ ಇರುವಾಗಲೇ, ಇದೀಗ ಮತ್ತೆ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲಾಗಿದೆ.

    ಇಷ್ಟೇ ಅಲ್ಲದೇ, 300ಕ್ಕೂ ಹೆಚ್ಚು ಹಿಂದೂ ಕುಟುಂಬಗಳ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಶೀತಲ್‌ದಾಸ್ ಕಾಂಪೌಂಡ್‌ನಲ್ಲಿ ಭಾನುವಾರ ಘಟನೆ ನಡೆದಿದೆ. 300ಕ್ಕೂ ಹೆಚ್ಚು ಹಿಂದೂ ಹಾಗೂ 30 ಮುಸ್ಲಿಂ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಇಲ್ಲಿನ ನಿವಾಸಿಗಳ ಪ್ರಕಾರ, ಹಿಂದೂ ಕುಟುಂಬಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ನೂರಾರು ಮಂದಿ ಕಾಂಪೌಂಡ್ ಬಳಿ ಜಮಾಯಿಸಿದ್ದರು ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ನನ್ನದು ಅಕ್ರಮ ಬಂಧನ: ಹೈಕೋರ್ಟ್‌ ಬಾಗಿಲಿಗೆ ಅರ್ನಬ್‌ ಗೋಸ್ವಾಮಿ

    ಈ ಸಂದರ್ಭದಲ್ಲಿ ಕಾಂಪೌಂಡ್ ಆಸುಪಾಸಿನಲ್ಲಿರುವ ಮುಸ್ಲಿಂ ಕುಟುಂಬದವರು ತಕ್ಷಣವೇ ಆಗಮಿಸಿ ಗೇಟ್ ಬಳಿ ಬಂದು ಗುಂಪನ್ನು ತಡೆದಿದ್ದಾರೆ ಎಂದು ವರದಿಯಾಗಿದೆ. ಘಟನೆ ಬಳಿಕ 60ಕ್ಕೂ ಹೆಚ್ಚು ಹಿಂದೂ ಕುಟುಂಬಗಳನ್ನು ನಗರದ ವಿವಿಧ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

    ಘಟನೆ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾತಾವರಣ ತಿಳಿಗೊಳಿಸಿದ್ದಾರೆ. ದೇವಸ್ಥಾನದಲ್ಲಿ ಮೂರು ವಿಗ್ರಹಗಳನ್ನು ನಾಶ ಮಾಡಿದ್ದಾರೆ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

    ಮುಸ್ಲಿಂ ಕುಟುಂಬಗಳು ತಡೆಯದಿದ್ದರೆ ದಾಳಿಯನ್ನು ಎದುರಿಸುವುದು ತುಂಬಾ ಕಷ್ಟವಿತ್ತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿನ 22 ಕೋಟಿ ಜನ ಸಂಖ್ಯೆ ಪೈಕಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದು, ಹಿಂದೂಗಳು ಕೇವಲ ಶೇ.2ರಷ್ಟು ಇದ್ದಾರೆ. ಇದರಲ್ಲಿ ಬಹುತೇಕರು ಸಿಂಧ್ ಪ್ರಾಂತ್ಯದಲ್ಲೇ ಜೀವನ ಕಟ್ಟಿಕೊಂಡಿದ್ದಾರೆ.

    ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿ ನಡೆಯುತ್ತಿರುವ ಹಿಂದೂ ದೇವಾಲಯದ ಮೇಲಿನ ವಿಧ್ವಂಸಕ ಕೃತ್ಯವನ್ನು ಲಂಡನ್ ಮೂಲದ ಪಾಕಿಸ್ತಾನದ ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತರ ನ್ಯಾಯಕ್ಕಾಗಿ ಹೋರಾಡುವ ವಕ್ತಾರ ಅನಿಲಾ ಗುಲ್ಜಾರ್ ಖಂಡಿಸಿ ಇತ್ತೀಚೆಗಷ್ಟೇ ಪೋಸ್ಟ್‌ ಮಾಡಿದ್ದರು. “ಬದಿನ್​ನ ಸಿಂಧ್‌ನಲ್ಲಿ ಶ್ರೀರಾಮ ಮಂದಿರದಲ್ಲಿನ ಮೂರ್ತಿಯನ್ನು ಅ.10ರಂದು ಹಾಳುಗೆಡವಲಾಗಿದೆ. ಅಲ್ಲದೇ ಅಲ್ಲಿರುವ 428 ದೇವಾಲಯಗಳಲ್ಲಿ ಕೇವಲ 20 ಮಂದಿರಗಳು ಉಳಿದಿವೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದ್ದರು. ಹಿಂದೂ ಹುಡುಗಿಯರನ್ನು ಅಪಹರಿಸಿ ಅತ್ಯಾಚಾರ ಮಾಡಲಾಗುತ್ತಿದೆ ಅಥವಾ ಅವರನ್ನು ಬಲವಂತವಾಗಿ ಮತಾಂತರಗೊಳಿಸುವ ಪ್ರಕರಣಗಳು ನಡೆಯುತ್ತಿವೆ ಎಂದು ಅವರು ಬರೆದುಕೊಂಡಿದ್ದಾರೆ.

    ಬೆದರಿಕೆಗೆ ₹1 ಸಾವಿರ, ಕೊಲೆ ಮಾಡಲು ₹55 ಸಾವಿರ… ಹಲವು ‘ಸೇವೆ’ ನಮ್ಮಲ್ಲಿ ಲಭ್ಯ…

    ಅಮೆರಿಕದಲ್ಲಿ ಇತಿಹಾಸ ಸೃಷ್ಟಿಸಿದ ಕಪ್ಪು ವರ್ಣೀಯ ಸಲಿಂಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts