More

    ಅಫ್ಘಾನ್‌ನಲ್ಲಿ ಯುದ್ಧದ ವಾತಾವರಣ: 570ಕ್ಕೂ ಅಧಿಕ ಬಂಡುಕೋರರ ಹೊಡೆದುರುಳಿಸಿದ ಸೇನೆ

    ಕಾಬೂಲ್‌: ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲ್ಲೀಗ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಅಫ್ಘಾನ್‌ ಸೇನೆ ಮತ್ತು ತಾಲಿಬಾನಿಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿದೆ. ಆಗಸ್ಟ್‌ ಅಂತ್ಯದ ವೇಳೆಗೆ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯುವುದಾಗಿ ಅಮೆರಿಕ ಘೋಷಿಸಿದ ಬೆನ್ನಲ್ಲೇ ತಾಲಿಬಾನ್‌ ಉಗ್ರರ ಪ್ರಾಬಲ್ಯ ಹೆಚ್ಚಿದೆ.

    ಈ ನಡುವೆಯೇ ವಾಯುದಾಳಿ ಮೂಲಕ 570ಕ್ಕೂ ಅಧಿಕ ತಾಲಿಬಾನಿಗಳನ್ನು ಹೊಡೆದುರುಳಿಸಿರುವುದಾಗಿ ಆಫ್ಘನ್‌ ರಕ್ಷಣಾ ಸಚಿವಾಲಯದ ಅಧಿಕಾರಿ ಫವಾದ್‌ ಅಮನ್‌ ಟ್ವೀಟ್‌ ಮಾಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ತಾಲಿಬಾನ್‌ ನನ್ಗರ್‌ಹರ್‌, ಲಗ್ಹಮನ್‌, ಘಜ್ನಿ, ಪಕ್ತಿಯಾ, ಕಂದಹಾರ್‌, ಉರುಜ್ಗನ್‌, ಹೆರತ್‌, ಫರಾಹ್‌, ಜಾವ್ಜಾನ್‌, ಸರ್‌-ಇ ಪೊಲ್‌, ಫರೆಯಬ್‌, ಹೆಲ್ಮಂಡ್‌, ನಿಮ್ರುಜ್‌, ತಕ್ಹರ್‌, ಕುಂಡುಜ್‌, ಕಪೀಸಾ ಪ್ರಾಂತ್ಯಗಳಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ ನಡೆಸಲಾಗಿದೆ. ದಾಳಿಯಲ್ಲಿ 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಉಗ್ರರು ಒಟ್ಟು ಸೇರುವ ಜಾಗ ಮತ್ತು ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದೇವೆ. ಬಂಡುಕೋರರಿಂದ ಅತ್ಯಧಿಕ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಅವರ 100 ಕ್ಕೂ ಹೆಚ್ಚು ವಾಹನಗಳು ನಾಶವಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಕಳೆದ 3 ದಿನಗಳಲ್ಲಿ 4 ಪ್ರಾಂತೀಯ ರಾಜಧಾನಿಗಳು ತಾಲಿಬಾನ್‌ ಹಿಡಿತಕ್ಕೆ ಸಿಕ್ಕಿವೆ. ಭಾನುವಾರ ಉಗ್ರರು ಉತ್ತರ ಅಫ್ಘಾನಿಸ್ಥಾನದ ಕುಂಡುಜ್‌ ಹಾಗೂ ಸಾರ್‌-ಇ-ಪುಲ್‌ ಪ್ರಾಂತ್ಯಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ. ಇಲ್ಲಿನ ಗವರ್ನರ್‌ನ ಕಚೇರಿ, ಪೊಲೀಸ್‌ ಪ್ರಧಾನ ಕಚೇರಿ, ಕಾರಾಗೃಹವೂ ಈಗ ಅವರ ನಿಯಂತ್ರಣಕ್ಕೆ ಬಂದಂತಾಗಿದೆ. ತನ್ನ ವಶದಲ್ಲಿರುವ ನಗರಗಳಲ್ಲಿ ಆಸ್ತಿಪಾಸ್ತಿ ಲೂಟಿ, ಜೈಲಿನಲ್ಲಿರುವ ಕೈದಿಗಳ ಬಿಡುಗಡೆ ಮತ್ತಿತರ ಕುಕೃತ್ಯಗಳನ್ನು ತಾಲಿಬಾನ್‌ ಮಾಡುತ್ತಿದೆ. ದೇಶದ ಒಂದೊಂದೇ ಪ್ರಮುಖ ನಗರಗಳು, ಪ್ರದೇಶಗಳನ್ನು ಆಕ್ರಮಿಸುತ್ತಿರುವ ತಾಲಿಬಾನಿಗಳ ವಿರುದ್ಧ ಅಮೆರಿಕ ಬೆಂಬಲಿತ ಆಫ್ಘನ್‌ ಸೇನೆಯು ತಾಲಿಬಾನ್‌ ವಿರುದ್ಧ ಪ್ರತೀಕಾರದ ದಾಳಿ ಆರಂಭಿಸಿದೆ.

    ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಅಮೆರಿಕ ವಾಯುಪಡೆಯ ಎಫ್‌-16, ಬಿ-52, ಎಸಿ-10 ಯುದ್ಧ ವಿಮಾನಗಳು ನೆರವು ನೀಡಿವೆ. ಕಾಬೂಲ್‌ನಲ್ಲಿ ಶನಿವಾರ ಹಾಗೂ ರವಿವಾರ ಅಮೆರಿಕದ ಎಫ್-16 ಯುದ್ಧ ವಿಮಾನಗಳು ಹಾರಾಟ ನಡೆಸಿವೆ. ಪೂರ್ವ ಮತ್ತು ದಕ್ಷಿಣ ಅಫ್ಘಾನ್‌ನಲ್ಲಿ ತಾಲಿಬಾನ್‌ ಉಗ್ರರನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಯನ್ನೂ ನಡೆಸಲಾಗಿದೆ. ಬಿ-52 ಬಾಂಬರ್‌ಗಳು ಮತ್ತು ಎಸಿ-10 ಸ್ಪೆಕ್ಟರ್‌ ಗನ್‌ಶಿಪ್‌ಗಳನ್ನು ದಾಳಿಗೆ ಬಳಸಲಾಗಿದೆ. ದಾಳಿಯ ವೇಳೆ ಭಾರೀ ಸಂಖ್ಯೆಯಲ್ಲಿ ಉಗ್ರರು ಸಾವಿಗೀಡಾಗಿದ್ದು, ಹೆಲ್ಮಂಡ್‌ ಪ್ರಾಂತ್ಯದಲ್ಲಿ ಒಂದು ಹೈಸ್ಕೂಲ್‌ ಮತ್ತು ಆರೋಗ್ಯ ಕೇಂದ್ರ ಧ್ವಂಸವಾಗಿವೆ.

    ಟೈಟ್‌ ಬುರ್ಖಾ ಧರಿಸಿ ಒಂಟಿಯಾಗಿ ಹೋಗುತ್ತಿದ್ದಳೆಂದು ಯುವತಿಯನ್ನು ಗುಂಡಿಕ್ಕಿ ಕೊಂದರು!

     

    ನಿಯಂತ್ರಣದ ತಪ್ಪಿ ಗುಡಿಸಲುಗಳಿಗೆ ನುಗ್ಗಿದ ಟ್ರಕ್‌: ಸವಿನಿದ್ದೆಯಲ್ಲಿದ್ದ ಎಂಟು ಮಂದಿ ದುರ್ಮರಣ

    ನಿಯಂತ್ರಣದ ತಪ್ಪಿ ಗುಡಿಸಲುಗಳಿಗೆ ನುಗ್ಗಿದ ಟ್ರಕ್‌: ಸವಿನಿದ್ದೆಯಲ್ಲಿದ್ದ ಎಂಟು ಮಂದಿ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts