More

    ಮಹಿಳೆಯರ ರಕ್ಷಣೆಗೆ ಓಬವ್ವ ಆತ್ಮರಕ್ಷಣಾ ಕೌಶಲ ತರಬೇತಿ: ಸಿಎಂ ಬೊಮ್ಮಾಯಿ ಘೋಷಣೆ

    ಬೆಂಗಳೂರು: ಮಹಿಳೆಯರ ರಕ್ಷಣೆಗೆ ಇರುವ ಎಲ್ಲ ಕಾರ್ಯಕ್ರಮಗಳನ್ನು ಕ್ರೋಡೀಕರಿಸಿ ವಿನೂತನ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಿಸಿದರು.

    ವಿಧಾನಸೌಧ ಮಹಾ ಮೆಟ್ಟಿಲುಗಳ ಮೇಲೆ‌ ಏರ್ಪಡಿಸಲಾಗಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ ಓಬವ್ವ ಆತ್ಮ ರಕ್ಷಣಾ
    ಕಲೆ ‘ ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಶಕ್ತಿ‌ ಕೇಂದ್ರ, ತ್ಯಾಗ ಪರಾಕ್ರಮಕ್ಕೆ ಪ್ರೇರಣೆ ನೀಡುವ ನೆಲೆಗಳು ನಾಡಿನಲ್ಲಿವೆ. ಈ ಪೈಕಿ ಬೆಳವಡಿ ಮಲ್ಲಮ್ಮ ಹಾಗೂ ಕೆಳದಿ‌ ಚನ್ನಮ್ಮ ಉತ್ಸವಗಳನ್ನು ಮುಂದಿನ ತಿಂಗಳು ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

    ಮಹಿಳೆಯರ ರಕ್ಷಣೆ ಜತೆಗೆ ಸರ್ವತೋಮುಖ ಅಭಿವೃದ್ದಿಯಿಂದ ಸಮೃದ್ಧ ನಾಡು ಕಟ್ಡಲು ಸಾಧ್ಯವಾ್ಲಿದ್ದು, ದೇಶದ ಜಿಡಿಪಿಗೂ ಮಹತ್ವದ ಕೊಡುಗೆ‌ ನೀಡಲು ಮಹಿಳೆಯರು ಸಮರ್ಥರಾಗುತ್ತಾರೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಹಾಲಪ್ಪ ಆಚಾರ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎನ್ ರವಿಕುಮಾರ, ಮುನಿರಾಜುಗೌಡ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    VIDEO: ಉ.ಪ್ರದೇಶದಲ್ಲಿ ರೋಡ್‌ಷೋ ನಿಲ್ಲಿಸಿ ಮುಗುಳು ನಕ್ಕ ಪ್ರಿಯಾಂಕಾ ಬಿಜೆಪಿ ಕಾರ್ಯಕರ್ತರಿಗೆ ನೀಡಿದರು ಸರ್‌ಪ್ರೈಸ್‌!

    ಭಾರಿ ಕೋಲಾಹಲ ಸೃಷ್ಟಿಸಿರುವ ಹಿಜಾಬ್‌ ವಿವಾದಕ್ಕೆ ರಾಜ್ಯ ಸರ್ಕಾರದಿಂದ ತೆರೆ: ಹೊರಟಿತು ಈ ಸುತ್ತೋಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts