More

    ಗಂಡ ಸಂಶಯ ಪಿಶಾಚಿ- ಡಿವೋರ್ಸ್​ ಪಡೆದರೆ ನನ್ನ ವಸ್ತುಗಳು ವಾಪಸ್​ ಸಿಗುತ್ತವೆಯೆ?

    ಗಂಡ ಸಂಶಯ ಪಿಶಾಚಿ- ಡಿವೋರ್ಸ್​ ಪಡೆದರೆ ನನ್ನ ವಸ್ತುಗಳು ವಾಪಸ್​ ಸಿಗುತ್ತವೆಯೆ?ಮದುವೆಯಾಗಿ 2 ವರ್ಷ ಆಗಿದೆ. ಮೊದಲು ಬೇರೆಯವರ ಜೊತೆ ಎಂಗೇಜ್ಮೆಂಟ್ ಆಗಿತ್ತು. ಅದು ಮುರಿದ ಮೇಲೆ ಇವರನ್ನು ಮದುವೆಯಾದೆ. ಎಲ್ಲಾ ವಿಷಯ ತಿಳಿಸಿಯೇ ಮದುವೆಯಾಗಿದ್ದೇನೆ.  ಆದರೆ ಈಗ ನನ್ನ ಗಂಡ ಅದೇ ವಿಷಯಕ್ಕೆ ಯಾವಾಗಲೂ ಸಂಶಯ ಪಡುತ್ತಾರೆ. ನಿನಗೆ ಅವನ ಜತೆ ಈಗಲೂ ಸಂಬಂಧ ಇದೆ ಎಂದು ಹೇಳಿ, ಕುಡಿದು ಬಂದು ಕೈ ಮಾಡುತ್ತಾರೆ.

    ತವರಿನಲ್ಲಿ ಇದ್ದೇನೆ. ನನ್ನ ವಸ್ತುಗಳೆಲ್ಲ ಗಂಡನ ಹತ್ತಿರವೇ ಇದೆ. ನನಗೂ ಸಾಕಾಗಿದೆ. ಡಿವೋರ್ಸ್ ಪಡೆಯಬೇಕೆಂದುಕೊಂಡರೆ ನನಗೆ ಸಿಗುತ್ತದೆಯೇ? ನನ್ನ ವಸ್ತುಗಳೆಲ್ಲ ವಾಪಸ್ ಬರುತ್ತದೆಯೇ?

    ಉತ್ತರ: ಅನವಶ್ಯಕವಾಗಿ ಹೆಂಡತಿಯ ಮೇಲೆ ಸಂಶಯ ಪಡುವುದು, ಕುಡಿದು ಬಂದು ಹೊಡೆಯುವುದು, ಪತ್ನಿಯ ವಸ್ತುಗಳನ್ನೆಲ್ಲ ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡು ಸತಾಯಿಸುವುದು ಇವೆಲ್ಲ ಕ್ರೂರತೆಯ ಅಂಶಗಳೇ. ಮದುವೆಗೆ ಹಿಂದೆ ನಿಮ್ಮ ಜೀವನದಲ್ಲಿ ಆಗಿರುವ ಘಟನೆಗಳನ್ನು ಹಿಡಿದು ಮದುವೆ ಆದ ಮೇಲೆ ಪತಿ ನಿಮ್ಮನ್ನು ಸತಾಯಿಸುವುದೂ ಕ್ರೂರವೇ.

    ಇವೆಲ್ಲದರ ಆಧಾರದ ಮೇಲೆ ನೀವು ವಿಚ್ಛೇದನದ ಪ್ರಕರಣವನ್ನು ದಾಖಲಿಸಬಹುದು. ಹಾಗೆಯೇ ನೀವು ನಿಮ್ಮ ಪತಿಯ ವಿರುದ್ಧ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷನೆ ಮಾಡುವ ಕಾಯ್ದೆಯ ಕೆಳಗೆ ಪ್ರಕರಣ ದಾಖಲಿಸಿ. ಆ ಪ್ರಕರಣದಲ್ಲಿ ನಿಮ್ಮ ವಸ್ತುಗಳನ್ನೆಲ್ಲ ಪತಿಯಿಂದ ಕೊಡಿಸಬೇಕೆಂದು ಮಧ್ಯಂತರ ಅರ್ಜಿ ಹಾಕಿ. ನ್ಯಾಯಾಲಯದಿಂದ ಅನುಕೂಲ ಆಗಬಹುದು.

    ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು ಕ್ಲಿಕ್ಕಿಸಿ.

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಸಂಸಾರಕ್ಕೆ ಒಪ್ಪದಾಕೆಗೆ ಡಿವೋರ್ಸ್​ ಕೊಟ್ರೆ ಕೂಲಿ ಹಣದಲ್ಲೂ ಭಾಗ ಕೊಡ್ಬೇಕಾ? ಮನೆಯ ಪಾಲೂ ನೀಡ್ಬೇಕಾ?

    ಮದುವೆ ಸಾಕುಸಾಕಾಗಿದೆ, ಒಬ್ಬರ ಮೇಲೊಬ್ಬರಿಗೆ ಅಸಹ್ಯ ಹುಟ್ಟಿದೆ- ವಿಚ್ಛೇದನಕ್ಕೆ ಕಾಯಲೇಬೇಕಾ?

    ಅನಾರೋಗ್ಯದಿಂದ ಬಳಲುತ್ತಿರುವವರು ವಿಲ್‌ ಬರೆದರೆ ಅದು ಮಾನ್ಯವಾಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts