More

    ಆಂಧ್ರದಲ್ಲಿ ಮತ್ತೆ ಕಾಣಿಸಿಕೊಂಡಿದೆ ನಿಗೂಢ ರೋಗ: 29 ಮಂದಿ ಸ್ಥಿತಿ ಗಂಭೀರ

    ಪುಲ್ಲಾ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಎಲೂರಿನಲ್ಲಿ ಕಳೆದ ಡಿಸೆಂಬರ್​ನಲ್ಲಿ 500ಕ್ಕೂ ಹೆಚ್ಚು ಜನರನ್ನು ಅಸ್ವಸ್ಥಗೊಳಿಸಿದ್ದ ನಿಗೂಢ ಕಾಯಿಲೆಯಿಂದ ಜನ ಕಂಗಾಲಾಗಿ ಹೋಗಿದ್ದರು. ನೀರಿನಲ್ಲಿ ಬೆರೆತಿರುವ ಅತ್ಯಧಿಕ ಪ್ರಮಾಣದ ಸೀಸ (ಲೆಡ್‌) ಮತ್ತು ನಿಕಲ್‌ ಲೋಹಗಳ ಧಾತುಗಳೇ ಇದಕ್ಕೆ ಕಾರಣ ಎಂದು ಕೇಂದ್ರ ತಜ್ಞರ ತಂಡ ಪತ್ತೆ ಹಚ್ಚಿದ್ದರೂ ಇದರ ಬಗ್ಗೆ ಇನ್ನೂ ಸಂದೇಹವೇ ಉಳಿದುಕೊಂಡಿದೆ.

    ಇದರ ಬೆನ್ನಲ್ಲೇ ಇದೀಗ ಮತ್ತೆ ಕೆಲವು ಮಂದಿಯಲ್ಲಿ ದಿಢೀರನೆ ವಾಂತಿ, ತಲೆಸುತ್ತು, ತಲೆನೋವು ಮತ್ತು ಬೆನ್ನು ನೋವಿನಂತಹ ಸಮಸ್ಯೆಗಳು ಕಾಣಿಸಿವೆ. ಇದೀಗ ಪುಲ್ಲಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

    ಹಲವಾರು ಮಂದಿ ಈ ನಿಗೂಢ ಕಾಯಿಲೆಯಿಂದ ಬಳಲುತ್ತಿದ್ದು, 29 ಮಂದಿ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಬಾಧಿತ ರೋಗಿಗಳು ಮೂರ್ಛೆ ರೋಗ, ಹೆಪ್ಪುಗಟ್ಟುವಿಕೆ, ವಾಂತಿ ಸೇರಿದಂತೆ ಇತರೆ ಲಕ್ಷಣಗಳನ್ನು ತೋರಿಸಿದ್ದು ಇದು ಎಲುರು ಪ್ರಕರಣಗಳಿಗೆ ಹೋಲತ್ತದೆ ಎನ್ನಲಾಗಿದೆ.

    ಏತನ್ಮಧ್ಯೆ, ಪ್ರತಿಪಕ್ಷದ ನಾಯಕ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಬುಧವಾರ ರಾಜ್ಯ ಸರ್ಕಾರವು ಪುಲ್ಲಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂದು ಒತ್ತಾಯಿಸಿದರು. “ಪುಲ್ಲಾದಲ್ಲಿ ಆರೋಗ್ಯ ತುರ್ತುಸ್ಥಿತಿ ಘೋಷಿಸಿ ಮತ್ತು ಉತ್ತಮ ಆರೋಗ್ಯ ಸೇವೆ ಒದಗಿಸಿ” ಎಂದು ಲೋಕೇಶ್ ಒತ್ತಾಯಿಸಿದರು.

    ಕುಡಿಯುವ ನೀರು ಕಲುಷಿತಗೊಂಡಿಲ್ಲ ಎಂಬ ಹೇಳಿಕೆಯನ್ನು ಸರ್ಕಾರ ನೀಡಬಾರದು ಎಂದು ಆರೋಪಿಸಿದ ಅವರು, ಈ ವಿಷಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನಿರ್ಬಂಧಿಸುವುದಕ್ಕಿಂತ ಸರ್ಕಾರ ಕುಡಿಯುವ ನೀರನ್ನು ಒದಗಿಸುವುದು ಉತ್ತಮ ಎಂದು ಸಲಹೆ ನೀಡಿದರು.

    ಕಳೆದ ಸಲದ ತನಿಖೆ ಕೈಗೊಂಡಿದ್ದಾಗ ಸೀಸ ಮತ್ತು ನಿಕಲ್‌ ಧಾತುಗಳು ಮಿತಿಮೀರಿದ ಪ್ರಮಾಣದಲ್ಲಿ ನೀರಿನಲ್ಲಿ ಬೆರೆತಿರುವುದರಿಂದ ಈ ಸಮಸ್ಯೆ ಉಂಟಾಗಿರುವ ಸಾಧ್ಯತೆ ಸ್ಪಷ್ಟವಾಗಿದೆ. ಆದರೆ, ಕೇಂದ್ರ ತಂಡದ ಅಂತಿಮ ವರದಿ ಬಂದ ಬಳಿಕವೇ ಎಲ್ಲದಕ್ಕೂ ನಿಖರ ಉತ್ತರ ಲಭಿಸಲಿದೆ ಎಂದು ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಇದರ ಬಗ್ಗೆ ಇದುವರೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

    ಬೈಡೆನ್​ ಗದ್ದುಗೆ ಏರುತ್ತಿದ್ದಂತೆಯೇ ಚಿಗುರಿದ ಚೀನಾ: 28 ಅಧಿಕಾರಿಗಳಿಗೆ ನಿರ್ಬಂಧ

    ಎಸ್​ಎಸ್​ಎಲ್​ಸಿಯಿಂದ ಉನ್ನತ ಪದವಿಯವರೆಗೂ ಔಷಧ ಸಂಶೋಧನಾ ಸಂಸ್ಥೆಯಲ್ಲಿ ಖಾಲಿಯಿವೆ ಹುದ್ದೆಗಳು

    ಕೊಲೆ ಆರೋಪ ಹೊತ್ತ ಮಾಜಿ ಸಚಿವನಿಗೆ ಜೈಲೇ ಗತಿ- ಜಾಮೀನು ಅರ್ಜಿಯಾಯ್ತು ವಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts