More

    VIDEO: ಬೆಡ್‌ಷೀಟ್‌ಗಾಗಿ 10ನೇ ಮಹಡಿಯಿಂದ ಸೀರೆ ಕಟ್ಟಿ ಮಗನನ್ನು ಜೋತು ಬೀಳಿಸಿದ ಅಮ್ಮ! ಶಾಕಿಂಗ್‌ ವಿಡಿಯೋ ನೋಡಿ…

    ನವದೆಹಲಿ: ಬಟ್ಟೆಯೊಂದನ್ನು ತರುವ ಸಲುವಾಗಿ ಮಗನ ಕಾಲಿಗೆ ಸೀರೆ ಕಟ್ಟಿ ತಾಯಿಯೊಬ್ಬಳು ಮಹಡಿಯಿಂದ ಕೆಳಕ್ಕೆ ಬಿಟ್ಟಿರುವ ವಿಚಿತ್ರ ಘಟನೆ ದೆಹಲಿಯ ಎನ್​ಸಿಆರ್​​ನ ಫರಿದಾಬಾದ್​ನಲ್ಲಿ ನಡೆದಿದೆ. ಇದರ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದ್ದು, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ.

    ಏಕೆಂದರೆ ಈ ತಾಯಿ ತನ್ನ ಮಗನನ್ನು 10ನೇ ಮಹಡಿಯಿಂದ ಸೀರೆ ಕಟ್ಟಿ ಕೆಳಕ್ಕೆ ಇಳಿಸಿದ್ದಾಳೆ. ಇದಕ್ಕೆ ಕಾರಣ ಬಾಲ್ಕನಿಯಲ್ಲಿ ಒಣಗಿಸಿಟ್ಟಿದ್ದ ಬೆಡ್‌ಷೀಟ್‌ ಕೆಳಕ್ಕೆ ಹಾರಿಬಿದ್ದಿತ್ತು. ಅದನ್ನು ತೆಗೆಯುವ ಸಲುವಾಗಿ ಈ ತಾಯಿ ಇಂಥದ್ದೊಂದು ಸಾಹಸ ಮಾಡಿದ್ದಾಳೆ. ಸ್ವಲ್ಪವೇ ಹೆಚ್ಚೂ ಕಡಿಮೆ ಆಗಿದ್ದರೂ ಬಾಲಕ ಪ್ರಾಣ ಕಳೆದುಕೊಳ್ಳಬೇಕಿತ್ತು. ತಲೆ ಕೆಳಗಾಗಿ ಇಳಿದಿರುವ ಬಾಲಕ ಬೆಡ್​ಶೀಟ್ ತೆಗೆದುಕೊಂಡಿದ್ದಾನೆ. ನಂತರ ಈ ತಾಯಿ ಆತನನ್ನು ಮೇಲೆಳೆದುಕೊಂಡಿದ್ದಾಳೆ!

    ನೆರೆಹೊರೆಯವರು ತಮ್ಮ ಮೊಬೈಲ್‌ನಿಂದ ಈ ಸಂಪೂರ್ಣ ಘಟನೆಯ ವೀಡಿಯೋ ಮಾಡಿ ಹರಿಬಿಡುತ್ತಿದ್ದಂತೆ ಆ ಮಹಿಳೆ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ.

    ವಿಡಿಯೋ ಇಲ್ಲಿದೆ ನೋಡಿ:

    ನನ್ನ ಅಪ್ಪನಷ್ಟು ಪ್ರಾಮಾಣಿಕರು ಯಾರೂ ಇಲ್ಲ, ಅವರು ಗೆಲ್ಲುವವರೆಗೂ ನಾನು ಮದ್ವೆಯಾಗಲ್ಲ ಎಂದ ಸಿಧು ಪುತ್ರಿ

    VIDEO: ಟಿವಿಯಲ್ಲಿ ವರದಿ ಓದುವಾಗಲೇ ಎದ್ದುಬಿಟ್ಟ ಕಂದಮ್ಮ! ಮಗುವನ್ನು ಎತ್ತಿಕೊಂಡೇ ಸುದ್ದಿ ಹೇಳಿದ ವಾಚಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts