More

    ಅತ್ತೆ-ಸೊಸೆ ಹೊಂದಿಕೊಳ್ಳದಿದ್ದರೆ ಪತ್ನಿಗೆ ಡಿವೋರ್ಸ್‌ ನೀಡಬಹುದೆ? ಕೋರ್ಟ್‌ ನನ್ನ ಅರ್ಜಿ ಮಾನ್ಯ ಮಾಡತ್ತಾ?

    ಅತ್ತೆ-ಸೊಸೆ ಹೊಂದಿಕೊಳ್ಳದಿದ್ದರೆ ಪತ್ನಿಗೆ ಡಿವೋರ್ಸ್‌ ನೀಡಬಹುದೆ? ಕೋರ್ಟ್‌ ನನ್ನ ಅರ್ಜಿ ಮಾನ್ಯ ಮಾಡತ್ತಾ?ಪ್ರಶ್ನೆ: ಮದುವೆಯಾದಾಗಿನಿಂದ ನನ್ನ ಪತ್ನಿ ನನ್ನ ಅಮ್ಮನನ್ನು ಹೊಂದಿಕೊಳ್ಳುತ್ತಿಲ್ಲ. ನಾನು ನೌಕರಿ ನಿಮಿತ್ತ ದೂರವಿದ್ದೇನೆ. ಪತ್ನಿ ನನ್ನ ಅಮ್ಮನನ್ನು ನೋಡಿಕೊಳ್ಳಲು ಮನೆಯಲ್ಲಿ ಇದ್ದಾಳೆ. ನಮ್ಮ ಮನೆಗೆ ಹೋಗಲು ಅವಳಿಗೆ ಇಷ್ಟವಾಗುವುದಿಲ್ಲ. ಇದರಿಂದ ನಮ್ಮ ನಡುವೆ ಸಾಕಷ್ಟು ಮನಸ್ತಾಪಗಳು ಬಂದಿವೆ.

    ನಾನು ಎಷ್ಟೇ ಸಮಧಾನದಿಂದ ಇದನೆಲ್ಲಾ ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.ಇದರಿಂದ ತುಂಬಾ ಬೇಸತ್ತಿದ್ದೇನೆ, ನನ್ನ ತಾಯಿ ಗಂಡನಿಲ್ಲದೆ ತುಂಬಾ ಕಷ್ಟಪಟ್ಟು ನಮ್ಮನ್ನು ಬೆಳೆಸಿದ್ದಾರೆ ಅವರ ಕೃಪೆಯಿಂದ ನಾನಿಂದು ಸರ್ಕಾರಿ ಸೇವೆಯಲ್ಲಿರುವೆ. ಅವರನ್ನು ಬಿಟ್ಟು ನನ್ನ ಹೆಂಡತಿ ಜೊತೆ ಜೀವನ ನಡೆಸಲು ನನಗೆ ಇಷ್ಟವಿಲ್ಲ,


    ನನ್ನ ಪ್ರಶ್ನೆ ಏನೆಂದರೆ ಇದೇ ವಿಷಯವನ್ನು ಆಧಾರವಾಗಿರಿಸಿ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದೇ? ಮತ್ತು ನನಗೆ ಅವರಿಗೆ ಜೀವನಾಂಶವನ್ನು ನೀಡುವುದು ಕಡ್ಡಾಯವೇ? ಇದೇ ಕಾರಣ ನೀಡಿ ನಾನು ನಾನು ಜೀವನಾಂಶವನ್ನು ನೀಡಲು ನಿರಾಕರಿಸಬಹುದೇ? ಅವರೇ ಸ್ವತಃ ಜೀವನಾಂಶವನ್ನು ನಿರಾಕರಿಸಲು ಕಾನೂನಿನಲ್ಲಿ ಅವಕಾಶವಿದೆಯೇ? ಅತ್ತೆ-ಸೊಸೆ ಹೊಂದಿಕೊಳ್ಳದಿದ್ದರೆ ಡಿವೋರ್ಸ್‌ ಅರ್ಜಿ ಕೋರ್ಟ್‌ ಮಾನ್ಯ ಮಾಡತ್ತಾ?

    ಉತ್ತರ: ನಿಮ್ಮ ಪತ್ನಿ ನಿಮ್ಮ ತಾಯಿಯ ಜತೆ ಸರಿಹೊಂದಿಕೊಂಡು ಹೋಗಲೇ ಬೇಕೆಂದು ನೀವು ಆಕೆಯನ್ನು ಒತ್ತಾಯಿಸಲು ಸಾಧ್ಯವಿಲ್ಲ.

    ಪತಿ ಬೇರೆಲ್ಲೋ ಇರುವಾಗ ಪತಿಯ ತಾಯಿಯ ಜತೆ ಇರಬೇಕೆಂದು ಪತ್ನಿಯನ್ನು ಒತ್ತಾಯ ಮಾಡಲು ಆಗುವುದಿಲ್ಲ. ನೀವು ನಿಮ್ಮ ತಾಯಿಯನ್ನೂ ನಿಮ್ಮ ಪತ್ನಿಯನ್ನೂ ಇಬ್ಬರನ್ನೂ ಸರಿತೂಗಿಸಿಕೊಂಡು ಸಂಸಾರ ನಡೆಸಲು ಸಿದ್ಧತೆ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ವಿಶ್ವಾಸ ಎಲ್ಲವೂ ಮೆಚ್ಚ ಬೇಕಾದದ್ದೇ. ಆದರೆ ಅದೇ ಪ್ರೀತಿಯನ್ನು ನಿಮ್ಮ ಪತ್ನಿಯೂ ನಿಮ್ಮ ತಾಯಿಗೆ ಕೊಡಬೇಕೆಂದು ಬಯಸಿದರೆ ಸಾಧ್ಯವಾಗದೇ ಹೋಗಬಹುದು. ಈ ಏಕೈಕ ಕಾರಣದಿಂದ ನಿಮಗೆ ವಿಚ್ಛೇದನ ಸಿಗುವುದು ಕಷ್ಟವಾಗಬಹುದು.

    ನೀವು ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಆಕೆ ಜೀವನಾಂಶ ಕೇಳಬಹುದು. ಪ್ರಕರಣ ನಡೆಯುವಾಗಲೂ, ಅಥವಾ ವಿಚ್ಛೇದನವೇ ಆದರೂ, ನೀವು ನಿಮ್ಮ ಪತ್ನಿಗೆ ಜೀವನಾಂಶ ಕೊಡಲೇಬೇಕಾಗುತ್ತದೆ. ನಿಮ್ಮ ಸಂಬಳದಲ್ಲಿ ನಾಲ್ಕನೇ ಒಂದು ಭಾಗದಷ್ಟಾದರೂ ಆಕೆಗೆ ಹೋಗೇ ಹೋಗುವ ಸಾಧ್ಯತೆ ಇರುತ್ತದೆ.

    ನಿಮ್ಮ ಪತ್ನಿಗೆ ಕೆಲಸ ಇದ್ದು ಸಾಕಷ್ಟು ಸಂಪಾದನೆ ಇದ್ದರೆ ಅಥವಾ ವಿಚ್ಛೇದನದ ನಂತರ ಆಕೆ ಮರುಮದುವೆ ಆದರೆ ಆಗ ಮಾತ್ರ ನೀವು ಜೀವನಾಂಶ ಕೊಡುವುದನ್ನು ನಿಲ್ಲಿಸಬಹುದು. ಪ್ರಕರಣ ದಾಖಲಿಸುವ ಬದಲು ಯಾರಾದರೂ ವಿವಾಹ ಸಂಧಾನಕಾರರ /ಕೌನ್ಸೆಲರ್ ಹತ್ತಿರ ಹೋಗಿ ನಿಮ್ಮ ಸಮಸ್ಯೆಯ ಬಗ್ಗೆ ಚರ್ಚಿಸಿ ಪರಿಹಾರ /ಸಲಹೆ ಪಡೆಯುವುದು ಒಳ್ಳೆಯದು. ನೀವು ಯಾರನ್ನೇ ಮದುವೆ ಆದರೂ ಈ ಸಮಸ್ಯೆ ಬರಬಹುದು.

    ಕರೊನಾ ರೂಪಾಂತರಿಯಿಂದ ರಾಜ್ಯದಲ್ಲಿ ಸದ್ಯ ಲಾಕ್‌ಡೌನ್‌ ಆಗತ್ತಾ? ಸಚಿವ‌ ಸುಧಾಕರ್ ಏನು ಹೇಳಿದ್ದಾರೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts