More

    ಐಟಿ ಕ್ಷೇತ್ರದ ದಿಗ್ಗಜನ ದುರಂತ ಅಂತ್ಯ: ವಿಶ್ವದ ಮೊದಲ ಆ್ಯಂಟಿವೈರಸ್‌ ಜನಕ ಜೈಲಿನಲ್ಲಿ ಆತ್ಮಹತ್ಯೆ!

    ಬಾರ್ಸಿಲೋನಾ: ಐಟಿ ಕ್ಷೇತ್ರದ ದಿಗ್ಗಜ, ವಿಶ್ವದಲ್ಲಿಯೇ ಮೊದಲ ಬಾರಿಗೆ ಆ್ಯಂಟಿವೈರಸ್‌ ಕಂಡುಹಿಡಿದು ವಿಶ್ವಖ್ಯಾತಿ ಗಳಿಸಿರುವ ಮ್ಯಾಕ್‌ ಅಫೀ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮ್ಯಾಕ್‌ ಅಫಿ (McAfee) ಎಂಬ ಆ್ಯಂಟಿ ವೈರಸ್‌ ಕಂಪ್ಯೂಟರ್‌ ಬಳಕೆದಾರರಿಗೆ ತೀರಾ ಪರಿಚಿತ. ಈ ಆ್ಯಂಟಿವೈರಸ್‌ ಕಂಡುಹಿಡಿಯುವ ಮೂಲಕ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದರು. 1987ರಲ್ಲಿ ಇದನ್ನು ಕಂಡುಹಿಡಿದ್ದು ವಿಶ್ವದ ಮೊದಲ ಆ್ಯಂಟಿ ವೈರಸ್‌ ಎಂದು ಎನಿಸಿಕೊಂಡಿದ್ದರು. ಈ ಮೂಲಕ ಐಟಿ ಕ್ಷೇತ್ರದಲ್ಲಿ ಭಾರಿ ಹೆಸರು ಮಾಡಿದ್ದ ಮ್ಯಾಕ್‌ ಅವರು ದುರಂತ ಸಾವು ಕಂಡಿದ್ದಾರೆ. ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇವರ ಮೇಲೆ ತೆರಿಗೆ ವಂಚನೆ ಆರೋಪ ಹೊರಿಸಲಾಗಿತ್ತು. ಇದರ ಹೊರತಾಗಿಯೂ ಇವರ ಮೇಲೆ ಕೆಲವು ಆರೋಪಗಳು ಇದ್ದು, ತಲೆಮರೆಸಿಕೊಂಡಿದ್ದರು. ನಂತರ ಇವರನ್ನು ಬಂಧಿಸಿ 2020ರ ಅಕ್ಟೋಬರ್​ 3ರಂದು ಜೈಲಿಗೆ ಅಟ್ಟಲಾಗಿತ್ತು. ಅಲ್ಲಿಂದ ಇವರು ಇಲ್ಲಿಯವರೆಗೆ ಬಾರ್ಸಿಲೋನಿಯಾದ ಜೈಲಿನಲ್ಲಿದ್ದರು.

    ಖಿನ್ನತೆಯಿಂದಾಗಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ವಕೀಲ ಜೇವಿಯರ್​ ವಿಲ್ಲಾಬ್ಲಾ ಹೇಳಿದ್ದಾರೆ. ವಿಶ್ವದ ಮೊದಲ ವಾಣಿಜ್ಯ ಆ್ಯಂಟಿವೈರಸ್‌ ಎಂದು ಎನಿಸಿಕೊಂಡಿದ್ದ ಮ್ಯಾಕ್‌ ಅಫೀ ಕಂಪೆನಿಯನ್ನು 2011ರಲ್ಲಿ ಇಂಟೆಲ್​ಗೆ ಮಾರಲಾಗಿತ್ತು. ಆದರೂ ಸಾಫ್ಟ್​​ವೇರ್​​ ಪ್ರೋಗ್ರಾಂ ಅವರ ಹೆಸರಿನಲ್ಲಿ ನಡೆಯುತ್ತಿದೆ. ಪ್ರಸ್ತುತ ಈ ವೈರಸ್‌ ಅನ್ನು ಜಗತ್ತಿನಾದ್ಯಂತ 500 ದಶಲಕ್ಷಕ್ಕೂ ಅಧಿಕ ಮಂದಿ ಕಂಪ್ಯೂಟರ್​ ಮೂಲಕ ಬಳಸುತ್ತಿದ್ದಾರೆ.

    ದಿನವೂ ಕನಸಲ್ಲಿ ಬಂದು ರೇಪ್‌: ಮಹಿಳೆ ದೂರು ಕೇಳಿ ಬೆಚ್ಚಿಬಿದ್ದ ಪೊಲೀಸರು- ಆಗಿದ್ದೇನು?

    ಮಂ‍‍ಟಪದಲ್ಲೇ ಮದುಮಗಳ ಮೇಲೆ ಕೈಹಾಕಿದ ವರ- ತಗೀ ಕೈ ಎಂದ ಪುರೋಹಿತರು: ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts