More

    ಕಗ್ಗತ್ತಲಿನಲ್ಲಿ ಪಾಕಿಸ್ತಾನ: ಜನಜೀವನ ಹರೋಹರ- ಅಧಿಕಾರಿಗಳ ಹೆಣಗಾಟ

    ಇಸ್ಲಾಮಾಬಾದ್‌: ಭಯೋತ್ಪಾದನಾ ಚಟುವಟಿಕೆಯಿಂದ ಇಡೀ ವಿಶ್ವದ ಕಣ್ಣಿನಲ್ಲಿ ಕುಖ್ಯಾತಿ ಗಳಿಸಿರುವ ಪಾಕಿಸ್ತಾನ ನಿನ್ನೆ ರಾತ್ರಿಯಿಂದ ಗಾಢಾಂಧಕಾರದಲ್ಲಿ ಮುಳುಗಿಬಿಟ್ಟಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    ನಿನ್ನೆ (ಶನಿವಾರ) ರಾತ್ರಿ ಸಂಭವಿಸಿದ ವಿದ್ಯುತ್‌ ವ್ಯತ್ಯಯದಿಂದಾಗಿ ಇಡೀ ಪಾಕಿಸ್ತಾನ ಕತ್ತಲಲ್ಲಿ ಮುಳುಗಿದ್ದು, ಇದುವರೆಗೂ ವಿದ್ಯುತ್​ ಬಾರದ ಹಿನ್ನೆಲೆಯಲ್ಲಿ, ಜನರು ಹೈರಾಣಾಗಿ ಹೋಗಿದ್ದಾರೆ. ಅದೇ ಇನ್ನೊಂದೆಡೆ ವಿದ್ಯುತ್​ ನಿಗಮದ ಅಧಿಕಾರಿಗಳು ವಿದ್ಯುತ್​ ಪೂರೈಸಲು ಹೆಣಗಾಡುತ್ತಿದ್ದು, ಸುಸ್ತಾಗಿ ಹೋಗಿದ್ದಾರೆ.

    ಕಗ್ಗತ್ತಲಿನಲ್ಲಿ ಪಾಕಿಸ್ತಾನ: ಜನಜೀವನ ಹರೋಹರ- ಅಧಿಕಾರಿಗಳ ಹೆಣಗಾಟ
    ಪಾಕಿಸ್ತಾನದ ರಾಷ್ಟ್ರೀಯ ಪವರ್ ಗ್ರಿಡ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ, ಈ ಸಮಸ್ಯೆ ಉಂಟಾಗಿದೆ. ಕರಾಚಿ, ರಾವಲ್ಪಿಂಡಿ, ಲಾಹೋರ್‌, ಇಸ್ಲಾಮಾಬಾದ್‌, ಮುಲ್ತಾನ್‌, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಿದ್ಯುತ್​ ಸ್ಥಗಿತಗೊಂಡಿದೆ. ಇದುವರೆಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಇನ್ನೂ ವಿದ್ಯುತ್​ ಸಮಸ್ಯೆ ಬಗೆಹರಿದಿಲ್ಲ ಎನ್ನಲಾಗಿದೆ.

    ಈ ಕುರಿತು ಟ್ವೀಟ್‌ ಮಾಡಿರುವ ಇಸ್ಲಾಮಾಬಾದ್‌ನ ಉಪ ಆಯುಕ್ತ ಹಮ್ಜಾ ಶಫಕತ್​, ‘ರಾತ್ರಿ 11.41 ಕ್ಕೆ ಸಿಂಧ್ ಪ್ರಾಂತ್ಯದ ಗುಡ್ಡು ವಿದ್ಯುತ್ ಸ್ಥಾವರದಲ್ಲಿ ದೋಷ ಕಂಡುಬಂದಿದೆ. ರಾಷ್ಟ್ರೀಯ ವಿದ್ಯುತ್‌ ಪ್ರಸರಣಾ ಕಂಪನಿಯ (ಎನ್‌ಟಿಡಿಸಿ) ವಿದ್ಯುತ್‌ ಮಾರ್ಗಗಳು ಟ್ರಿಪ್‌ ಆಗಿವೆ. ಹೀಗಾಗಿ ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಬಹಳ ಸಮಯ ಹಿಡಿಯುತ್ತದೆ ಎಂದು ಹೇಳಿದ್ದಾರೆ.

    ಇದರ ಬೆನ್ನಲ್ಲೇ ಪಾಕಿಸ್ತಾನದ ಇಂಧನ ಸಚಿವ ಓಮರ್ ಅಯೂಬ್ ಖಾನ್ ಕೂಡ ಟ್ವೀಟ್​ ಮಾಡಿದ್ದು, ವಿದ್ಯುತ್ ಪ್ರಸರಣ ವ್ಯವಸ್ಥೆಯಲ್ಲಿನ ಆವರ್ತನದಲ್ಲಿ ಹಠಾತ್ ಕುಸಿತದಿಂದಾಗಿ ದೇಶಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದಿದ್ದಾರೆ.

    ರಾಷ್ಟ್ರೀಯ ವಿದ್ಯುತ್‌ ಪ್ರಸರಣಾ ವ್ಯವಸ್ಥೆಯ ಹಠಾತ್‌ ಸ್ಥಗಿತದ ಹಿಂದಿನ ಕಾರಣಗಳನ್ನು ಪತ್ತೆ ಮಾಡಲು ಎನ್‌ಟಿಡಿಸಿ ತಂಡಗಳು ಕಾರ್ಯನಿರ್ವಹಿಸುತ್ತಿವೆ.

    ಇನ್ನು ಪಾಕಿಸ್ತಾನದ ವಿದ್ಯುತ್ ವ್ಯತ್ಯಯ ಭಾರತ ಹಾಗೂ ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗುತ್ತಿದ್ದು, ಟ್ವಿಟ್ಟರ್‌ನಲ್ಲಿ #blackout ಟ್ರೆಂಡ್ ಆಗಿದೆ.

    VIDEO: ಬಾಲಾಕೋಟ್​ ಏರ್​ಸ್ಟ್ರೈಕ್​ ಸಾಕ್ಷಿ ಕೇಳಿದವರಿಗೆ ಪಾಕ್​ ನೀಡಿದೆ ಸ್ಫೋಟಕ ಮಾಹಿತಿ- ನೀವೂ ಕೇಳಿ…

    ಅಮ್ಮಾ ಚಾಮುಂಡಿ … ಉರುಳು ಸೇವೆ ಮಾಡ್ತೀನಿ… ನಮ್​ ನೆಚ್ಚಿನ ನಟಿಗೆ ಏನೂ ಮಾಡಬೇಡಮ್ಮಾ…

    ನೆನಪಿರಲಿ, ಹುಡುಗರೂ ಸೇಫ್​ ಅಲ್ಲ… ಕೆಲಸದ ಆಮಿಷ ಒಡ್ಡಿ ಯುವಕನ ಮೇಲೆ ಗ್ಯಾಂಗ್​ರೇಪ್​!

    ಹಕ್ಕಿಜ್ವರ ಹರಡಲು ಪ್ರಧಾನಿಯೇ ಕಾರಣ ಎಂದ ಐ.ಪಿ.ಸಿಂಗ್​! ಇದಕ್ಕೆ ಕೊಟ್ಟ ಕಾರಣ ಏನು ನೋಡಿ…

    ಮುಂಬೈ ದಾಳಿ ರೂವಾರಿ ಲಖ್ವಿಗೆ 15 ವರ್ಷ ಜೈಲುಶಿಕ್ಷೆ ನೀಡಿದ ಪಾಕ್​ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts