More

    ‘ಒಬ್ಬನ ತಲೆ ಕಡಿದೆ, ಇನ್ನೊಬ್ಬನ ಇರಿದೆ, ಮತ್ತೊಬ್ಬನ ಕತ್ತರಿಸಿದೆ…ಅವರ್ಯಾರೋ ನಂಗೊತ್ತಿಲ್ಲ… ಆಹಾ! ಅದೆಂಥ ನೆಮ್ಮದಿ..’

    ನವದೆಹಲಿ: ಮೂರು ದಿನಗಳಲ್ಲಿ ಮೂರು ಮಂದಿಯನ್ನು ಕೊಂದೆ. ಅವರ್ಯಾರು ಎಂದು ನನಗೆ ತಿಳಿದೇ ಇಲ್ಲ. ಆದರೆ ಅದೆಷ್ಟು ಖುಷಿ ಆಗ್ತಿದೆ ಎಂದರೆ ನನ್ನ ಜೀವನ ಸಾರ್ಥಕವಾಯ್ತು ಎನಿಸುತ್ತೆ. ಈಗ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ನನ್ನ ಉದ್ದೇಶ ಈಡೇರಿದೆ, ಈಗ ಏನು ಬೇಕಾದರೂ ಮಾಡಿಕೊಳ್ಳಿ…

    ಹೀಗೆಂದು ಹೇಳಿದವ 22 ವರ್ಷದ ಮೊಹಮ್ಮದ್​ ರಾಜಿ. ಬಿಹಾರ ಮೂಲದ ಈ ವ್ಯಕ್ತಿ ನವೆಂಬರ್ 23, 24 ಮತ್ತು 25 ರಂದು ಮೂರು ಜನರನ್ನು ಕೊಂದಿದ್ದಾನೆ. ಒಬ್ಬೊಬ್ಬರ ಕೊಲೆ ಮಾಡಿದ ಮೇಲೂ ತಾನೇನೋ ಸಾಧಿಸಿದ್ದೇನೆ ಎಂಬ ಖುಷಿ ಈತನಲ್ಲಿ ಇತ್ತು. ಜೀವನದ ಉದ್ದೇಶವೇ ಈಡೇರಿದೆ ಎಂದು ಈತ ಅಂದುಕೊಂಡಿದ್ದಾನೆ!

    ಅಷ್ಟಕ್ಕೂ ಇಂಥದ್ದೊಂದು ತೃಪ್ತಿ ಈತನಲ್ಲಿ ಏಕೆ ಬಂದಿದೆ ಎಂದು ಕೇಳಿದರೆ ಶಾಕ್​ ಆಗುವುದು ಖಂಡಿತ.

    ಅದಕ್ಕೆ ಕಾರಣ ಅವನೇ ಹೇಳಿದ್ದಾನೆ ಕೇಳಿ… ನಾನು ಚಿಕ್ಕವನಿದ್ದಾಗ ನನಗೆ ಏನು ತಿಳಿಯುವುದಿಲ್ಲವಾಗಿತ್ತು. ನನ್ನ ಪಾಲಕರು ಸೇರಿದಂತೆ ಎಲ್ಲರೂ ನನ್ನನ್ನು ಹಂಗಿಸುತ್ತಿದ್ದುದು ಒಂದೇ. ನೀನು ದಡ್ಡ, ನಿನಗೇನೂ ಬರಲ್ಲ. ನೀನು ತುಂಬಾ ದುರ್ಬಲ, ನಿನ್ನಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಇದ್ದರು. ಇದು ನನ್ನ ತಲೆಯಲ್ಲಿ ತುಂಬಿಕೊಂಡಿತ್ತು. ನಾನೂ ಏನಾದರೂ ಮಾಡಬಲ್ಲೆ ಎಂದು ತೋರಿಸುವ ಹುಚ್ಚು ಹತ್ತಿತ್ತು. ಅದಕ್ಕಾಗಿಯೇ ಹೀಗೆ ಮಾಡಿದೆ ಎಂದಿದ್ದಾನೆ ಮೊಹಮ್ಮದ್​.

    ಇದನ್ನೂ ಓದಿ: ಮದ್ವೆ, ಫಂಕ್ಷನ್​ಗಳಲ್ಲಿ ಅಪರಿಚಿತ ಮಕ್ಕಳು ಓಡಾಡ್ತಿದ್ರೆ ಇರಲಿ ಎಚ್ಚರ- ಹತ್ತಾರು ಲಕ್ಷ ರೂ. ಬಿಜಿನೆಸ್​ ಇದು!

    ನವೆಂಬರ್ 23 ರಂದು ಗುರುಗ್ರಾಮದ ಲೀಜರ್ ವ್ಯಾಲಿ ಪಾರ್ಕ್‍ನಲ್ಲಿ ವ್ಯಕ್ತಿಯೊಬ್ಬನನ್ನು ಇರಿದು ಕೊಂದಿದ್ದಾನೆ. 24 ರಂದು ಗುರುಗ್ರಾಮ್‍ನ ಸೆಕ್ಟರ್ 40ರಲ್ಲಿ ಸೆಕ್ಯುರಿಟಿ ಗಾರ್ಡ್​ನನ್ನು ಕೊಲೆ ಮಾಡಿದ್ದಾನೆ. ಹಾಗೆಯೇ ಮಾರನೇ ದಿನ 25 ರಂದು ವ್ಯಕ್ತಿಯೊಬ್ಬನ ತಲೆ ಕಡಿದು ಹತ್ಯೆಗೈದಿದ್ದಾನೆ. ಹತ್ಯೆಯಾದ ಮೂರನೇ ವ್ಯಕ್ತಿಯ ಶವ ಚರಂಡಿಯಲ್ಲಿ ಪತ್ತೆಯಾಗಿತ್ತು.

    ಮೂರು ದಿನಗಳಲ್ಲಿ ನಡೆದ ಈ ಮೂರು ಕೊಲೆ ಪೊಲೀಸರನ್ನು ಬೆಚ್ಚಿಬೀಳಿಸಿತ್ತು. ಇದರ ತನಿಖೆಗಾಗಿ ಸುಮಾರು 3,000 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದಾರೆ. ನಂತರ ಈತನ ಸುಳಿವು ಸಿಕ್ಕಿದೆ. ಆತನನ್ನು ಬಂಧಿಸಿದಾಗ ತನ್ನ ಬಾಲ್ಯದ ಕಥೆ ಹೇಳಿದ್ದಾನೆ ಮೊಹಮ್ಮದ್​.

    ಮೊಹಮ್ಮದ್ ಈ ಮೂರು ಕೊಲೆ ಮಾತ್ರವಲ್ಲದೇ ದೆಹಲಿ, ಗುರುಗ್ರಾಮ್, ಬಿಹಾರಗಳಲ್ಲಿ 10ಕ್ಕೂ ಅಧಿಕ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಪಾಯಕಾರಿ ಪಟ್ಟಿಯಿಂದ ಗಾಂಜಾ ಹೊರಕ್ಕೆ- ವಿಶ್ವಸಂಸ್ಥೆ ನಿರ್ಣಯಕ್ಕೆ ಒಪ್ಪಿದ ಭಾರತ: ಇಲ್ಲಿದೆ ಕಾರಣ…

    ಯಾರು ಬೇಕಾದ್ರೂ ಪಕ್ಷ ಬಿಟ್ಟು ತೊಲಗಿ- ಹೋಗುವಾಗ ನನ್ನ ಸಾವಿಗೆ ಪ್ರಾರ್ಥಿಸಿ ಎಂದ ಮಮತಾ!

    ಲಸಿಕೆ ಮೂಲಕ ಸೈನಿಕರಿಗೆ ಅತಿಮಾನುಷ ಶಕ್ತಿ ತುಂಬಲಿದೆ ಚೀನಾ- ವಿಶ್ವಕ್ಕೇ ಕಂಟಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts