More

    ಮೂರನೇ ಬಾರಿ ಸಿಎಂ ಆಗಿ ಗದ್ದುಗೆಗೇರಿದ ಮಮತಾ- ಆರು ತಿಂಗಳ ಒಳಗೆ ಗೆದ್ದರೆ ಖುರ್ಚಿ ಭದ್ರ

    ಕೋಲ್ಕತಾ: ಮೂರನೇ ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಜಗದೀಪ್ ಧನ್‍ಖಡ್ ಪ್ರಮಾಣ ವಚನ ಬೋಧಿಸಿದರು.

    ಈ ಸಮಾರಂಭದಲ್ಲಿ ಟಿಎಂಸಿಯ ಚುನಾವಣೆಯ ರಣತಂತ್ರಗಾರ ಪ್ರಶಾಂತ್ ಕಿಶೋರ್, ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಪ್ರದೀಪ್ ಭಟ್ಟಾಚಾರ್ಯ ಸೇರಿದಂತೆ ಬೆರಳಿಕೆಯಷ್ಟು ಟಿಎಂಸಿ ನಾಯಕರು ಉಪಸ್ಥಿತರಿದ್ದರು. ಮಮತಾ ಅವರನ್ನು ಹೊರತುಪಡಿಸಿ ಬೇರೆ ಯಾರೂ ಇಂದು ಪ್ರಮಾಣ ವಚನ ಪಡೆಯಲಿಲ್ಲ.

    ಈ ಮೂಲಕ ಮಮತಾ ಮೂರನೆ ಬಾರಿ ಮುಖ್ಯಮಂತ್ರಿ ಗದ್ದುಗೆಗೆ ಏರಿದಂತಾಗಿದೆ. ಮೂರನೇ ಬಾರಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಸರ್ಕಾರ ರಚನೆಯಾಗಿದೆ.
    ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದ್ರ ಅಧಿಕಾರಿ ವಿರುದ್ಧ ಪರಾಭವಗೊಂಡಿದ್ದಾರೆ. ಆದರೂ ಅವರು ಮುಖ್ಯಮಂತ್ರಿಯಾಗಲು ಕಾನೂನಿನಡಿ ಅವಕಾಶವಿದೆ.

    ಕಾನೂನಿನಲ್ಲಿ ಇರುವಂತೆ ಪರಾಭವಗೊಂಡರೂ ಸಿಎಂ ಖುರ್ಚಿಗೆ ಏರಲು ಆರು ತಿಂಗಳ ಒಳಗೆ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾಗಬೇಕು. ಇಲ್ಲದೇ ಹೋದರೆ ಯಾವುದಾದರೂ ಖಾಲಿ ಇರುವ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ಆರು ತಿಂಗಳ ಒಳಗೆ ಉಪಚುನಾವಣೆಯಲ್ಲಿ ಗೆಲ್ಲಬೇಕು. ಒಂದು ವೇಳೆ ಅಲ್ಲಿಯೂ ಸೋತರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ವಿಧಾನಪರಿಷತ್‌ ನಿರ್ಮೂಲನ ಮಾಡಲಾಗಿದೆ. ಆದ್ದರಿಂದ ಇರುವ ಮಾರ್ಗ ಎಂದರೆ ಉಪ ಚುನಾವಣೆ ಮಾಡಿ ಗೆಲ್ಲಲೇಬೇಕಿದೆ. ಇಲ್ಲದಿದ್ದರೆ ಮುಖ್ಯಮಂತ್ರಿಯ ಅಧಿಕಾರವನ್ನು ದೀದಿ ಕಳೆದುಕೊಳ್ಳುತ್ತಾರೆ.

    292 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಟಿಎಂಸಿ 213ರಲ್ಲಿ ಗೆದ್ದಿದೆ. ಬಿಜೆಪಿ 77ರಲ್ಲಿ ಜಯ ಸಾಧಿಸಿದೆ. ಚುನಾವಣೆ ಫಲಿತಾಂಶದ ಬಳಿಕ ಪಶ್ವಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದಲ್ಲಿ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ.

    ಅಣ್ಣನ ಚಿತೆಗೆ ಬೆಂಕಿ ಇಟ್ಟಳು- ನಾಲ್ಕೇ ದಿನದಲ್ಲಿ ಅಪ್ಪನ ಚಿತೆ ಸಿದ್ಧವಾಯ್ತು! ಕಣ್ಣೀರಲ್ಲಿ ಗ್ರಾಮ

    ಕರೊನಾದಿಂದ ಅಪ್ಪನ ಸಾವು- ದುಃಖ ತಡೆಯಲಾರದೇ ಚಿತೆಗೆ ಹಾರಿದ ಮಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts