More

    ಲಾಕ್‌ಡೌನ್‌ ಇಫೆಕ್ಟ್‌: ಸೋಂಕಿತರ ಸಂಖ್ಯೆಯಲ್ಲಾದ ವ್ಯತ್ಯಾಸವೇನು? ಪ್ರಧಾನಿಗೆ ನೀಡಿದರು ಈ ಮಾಹಿತಿ

    ಬೆಂಗಳೂರು: ರಾಜಧಾನಿಯಲ್ಲಿ ದಿನದ ಸೋಂಕಿತರ ಸಂಖ್ಯೆ 26 ಸಾವಿರಕ್ಕೆ ತಲುಪಿತ್ತು. ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ 16 ಸಾವಿರಕ್ಕೆ ಇಳಿದಿದೆ. ಸೋಂಕು ಪ್ರಕರಣಗಳು ಶೇ.40ರಷ್ಟು ತಗ್ಗಿದ್ದರೆ, ಪಾಸಿಟಿವಿಟಿ ದರವೂ ಕಡಿಮೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ‌ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.

    ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳ ಜತೆಗೆ ವಿಡಿಯೋ ಸಂವಾದದಲ್ಲಿ ರಾಜ್ಯದ ಪಾಳಿಗೆ ಬಂದಾಗ ಮೊದಲಿಗೆ ವಿವರಿಸುವ ಅವಕಾಶ ಬಿಬಿಎಂಪಿಗೆ ಲಭಿಸಿತು.

    ಕರೊನಾ 2ನೇ ಅಲೆಯು ಬೆಂಗಳೂರಿನಲ್ಲಿ ದಿಢೀರ್ ಸೋಂಕು ಪ್ರಕರಣಗಳನ್ನು ಹೆಚ್ಚಿಸಿತು. ನಿಯಂತ್ರಣಕ್ಕಾಗಿ ವಲಯವಾರು ವಾರ್ ರೂಮ್, ಸಹಾಯವಾಣಿ ಸ್ಥಾಪಿಸಿ ಕೂಡಲೇ ಸ್ಪಂದಿಸುವ ವ್ಯವಸ್ಥೆ ಮಾಡಲಾಗಿದೆ.

    ಲಾಕ್‌ಡೌನ್‌ ಇಫೆಕ್ಟ್‌: ಸೋಂಕಿತರ ಸಂಖ್ಯೆಯಲ್ಲಾದ ವ್ಯತ್ಯಾಸವೇನು? ಪ್ರಧಾನಿಗೆ ನೀಡಿದರು ಈ ಮಾಹಿತಿ

    ಮನೆಯಲ್ಲೇ ಪ್ರತ್ಯೇಕವಾಗಿ ಇರುವವರ ಮೇಲೆ ನಿಗಾವಹಿಸಲು ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡ ನೇಮಿಸಿದ್ದು, ಪರೀಕ್ಷೆ, ಪತ್ತೆ ಹಾಗೂ ಚಿಕಿತ್ಸೆಗೆ ಒತ್ತು ನೀಡಲಾಗಿದೆ. ಹೆಚ್ಚು ಪ್ರಕರಣಗಳು ಕಂಡು ಬಂದ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸಿದ್ದು, ಲಾಕ್ ಡೌನ್ ಬಳಿಕ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಗೌರವ್ ಗುಪ್ತಾ ವಿವರಿಸಿದ್ದಾರೆ.

    ರಾಜ್ಯದಲ್ಲಿಯೂ ಡಿಆರ್‌ಡಿಒ ಕೋವಿಡ್‌ ಚಿಕಿತ್ಸಾ ಕೇಂದ್ರ ಆರಂಭಿಸಿ: ರಕ್ಷಣಾ ಸಚಿವರಿಗೆ ಡಿಸಿಎಂ ಪತ್ರ

    ಮುಸ್ಲಿಂ ಧರ್ಮದ ನಿರುದ್ಯೋಗಿ, ನಡತೆ ಬಿಟ್ಟು ದೂರವಾದ ಉದ್ಯೋಗಸ್ಥ ಪತ್ನಿಯಿಂದ ಜೀವನಾಂಶ ಕೇಳಬಹುದೆ?

    ವಿವಿಧ ಇಂಜಿನಿಯರಿಂಗ್‌ ಪದವೀಧರರಿಗೆ ಸೆರಾಮಿಕ್‌ ಸಂಸ್ಥೆಯಿಂದ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts