More

    ಕಂದನ ಕಾಪಾಡಿ ಪ್ರಾಣ ಬಿಟ್ಟ ಅಮ್ಮ: ಬೀಳುತ್ತಿರುವ ಮಗುವನ್ನು ಹಿಡಿಯಲು ಹೋಗಿ ತಾಯಿಯ ದಾರುಣ ಸಾವು

    ತಿರುವನಂತಪುರ (ಕೇರಳ): ಮಗುವಿನ ಜೀವ ಉಳಿಸಲು ಹೋಗಿ ಟೆರೇಸ್ ಮೇಲಿನಿಂದ ಹಾರಿ ಮಹಿಳೆಯೊಬ್ಬರು ಪ್ರಾಣ ಬಿಟ್ಟ ದಾರುಣ ಘಟನೆ ತಿರುವನಂತಪುರದಲ್ಲಿ ನಡೆದಿದೆ.

    ನೀಮಾ ಎನ್ನುವವರ ಆರು ತಿಂಗಳ ಮಗು ಟೆರೇಸ್​ ಮೇಲೆ ಆಟವಾಡುತ್ತಿತ್ತು. ಈ ಸಂದರ್ಭದಲ್ಲಿ ಮಗು ಕಾಲು ಜಾರಿ ಬೀಳುತ್ತಿದ್ದಂತೆಯೇ ತಾಯಿ ನೀಮಾ ಅದನ್ನು ಹಿಡಿಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವರೇ ಟೆರೇಸ್​ ಮೇಲಿನಿಂದ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಈ ಘಟನೆ ಕಳೆದ ಗುರುವಾರ ಮಧ್ಯಾಹ್ನ 12 ಗಂಟೆಯ ವೇಳೆ ನಡೆದಿದೆ. ನೀಮಾ ಅವರ ಪತಿ ಅಬು ಫಜಲ್ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಮನೆಯನ್ನು ಈಚೆಗೆ ಮಾರಿದ್ದರು. ಈ ಕಾರಣದಿಂದ ನೀಮಾ ಅವರು ಸಹೋದರಿಯ ಮನೆಯಲ್ಲಿ ಮಗುವಿನ ಜತೆ ವಾಸವಾಗಿದ್ದರು.

    ಮಧ್ಯಾಹ್ನ ಮಗುವಿನ ಜತೆ ನೀಮಾ ಟೆರೇಸ್​ ಮೇಲೆ ಹೋಗಿದ್ದಾಗ, ಬೀಳುತ್ತಿದ್ದ ಮಗು ರಕ್ಷಿಸಲು ಹೋಗಿದ್ದಾರೆ. ಈ ಸಮಯದಲ್ಲಿ ತಲೆಗೆ ಪೆಟ್ಟು ಬಿದ್ದಿದೆ. ಆಸ್ಪತ್ರೆಗೆ ಕೂಡಲೇ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    100 ಅಡಿ ಸುನಾಮಿ ಅಲೆಗೆ ಕೊಚ್ಚಿಹೋಗಿದ್ದ ಪೊಲೀಸ್​ ಅಧಿಕಾರಿ 17 ವರ್ಷಗಳ ಬಳಿಕ ಜೀವಂತ ಪತ್ತೆ!

    ಸಿಎಂ ಸಾಹೇಬ್ರೆ… ಹೊಗಳುಭಟ್ಟರ ಕಾಲ ಹೋಯ್ತು… ನಿಮ್​ ಸುತ್ತಲೂ ಇರೋ ಬ್ಯಾಂಡ್​ಸೆಟ್​ನವ್ರನ್ನ ನಿಯಂತ್ರಿಸಿ…

    VIDEO: ಚಿನ್ನ ಬೇಡ.. ದುಡ್ಡು ಬೇಡ… ಒಂದು ಲಕ್ಷ ಮೌಲ್ಯದ ಪುಸ್ತಕ ಕೊಟ್ಟುಬಿಡಿ ಎಂದ ಪಾಕ್​ ವಧು

    ಪಿವಿಸಿ ಪೈಪ್​ ಎಂದು ಬಾಕ್ಸ್​​​ ತೆರೆದರೆ ಸಿಕ್ಕಿದ್ದು 21 ಲಕ್ಷ ನವಿಲುಗರಿ! ಚೀನಾದೊಂದಿಗೆ ಐದೂವರೆ ಕೋಟಿ ರೂ ವ್ಯವಹಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts