More

    ಭಾವ್‌, ರಾಗ್‌, ತಾಳ್‌ ಇರುವಾಗ ಗುಲಾಮರ ‘ಇಂಡಿಯಾ’ ನಮಗೇಕೆ? ಕಂಗನಾ ಟ್ವೀಟ್‌

    ಮುಂಬೈ: ಕಳೆದೊಂದು ವರ್ಷದಿಂದ ಸದಾ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ಸುದ್ದಿಯಲ್ಲಿ ಇರುವ ನಟಿ ಕಂಗನಾ ರಣಾವತ್‌ ಇದೀಗ ಇನ್ನೊಂದು ಹೇಳಿಕೆ ನೀಡಿದ್ದಾರೆ. ಅದೇನೆಂದರೆ ಗುಲಾಮರು ಇಟ್ಟಿರುವ ಇಂಡಿಯಾ ಎನ್ನುವ ಹೆಸರು ನಮಗೆ ಬೇಡ ಎಂದು.

    ಇವರು ಹೀಗೆ ಏಕೆ ಹೇಳಿದ್ದಾರೆ, ಇದರ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ಇದಾಗಲೇ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಅವರು ಹೇಳಿರುವುದು ಏಕೆ, ಅದರ ಉದ್ದೇಶವೇನು ಎಂದು ಹೇಳಿರುವ ಒಂದು ಗುಂಪು, ತಾವೂ ಕಂಗನಾ ಅವರ ಈ ಮಾತಿಗೆ ಜೈ ಎಂದಿದ್ದರೆ, ಇನ್ನೊಂದಿಷ್ಟು ಮಂದಿ, ಏನೇನೋ ಅಪಾರ್ಥ ಕಲ್ಪಿಸಿಕೊಂಡು ಇವರನ್ನು ದೂರುತ್ತಿದ್ದಾರೆ. ಒಟ್ಟಿನಲ್ಲಿ ಈ ಹೇಳಿಕೆ ಇದೀಗ ಭಾರಿ ವಾದ-ಪ್ರತಿವಾದಕ್ಕೆ ಈಡು ಮಾಡಿಕೊಟ್ಟಿದೆ.

    ’ಇಂಡಿಯಾ’ ಎನ್ನುವುದು ಗುಲಾಮರಾಗಿರುವ ಬ್ರಿಟಿಷರು ಇಟ್ಟಿರುವ ಹೆಸರು. ನಮ್ಮದು ಭಾರತ ದೇಶ, ನಾವೆಲ್ಲಾ ಭಾರತೀಯರು. ಎಲ್ಲ ದೇಶಗಳಿಗೂ ಅವುಗಳದ್ದೇ ಹೆಸರು ಇರುವಾಗ ಭಾರತಕ್ಕೆ ಆ ಗುಲಾಮರು ಇಟ್ಟಿರುವ ಇಂಡಿಯಾ ಎನ್ನುವ ಹೆಸರು ಏಕೆ ಎನ್ನುವುದು ಕಂಗನಾ ಪ್ರಶ್ನೆ. ಆದ್ದರಿಂದ ಇಂಡಿಯಾ ಶಬ್ದವನ್ನು ತೆಗೆದುಹಾಕಿ ಇದನ್ನು ಭಾರತ ಎಂದು ಮಾಡಬೇಕು ಎಂದಿದ್ದಾರೆ ಅವರು.
    ಕಂಗನಾ ತಮ್ಮ ಪೋಸ್ಟ್‌ನಲ್ಲಿ ‘ಭಾರತ್‌’ ಅರ್ಥದ ಬಗ್ಗೆ ವಿವರಣೆಯನ್ನು ಕೂಡ ನೀಡಿದ್ದಾರೆ. ಭಾರತ್‌ ಎಂಬುದು ಮೂರು ಸಂಸ್ಕೃತ ಅಕ್ಷರಗಳಿಂದ ಕೂಡಿದ ಪದವಾಗಿದೆ. ಭಾ( ಭಾವ್‌), ರ(ರಾಗ್‌), ತ( ತಾಳ್) ಪದಗಳಿಂದ ಭಾರತ್‌ ಆಗಿದೆ. ಭಾವ, ರಾಗ, ತಾಳಗಳಿದ ಕೂಡಿರುವುದೇ ಭಾರತ (Bha -Bhav, Ra-Rag,Ta-Tal) ಎಂದು ಕಂಗನಾ ವಿವರಣೆ ನೀಡಿದ್ದಾರೆ.

    ಯೋಗ, ಗೀತಾ, ವೇದಗಳಲ್ಲೂ ಭಾರತದ ಹೆಸರು ಪ್ರಸ್ತಾಪವಾಗಿದೆ. ಜಗತ್ತಿಗೆ ಹೊಸ ನಾಗರಿಕತೆಯನ್ನು ಕೊಟ್ಟವರು ಭಾರತೀಯರು. ಆದ್ದರಿಂದ ಬ್ರಿಟಿಷರು ಇಟ್ಟ ಹೆಸರನ್ನು ತೆಗೆಯಬೇಕು ಎನ್ನುವುದು ಅವರ ವಾದ. ಅಷ್ಟಕ್ಕೂ ಇಂಥದ್ದೊಂದು ಮಾತು ಕೆಲ ವರ್ಷಗಳಿಂದಲೂ ಕೇಳಿಬರುತ್ತಿದೆ. ಇಂಡಿಯಾ ಬದಲು ಹಿಂದೂಸ್ಥಾನ ಅಥವಾ ಭಾರತ ಎಂದು ಮಾಡಬೇಕು ಎಂಬ ಮಾತು ಸಾಗಿದೆ. ಇದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿ ತಮ್ಮದೇ ಆಗಿರುವ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ.

    ದಿನವೂ ಕನಸಲ್ಲಿ ಬಂದು ರೇಪ್‌: ಮಹಿಳೆ ದೂರು ಕೇಳಿ ಬೆಚ್ಚಿಬಿದ್ದ ಪೊಲೀಸರು- ಆಗಿದ್ದೇನು?

    ಮಂ‍‍ಟಪದಲ್ಲೇ ಮದುಮಗಳ ಮೇಲೆ ಕೈಹಾಕಿದ ವರ- ತಗೀ ಕೈ ಎಂದ ಪುರೋಹಿತರು: ವಿಡಿಯೋ ವೈರಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts