More

    ಹೊಡಿತಾಳೆ, ಬಡಿತಾಳೆ ನನ್​ ಹೆಂಡ್ತಿ: ಕುಡುಕಿಯಿಂದ ಪೊಲೀಸ್​ ರಕ್ಷಣೆ ಕೋರಿದ ಪತಿರಾಯ!

    ಅಹಮದಾಬಾದ್: ಮದ್ಯವ್ಯಸನಿಯಿಂದ ದೌರ್ಜನ್ಯ, ಹಲ್ಲೆ ಎಂದಾಕ್ಷಣ ಎಲ್ಲರ ಕಣ್ಣೆದುರು ಬರುವುದು ಕುಡುಕ ಪತಿಯಿಂದ ಪತ್ನಿಯ ಮೇಲೆ ಹಲ್ಲೆ ಎಂದು.

    ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ, ಮದ್ಯವ್ಯಸನಿ ಪತ್ನಿಯ ಕಾಟ ತಾಳಲಾರದೇ ಪತಿಯೊಬ್ಬ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾನೆ.

    ಈ ಘಟನೆ ನಡೆದಿರುವುದು ಖೋಖ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಹಮದಾಬಾದ್ ನಗರದ ಮಣಿನಗರ ಪ್ರದೇಶದಲ್ಲಿ. 29 ವರ್ಷದ ಯುವಕ ಪೊಲೀಸ್​ ಠಾಣೆಗೆ ದೌಡಾಯಿಸಿ ಬಂದು, ತನ್ನ ಪತ್ನಿಯಿಂದ ರಕ್ಷಣೆ ಕೊಡಿ ಎಂದು ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದಾನೆ.

    ನನ್ನ ಹೆಂಡತಿ ವಿಪರೀತವಾಗಿ ಕುಡಿದು ಬರುತ್ತಾಳೆ. ದಿನವೂ ನನ್ನ ಮೇಲೆ ದೌರ್ಜನ್ಯ ಎಸಗುತ್ತಾಳೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾಳೆ.

    ನನಗೆ ಬದುಕೇ ಸಾಕಾಗಿ ಹೋಗಿದೆ. ದಯವಿಟ್ಟು ಆಕೆಯಿಂದ ನನಗೆ ಪೊಲೀಸ್​ ರಕ್ಷಣೆ ಕೊಡಿ ಎಂದು ಅರ್ಜಿಯಲ್ಲಿ ಪತಿ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
    2018ರಲ್ಲಿ ನನ್ನ ಮದುವೆ ಇವಳ ಜತೆಯಾಗಿದೆ. ಮದುವೆಯಾದ ಮೇಲಷ್ಟೆ ಈಕೆ ಕುಡುಕಿ ಎಂದು ಗೊತ್ತಾಗಿದೆ. ಮದುವೆಯಾದಾಗಿನಿಂದಲೂ ದಿನವೂ ಕುಡಿದು ಬಂದು ನನಗೆ ಮತ್ತು ನನ್ನ ಪಾಲಕರಿಗೆ ಹಿಂಸೆ ನೀಡುತ್ತಿದ್ದಾಳೆ ಎಂದು ಅರ್ಜಿಯಲ್ಲಿ ಯುವಕ ದೂರಿದ್ದಾನೆ.

    ನನ್ನ ಪಾಲಕರನ್ನು ಮನೆಬಿಟ್ಟು ಓಡಿಸುವಂತೆ ದಿನವೂ ಹಿಂಸೆ ನೀಡುತ್ತಿದ್ದಾಳೆ. ಕಳೆದ ವಾರ ನನ್ನ ಪಾಲಕರು ಕರೊನಾ ವೈರಸ್​ಗೆ ತುತ್ತಾಗಿದ್ದರು. ಒಂದನೇ ಫ್ಲೋರ್​ ಹತ್ತಿ ಕುಳಿತವಳು ಕೆಳಗೆ ಬರಲಿಲ್ಲ. ಅಲ್ಲಿಯೇ ತನಗೆ ಬೇಕಾದ್ದನ್ನೆಲ್ಲಾ ತೆಗೆದುಕೊಂಡು ಹೋಗಿದ್ದಳು. ಮದ್ಯಪಾನ ಮಾಡಿ ಟಾರ್ಚರ್​ ಕೊಡುತ್ತಿದ್ದಾಳೆ. ಅಪ್ಪ-ಅಮ್ಮನನ್ನು ಹೊರಕ್ಕೆ ಹಾಕು, ಇಲ್ಲವೇ ಬೇರೆ ಮನೆಗೆ ನಾವೇ ಹೋಗೋಣ ಎನ್ನುತ್ತಿದ್ದಾಳೆ. ಇಲ್ಲದಿದ್ದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ. ಇವಳಿಂದ ಜೀವನವೇ ನರಕ ಆಗಿಹೋಗಿದೆ. ಅವಳಿಂದ ನನಗೆ ಮತ್ತು ಪಾಲಕರಿಗೆ ರಕ್ಷಣೆ ಬೇಕಿದೆ ಎಂದು ಯುವಕ ಅಳಲು ತೋಡಿಕೊಂಡಿದ್ದಾರೆ.

    ಇದನ್ನೂ ಓದಿ: ಕರೊನಾ ಕಾರಣ, ಮೊಬೈಲ್​ನಲ್ಲೇ ಆಡ್ಕೋ ಮಗನೇ ಅಂದಳು ತಾಯಿ- ಮಗ ಮಾಡಿದ್ದೇನು ನೋಡಿ…

    ತನ್ನ ಪತಿ ಹಾಗೂ ಪಾಲಕರು ತನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಹೆಂಡತಿ ಜೂನ್​ನಲ್ಲಿ ಪೊಲೀಸ್​ ಕಂಪ್ಲೇಂಟ್​ ಕೊಟ್ಟಿದ್ದಾಳೆ. ಇದರ ಮುಂದುವರೆದ ಭಾಗವಾಗಿ ಇದೀಗ ಗಂಡ ದೂರು ದಾಖಲು ಮಾಡಿದ್ದಾನೆ. ವಿಪರೀತ ಮದ್ಯಸೇವನೆ ಮಾಡುವ ಹೆಂಡತಿ ಸಹಾಯವಾಣಿಗೆ ಪದೇ ಪದೇ ಕರೆ ಮಾಡಿ ತನ್ನನ್ನು ರಕ್ಷಣೆ ಮಾಡುವಂತೆ ಕರೆ ಮಾಡುತ್ತಾಳೆ. ಇದರಿಂದಲೂ ವಿಪರೀತ ಹಿಂಸೆಯಾಗಿದೆ ಎಂದಿದ್ದಾನೆ. (ಏಜೆನ್ಸೀಸ್​)

    ಅರ್ಜಿಯಲ್ಲಿ ನಮೂದಿಸಲಾದ ವಿವರಗಳನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳುವುದಾಗಿ ಖೋಖ್ರಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವೈ.ಎಸ್.ಗಮಿತ್ ತಿಳಿಸಿದ್ದಾರೆ.

    ಟ್ರಂಪ್​ ಹೆಸರಲ್ಲಿ ಬಂದ ಪತ್ರದಲ್ಲಿ ಪ್ರಾಣಘಾತಕ ವಿಷ: ಕಳಿಸಿದ್ಯಾರು? ಆತಂಕದಲ್ಲಿ ಶ್ವೇತಭವನ!

    ಕೊನೆಗೂ ಅಂಗೀಕೃತಗೊಂಡಿತು ಕೃಷಿ ಮಸೂದೆ: ರಾಷ್ಟ್ರಪತಿ ಅಂಕಿತವೊಂದೇ ಬಾಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts