More

    ಫ್ಲ್ಯಾಟ್ ಲಭ್ಯವಿದೆ… ಮುಸ್ಲಿಮರು, ಪ್ರಾಣಿಗಳಿಗೆ ಪ್ರವೇಶವಿಲ್ಲ…

    ಮುಂಬೈ: ಮನೆ ಬಾಡಿಗೆಗೆ ಇದೆ, ಆದರೆ ಇಂಥವರಿಗೆ ಮಾತ್ರ… ಈ ರೀತಿಯ ಬೋರ್ಡ್​ಗಳು ಸರ್ವೇ ಸಾಮಾನ್ಯ. ಕೆಲವು ಕಡೆಗಳಲ್ಲಿ ಹಿಂದೂಗಳಿಗೆ ಮಾತ್ರ, ಮುಸ್ಲಿಮರಿಗೆ ಮಾತ್ರ ಎಂದು ಹಾಕಲಾಗಿರುವ ಬೋರ್ಡ್​ಗಳ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ.

    ಅಂಥದ್ದೇ ಒಂದು ಪೋಸ್ಟ್​ ಇದೀಗ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬೈನ ಅಪಾರ್ಟ್​ಮೆಂಟ್​ ಒಂದರಲ್ಲಿ ‘3ಬಿಎಚ್‍ಕೆ ಫ್ಲ್ಯಾಟ್ ಲಭ್ಯವಿದೆ. ಆದರೆ ಮುಸ್ಲಿಮರು, ಪ್ರಾಣಿಗಳಿಗೆ ಪ್ರವೇಶವಿಲ್ಲ’ ಎಂದು ಬೋರ್ಡ್​ ಹಾಕಲಾಗಿದೆ.

    ಮುಂಬೈ ನಿವಾಸಿ ಅನ್ಮೆಶ್ ಪಾಟೀಲ್ ಈ ಬೋರ್ಡ್​ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದೆ.
    ಇದಕ್ಕೆ ಪರ-ವಿರೋಧ ಎರಡೂ ಅಭಿಪ್ರಾಯಗಳು ವ್ಯಕ್ತವಾಗಿವೆ. ವರ್ಣಬೇಧ ನೀತಿಗೆ ಇದೊಂದು ಉದಾಹರಣೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರೆ, ಇದು ಹಿಂದೂಗಳು ಮಾತ್ರವಲ್ಲ, ಮುಸ್ಲಿಮರು ಕೂಡ ಇಂಥ ಬೋರ್ಡ್​ ಹಾಕುವುದಿದೆ ಎಂದು ಕೆಲವರು ಬೋರ್ಡ್​ನ ಚಿತ್ರಗಳನ್ನು ಕಮೆಂಟ್​ನಲ್ಲಿ ಹಾಕಿದ್ದಾರೆ.

    ಇದನ್ನೂ ಓದಿ: ಇಸ್ಲಾಮಾಫೋಬಿಯಾ: ಫೇಸ್​ಬುಕ್​ ಸಿಇಒಗೆ ಇಮ್ರಾನ್​ ಬರೆದರು ಹೀಗೊಂದು ಸುದೀರ್ಘ ಪತ್ರ…

    ಅಪಾರ್ಟ್​ಮೆಂಟ್​ ಮಾಲೀಕ ತಾವು ಹಾಕಿರುವುದರಲ್ಲಿ ಯಾವುದೇ ತಪ್ಪು ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದು ನನ್ನ ಖಾಸಗಿ ಆಸ್ತಿ, ಸಾರ್ವಜನಿಕದ್ದಲ್ಲ. ನನ್ನ ಮನೆಗೆ ಯಾರು ಬಾಡಿಗೆಗೆ ಬರಬೇಕು, ಯಾರು ಬೇಡ ಎಂಬುದನ್ನು ನಿರ್ಧರಿಸುವ ಎಲ್ಲ ಹಕ್ಕುಗಳನ್ನು ನಾನು ಹೊಂದಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
    ರಾಣಾ ಶೇಖ್​ ಎನ್ನುವವರು ಕಮೆಂಟ್​ನಲ್ಲಿ ತಮಗಾಗಿರುವ ನೋವನ್ನು ಹಂಚಿಕೊಂಡಿದ್ದಾರೆ. ನಾನು ಮುಂಬೈನ ಬಾಂದ್ರಾದಲ್ಲಿ ಮನೆ ಹುಡುಕುತ್ತಿದ್ದೇನೆ. ನನ್ನ ಹೆಸರು ರಾಣಾ ಶೇಖ್​. ಸರ್​ನೇಮ್​ ಶೇಖ್​ ಇದೆಯೇ ವಿನಾ ನಾನು ಮುಸ್ಲಿಂ ಅಲ್ಲ, ಆದರೆ ಹೆಸರು ಕೇಳಿ ನನಗೆ ಮನೆ ನೀಡುವುದಿಲ್ಲ. ಆನಂತರ ನಾನು ಅಸಲಿಯತ್ತು ಹೇಳಿದಾಗ ಬ್ರೋಕರ್​ ಕ್ಷಮೆ ಕೋರುತ್ತಾರೆ ಎಂದಿದ್ದಾರೆ.

    ಈ ಪೋಸ್ಟ್​ಗೆ ಪಾಕಿಸ್ತಾನ ರಾಷ್ಟ್ರಪತಿ ಡಾ.ಆರೀಫ್ ಅಲ್ವಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಿಂದುತ್ವ ಹಾಗೂ ಆರ್‍ಎಸ್‍ಎಸ್‍ನ ಉಗ್ರಗಾಮಿ ಮತ್ತು ತತ್ವಶಾಸ್ತ್ರದಿಂದ ಪ್ರೋತ್ಸಾಹಿಸಲ್ಪಟ್ಟ ಸಮಾಜ ಮಾತ್ರ ಇದನ್ನು ಈ ರೀತಿಯಾಗಲು ಬಿಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

    ಶುರುವಾಗಿದೆ 5 ಅಂತಸ್ತಿನ ವಯಸ್ಕರ ಥೀಮ್​ಪಾರ್ಕ್​- ಪೋರ್ನ್​ ಸ್ಟಾರ್​ಗಳಿಂದಲೇ ಸೇವೆ!

    ಹೆಣ್ಣುಮಕ್ಕಳ ಬಳಿ ಬಂದು ಪ್ಯಾಂಟ್​ ಬಿಚ್ಚುತ್ತಿದ್ದ ಯುವಕನ ಬೆನ್ನತ್ತಿ ಹೋದ ಪೊಲೀಸರೇ ತಬ್ಬಿಬ್ಬು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts