More

    FACT CHECK: ಪ್ರಧಾನಿ ಮೋದಿ ನೆಹರು ಪ್ರತಿಮೆಗೆ ನಮಸ್ಕರಿಸಿದ್ರಾ? ಸತ್ಯಾಂಶ ಏನು?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಜವಹರ್‌ಲಾಲ್‌ ನೆಹರೂ ಅವರ ಪ್ರತಿಮೆಗೆ ಶಿರಬಾಗಿ ನಮಸ್ಕರಿಸುತ್ತಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

    ಇದನ್ನು ಅನೇಕ ಮಂದಿ, ಅದರಲ್ಲಿಯೂ ಮುಖ್ಯವಾಗಿ ಕಾಂಗ್ರೆಸ್‌ ಬೆಂಬಲಿಗರು, ಶೇರ್‌ ಮಾಡಿಕೊಂಡು ಮೋದಿ ವಿರುದ್ಧ ಅಪಹಾಸ್ಯದ ಕಮೆಂಟ್‌ಗಳನ್ನು ಹಾಕಿದ್ದರು. ಈ ಫೋಟೋ ಸುಳ್ಳು ಎಂದು ಬಿಜೆಪಿ ಬೆಂಬಲಿಗರು ಕಮೆಂಟ್‌ ಹಾಕಿದ್ದರೂ, ಬಿಜೆಪಿಯೇತರರು ಹಾಗೂ ಮೋದಿ ಪರವಾಗಿ ಇರುವವರ ನಡುವೆ ವಾದ-ಪ್ರತಿವಾದ ನಡೆದಿತ್ತು.

    ಜವಾಹರಲಾಲ್‌ ನೆಹರೂ ಅವರ ವಿರುದ್ಧ ಕೆಲವೊಂದು ಮಾತುಗಳನ್ನಾಡಿದ್ದ ಮೋದಿಯವರಿಗೆ ಕೊನೆಗೂ ನೆಹರು ಏನು ಎನ್ನುವುದು ತಿಳಿದಿದೆ. ತಲೆಬಾಗಿ ನಮಸ್ಕರಿಸುವಂತಾಗಿದೆ ಎಂದು ಕುಟುಕಿದ್ದರು. ನೆಹರೂ ಅವರ ಶ್ರೇಷ್ಠತೆಯ ಕುರಿತು ಮೋದಿಗೆ ಕೊನೆಗೂ ಅರಿವಿಗೆ ಬಂದಿದೆ ಎಂದು ಹಲವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದರು.

    ಆದರೆ ಈ ಫೋಟೋದ ಸತ್ಯಾಂಶ ಫ್ಯಾಕ್ಟ್‌ ಚೆಕ್‌ನಿಂದ ಹೊರಕ್ಕೆ ಬಂದಿದೆ. ಗೂಗಲ್‌ ರೀವರ್ಸ್‌ ಇಮೇಜ್‌ ಮೂಲಕ ಈ ಫೋಟೋದ ಅಸಲಿಯತ್ತನ್ನು ಬಹಿರಂಗಪಡಿಸಲಾಗಿದೆ. ಗೂಗಲ್‌ನಲ್ಲಿ ರಿವರ್ಸ್‌ ಇಮೇಜ್ ತಂತ್ರಜ್ಞಾನ ಬಳಸಿ ಹುಡುಕಾಟ ನಡೆಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟ್ಟರ್ ಪೇಜ್‌ನಲ್ಲಿ ಸತ್ಯಾಂಶ ಸಿಕ್ಕಿದೆ.

    ಇದನ್ನೂ ಓದಿ: ಮೊದಲ ಬಾರಿಗೆ ಪಿಸಿಎಂಬಿ ಪುಸ್ತಕ ಕನ್ನಡ ಭಾಷೆಯಲ್ಲಿ: ಸುರೇಶ್‌ ಕುಮಾರ್‌

    FACT CHECK: ಪ್ರಧಾನಿ ಮೋದಿ ನೆಹರು ಪ್ರತಿಮೆಗೆ ನಮಸ್ಕರಿಸಿದ್ರಾ? ಸತ್ಯಾಂಶ ಏನು?ಅಸಲಿಗೆ ಇದು ತಿರುಚಿದ ಫೋಟೋ. ಗಾಂಧಿ ಅವರ ಪ್ರತಿಮೆ ಇರುವ ಸ್ಥಳದಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ನೆಹರೂ ಅವರ ಪ್ರತಿಮೆ ಇರಿಸಿ ಅದನ್ನು ಹರಿಬಿಡಲಾಗಿದೆ. ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಉದ್ಘಾಟಿಸಿದ ವೇಳೆ ತೆಗೆದ ಫೋಟೋ ಇದಾಗಿದೆ.

    ನೂತನವಾಗಿ ಉದ್ಘಾಟನೆಗೊಂಡ ರಾಷ್ಟ್ರೀಯ ಸ್ವಚ್ಛತಾ ಕೇಂದ್ರದ ಕೆಲವು ಸ್ಮರಣೀಯ ದೃಶ್ಯಗಳು ಎಂದು ಬರೆದು ಪ್ರಧಾನಿ ಮೋದಿ ಅವರ ಪರಿಶೀಲಿಸಿದ ಟ್ವಿಟ್ಟರ್ ಖಾತೆಯಿಂದ ಈ ಫೋಟೋ ಶೇರ್ ಮಾಡಲಾಗಿತ್ತು. ಈ ಫೋಟೋಗಳ ಪೈಕಿ ಗಾಂಧಿ ಅವರ ಪ್ರತಿಮೆಗೆ ಪ್ರಧಾನಿ ಮೋದಿ ಕೈಮುಗಿಯುವ ಫೋಟೋ ಆಕರ್ಷಕವಾಗಿತ್ತು. ಅದನ್ನೇ ತಿರುಚಿ ನೆಹರೂ ಅವರ ಫೋಟೋ ಹಾಕಿರುವುದು ಬೆಳಕಿಗೆ ಬಂದಿದೆ.

    ಅಸಲಿ ಫೋಟೋ ಪಕ್ಕದಲ್ಲಿದೆ ನೋಡಿ

    ಗಲಭೆಕೋರರೆಂದು ಬಂಧಿಸಿದವರಿಗೆ ಸಿಕ್ತು ₹94 ಕೋಟಿ ಪರಿಹಾರ!

    ಮದುವೆ ಉಡುಗೊರೆಯಿಂದ ಸಿಕ್ಕಿಬಿದ್ಲು ಜರ್ಮನ್‌ ಭಯೋತ್ಪಾದಕಿ!

    ಕರುಣೆ ಬೇಡ, ಶಿಕ್ಷೆ ಎದುರಿಸಲು ಸಿದ್ಧ: ‘ಅಪರಾಧಿ’ ವಕೀಲ ಪ್ರಶಾಂತ್‌ ಭೂಷಣ್‌ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts