More

    ಈ ವರ್ಷ ಅಬಕಾರಿ ಇಲಾಖೆಗೆ ಬಂಪರ್‌! 300 ಕೋಟಿ ರೂ ಹೆಚ್ಚುವರಿ ಆದಾಯ

    ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ 2020-21 ನೇ ಸಾಲಿಗೆ 250-300 ಕೋಟಿ ರೂ.ಹೆಚ್ಚುವರಿ ಆದಾಯ ಸಂಗ್ರಹಣೆ ನಿರೀಕ್ಷೆ ಇದೆ ಎಂದು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

    ಈ ವರ್ಷ 22,700 ಕೋಟಿ ರೂ. ಗುರಿ ಇತ್ತು. ಅದು ಐದು ದಿನಗಳ ಹಿಂದೆಯೇ ಸಾಧನೆಯಾಗಿದೆ ಎಂದು ತಮ್ಮನ್ನು ಭೇಟಿ‌ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

    ಇಲಾಖೆಗೆ ಏಪ್ರಿಲ್ ನಲ್ಲಿ 77 ವಾಹನ ಖರೀದಿಸಲಾಗುತ್ತದೆ. ಇನ್ಸಪೆಕ್ಟರ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ 300 ಬೈಕ್ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪ್ರತಿ ಡಿಸಿ ಕಚೇರಿಗೆ 4 ಶಸ್ತ್ರಾಸ್ತ್ರ ಕೊಡುತ್ತೇವೆ ಎಂದರು.

    ಅನೇಕ ಕಡೆ ಹಳ್ಳಗಳಲ್ಲಿ ಗಾಂಜಾ ಬೆಳೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಪೊಲೀಸರ ಜತೆ ಸೇರಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.

    ಗಾಂಜಾ,ಅಫೀಮು ಸೇರಿದಂತೆ ಮಾದಕ ವಸ್ತು ಮಾರಾಟದ ವಿರುದ್ಧ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ಜತೆ ಸೇರಿ ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ‌ ಎಂದು ತಿಳಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಕುರಿತ ಪ್ರಶ್ನೆಗೆ, ಅದು ಸಿಎಂ ಪರಮಾಧಿಕಾರ ಎಂದು ಪ್ರತಿಕ್ರಿಯಿಸಿದರು. ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಬೆಂಲಿಸುವಿರಾ ಎಂಬ ಮತ್ತೊಂದು ಪ್ರಶ್ನೆಗೆ, ನಾನು ಅವರ ಪರವಾಗಿ ನಿಲ್ಲುತ್ತೇನೆ. ಆದರೆ, ನಾನು ರಾಜಕೀಯದಲ್ಲಿ ಇನ್ನೂ ಚಿಕ್ಕವನು. ಆ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

    ಸರ್ಕಾರಕ್ಕೆ ಎರಡು ದಿನಗಳ ಗಡುವು- ಇಲ್ಲದಿದ್ದರೆ ಸಾರಿಗೆಯಲ್ಲಿ ವ್ಯತ್ಯ: ಪ್ರಯಾಣಿಕರಿಗೆ ತಟ್ಟಲಿದೆ ಬಸ್‌ ಬಿಸಿ

    ಹೆಂಡ್ತಿ ಸೋಮಾರಿ, ಓದಿದ್ರೂ ಕೆಲ್ಸಕ್ಕೆ ಹೋಗಲ್ಲ- ಕೂತು ಕೂತು ಡುಮ್ಮಿಯಾಗ್ತಿದ್ದಾಳೆ: ಡಿವೋರ್ಸ್‌ ಸಿಗತ್ತಾ?

    ತುಂಬು ಗರ್ಭಿಣಿಯನ್ನು ಉರಿಬಿಸಿಲಲ್ಲಿ ನಡೆಸಿದ ಲೇಡಿ ಪೊಲೀಸ್‌ ಇನ್ಸ್‌ಪೆಕ್ಟರ್‌! ಇಲಾಖೆಯಿಂದ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts