More

    ಡ್ರೈವಿಂಗ್​ ಕಲಿಯುವವರೇ ಎಚ್ಚರ… ಟೆಕ್ಕಿಯಿಂದ ಎರಡೂವರೆ ಲಕ್ಷ ದೋಚಿದ ತರಬೇತುದಾರ​!

    ಪುಣೆ: ಹಣ ದೋಚುವವರು ಯಾವಾಗ, ಹೇಗೆಲ್ಲಾ ಪ್ಲ್ಯಾನ್​ ಮಾಡಿ ಸ್ಕೆಚ್​ ಹಾಕುತ್ತಾರೋ ತಿಳಿಯದು. ಅಂಥದ್ದೇ ಒಂದು ಭಯಾನಕ ಘಟನೆ ಪುಣೆಯಲ್ಲಿ ನಡೆದಿದೆ.

    ಕಾರಿನ ಡ್ರೈವಿಂಗ್​ ಕಲಿಯಲು ಹೋಗಿದ್ದ ಸಾಫ್ಟ್​ವೇರ್ ಇಂಜಿನಿಯರ್​ ಆಗಿರುವ​ ಶ್ರೀದೇವಿ ರಾವ್​ ಎನ್ನುವವರಿಂದ ಎರಡೂವರೆ ಲಕ್ಷ ರೂಪಾಯಿ ಹಣವನ್ನು ತರಬೇತುದಾರ ದೋಚಿದ್ದಾನೆ! ಈ ಸಂಬಂಧ ಶ್ರೀದೇವಿ ಅವರು ಪುಣೆಯ ಕೊಂಡ್ವಾದಲ್ಲಿ ದೂರು ದಾಖಲು ಮಾಡಿದ್ದಾರೆ.

    ಇದನ್ನೂ ಓದಿ: ಇವರೇ ಟಾಪ್​ ದಾನಶೂರರು: ಇವರು ಕೊಟ್ಟಿರುವ ದೇಣಿಗೆ ಕೇಳಿದರೆ ಶಾಕ್​ ಆಗ್ತೀರಾ!

    ಅಷ್ಟಕ್ಕೂ ಆಗಿದ್ದೇನೆಂದರೆ, ಶ್ರೀದೇವಿ ಅವರು ಕಾರಿನ ಡ್ರೈವಿಂಗ್​ ಕಲಿಯಲು ಹೋಗಿದ್ದಾರೆ. ಎಂಟು ದಿನ ರಾಜೇಶ್ ಸಿಂಗ್ ಎಂಬಾತ ಡ್ರೈವಿಂಗ್​ ಹೇಳಿಕೊಟ್ಟಿದ್ದಾನೆ. ನಂತರ ತಮ್ಮನ್ನು ಪ್ರತ್ಯೇಕ ಪ್ರದೇಶಕ್ಕೆ ಕರೆದೊಯ್ದ ಆತ ಫೋನ್ ಮೂಲಕ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ಎಟಿಎಂ ಕಾರ್ಡ್​ನಿಂದ ಹಣವನ್ನು ವಿತ್​ಡ್ರಾ ಮಾಡಿಕೊಂಡಿದ್ದಾನೆ. ಮಾತ್ರವಲ್ಲದೇ ತಾವು ಧರಿಸಿದ್ದ ಚಿನ್ನಾಭರಣವನ್ನು ಸಹ ಲೂಟಿ ಮಾಡಿದ್ದಾನೆ. ಒಟ್ಟಾರೆಯಾಗಿ 2.5 ಲಕ್ಷ ರೂಪಾಯಿ ಮೊತ್ತವನ್ನು ದೋಚಿದ್ದಾನೆ ಎನ್ನಲಾಗಿದೆ.

    ರಾಜೇಶ್​ ನನ್ನ ಕೈಗಳನ್ನು ಕಟ್ಟಿ ಹಣವನ್ನು ಫೋನ್ ಮೂಲಕ ವರ್ಗಾಯಿಸಬೇಕೆಂದು ಒತ್ತಾಯಿಸಿ ಮೊಬೈಲ್​ಫೋನ್​ ಕಸಿದುಕೊಂಡನು. ಎಲ್ಲಾ ಪಾಸ್‍ವರ್ಡ್‍ಗಳನ್ನು ನನ್ನಿಂದ ಪಡೆದುಕೊಂಡು ಹಣವನ್ನು ವರ್ಗಾಯಿಸಿಕೊಂಡಿದ್ದಾನೆ ಎಂದು ಶ್ರೀದೇವಿ ದೂರಿನಲ್ಲಿ ತಿಳಿಸಿದ್ದಾರೆ.

    ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 363 (ಅಪಹರಣ) ಮತ್ತು 394 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೊಂಧ್ವಾ ಪಿಎಸ್‍ನ ಹಿರಿಯ ಪೆÇಲೀಸ್ ಇನ್ಸ್‍ಪೆಕ್ಟರ್ ಸರ್ದಾರ್ ಪಾಟೀಲ್ ತಿಳಿಸಿದ್ದಾರೆ. ಆರೋಪಿಗಾಗಿ ಜಾಲ ಬೀಸಲಾಗಿದೆ.

    ಪಟಾಕಿ ಹಚ್ಚುವವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಜಿಪಿಎಸ್​ ನೀಡಿದ ಸರ್ಕಾರ

    ಗೂಗಲ್​ ಬಳಕೆದಾರರಿಗೆ ಬಿಗ್​ ಶಾಕ್​- ಇನ್ಮುಂದೆ ಫೋಟೋ, ವಿಡಿಯೋಗಳಿಗೆ ಶುಲ್ಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts