More

    VIDEO: ತಾಳಿಯೂ ಇಲ್ಲ, ಹಾರವೂ ಇಲ್ಲ: ವಧು- ವರರಿಬ್ಬರಿಗೂ ಷಟ್​ಸ್ಥಲ ಮುದ್ರೆಯ ಸರ; ಗದಗದಲ್ಲಿ ಡಿಫರೆಂಟ್​ ಮದುವೆ

    ಗದಗ: ತಾಳಿ ಕಟ್ಟುವ ಸಂಪ್ರದಾಯ ಇಲ್ಲದೇ ಮಠಾಧೀಶರ ಸಮ್ಮುಖದಲ್ಲಿ ವಿಭಿನ್ನವಾದ ಮದುವೆಯೊಂದು ಗದಗದಲ್ಲಿ ನಡೆದಿದೆ.

    ಗದಗ ನಗರದ ನಿವಾಸಿ, ಬಸವ ಧರ್ಮ ಪ್ರತಿಪಾದಕ, ಚಿಂತಕ ಅಶೋಕ ಬರಗುಂಡಿ ಹಾಗೂ ವನಜಾಕ್ಷಿ- ದಯಾನಂದ ಗೌಡರ ಮಗಳು ಸುಷ್ಮಾ ಜೋಡಿಯ ವಿಶೇಷ ಕಲ್ಯಾಣೋತ್ಸವ ನಡೆದಿದೆ. ತಾಳಿ ವಿರೋಧಿಸಿ ಷಟ್ ಸ್ಥಲ ಚಿಹ್ನೆಯ ವಿವಾಹ ಮುದ್ರೆಯ ಸರ ಪರಸ್ಪರ ಹಾಕುವ ಮೂಲಕ ಈ ಜೋಡಿ ಮದುವೆಯಾಗಿದೆ. ಷಟಸ್ಥಲ ಚಿಹ್ನೆಯಲ್ಲಿ ಓಂ‌ನಮ ಶಿವಾಯ ಅಂತ ಬರೆಯಲಾಗಿದೆ.

    ಬಸವ ತತ್ವದ ಅಡಿಯಲ್ಲಿ ಈ ಮದುವೆ ನಡೆದಿದೆ. ಗಂಡು- ಹೆಣ್ಣು ಪರಸ್ಪರ ಷಟ್ ಸ್ಥಲ ಮುದ್ರೆ ಬದಲಾವಣೆ ಮಾಡುವ ಮೂಲಕ ಮದುವೆ ಮಾಡಿಕೊಂಡಿದ್ದಾರೆ. ತಾಳಿ, ಕಂಕಣ ಇಲ್ಲದ ವಿಶೇಷ ಮದುವೆ ಇದಾಗಿದೆ. ಲಿಂಗ ತಾರತಮ್ಯ ನಿವಾರಣೆಗೆ ವಧು ವರನಿಗೆ ಷಟ್ ಸ್ಥಲ ಹಾಗೂ ಇಷ್ಟಲಿಂಗದ ಕುರುಹುಗಳು ಇರುವ ಸರ ಧರಿಸಿದರೆ, ವರ ಕೂಡ ವಧುವಿಗೆ ಇದನ್ನೇ ಕಟ್ಟಿದ್ದಾರೆ.

    ಅರಿಷಿಣದ ಕೊಂಬು, ವೀಳ್ಯದೆಲೆಯ ಕಂಕಣದ ಬದಲಿಗೆ ಇಬ್ಬರೂ ರುದ್ರಾಕ್ಷಿ ಕಂಡ ಕಟ್ಟಿಕೊಂಡು, ವಿಭೂತಿಯನ್ನು ಧರಿಸಿದ್ದಾರೆ. ಈ ವಿಶೇಷ ಮದುವೆಗೆ ಇಳಕಲ್​ ಮಠದ ಗುರುಮಹಾಂತ ಶ್ರೀಗಳು, ಶಿರೂರು ಮಠದ ಡಾ.ಬಸವಲಿಂಗ ದೇವರು, ಲಿಂಗಸೂರಿನ ಸಿದ್ದಲಿಂಗ ಶ್ರೀಗಳು ಸೇರಿದಂತೆ ಹಲವರು ಮಠಾಧೀಶರು ಆಗಮಿಸಿದ್ದರು.

    ‘ತಂಗೀ… ಗಂಡನ ಜತೆ ಮನೆಗೆ ಊಟಕ್ಕೆ ಬಾ’ ಎಂದು ನವವಿವಾಹಿತರನ್ನು ಕರೆದು ಇಬ್ಬರ ಕೊಲೆ ಮಾಡಿದ ಅಣ್ಣ!

    ಕೋಳಿ ಮೊಟ್ಟೆ ಇಟ್ಟಿದ್ದೇ ಆಯ್ತು ಭಾರಿ ಸುದ್ದಿ: ರಾತ್ರೋರಾತ್ರಿ ಸ್ಟಾರ್​ ಆದ ಈ ಚಿನ್ನು ಮಾಡಿದ್ದೇನು ನೋಡಿ…

    ಗ್ಯಾಂಗ್​ರೇಪ್​ ಆರೋಪಿಗಳಿಗೆ ಫೈವ್​ಸ್ಟಾರ್​ ಬಿರಿಯಾನಿ? ಕಾಂಡೋಮ್​ ಬಳಸಿದ್ದವರಿಗೆ ವಿಐಪಿ ಟ್ರೀಟ್​ಮೆಂಟ್​!

    ಇಂಜಿನಿಯರ್​ನ ಹಣದ ದಾಹಕ್ಕೆ ಅಮ್ಮ-ಮಗು ಬಲಿ! ಕಂದನಿಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣು

    VIDEO: ಕೊಳವೆ ಬಾವಿಯಿಂದ 100 ಗಂಟೆ ಬಳಿಕ ಮೇಲೆದ್ದ ಬಾಲಕ! ಅಬ್ಬಬ್ಬಾ… ಈ ಕಾರ್ಯಾಚರಣೆ ಹೀಗಿತ್ತು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts