More

    ಜನಸಂಖ್ಯೆ ನಿಯಂತ್ರಣವೆಂದರೆ ಸಂಜಯ್ ಗಾಂಧಿ ಥರ ಹಿಡ್ಕೊಂಡು ಹೋಗಿ ಕಟ್ ಮಾಡೋದಲ್ಲ: ಸಿ.ಟಿ.ರವಿ

    ಬೆಂಗಳೂರು: ಜನಸಂಖ್ಯೆ ನಿಯಂತ್ರಣವೆಂದರೆ ಈ ಹಿಂದೆ ಸಂಜಯ್ ಗಾಂಧಿ ಬ್ರಿಗೇಡ್ ಮಾಡಿತಲ್ಲ, ಆ ತರಹ ಹಿಡ್ಕೊಂಡು ಬಲವಂತವಾಗಿ ಕಟ್ ಮಾಡೋದಂತೂ ಖಂಡಿತ ಅಲ್ಲವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ‌.ರವಿ ಹೇಳಿದರು.

    ಅರಮನೆ ಮೈದಾನ ತ್ರಿಪುರನಿವಾಸಿನಿಯಲ್ಲಿ ಗುರುವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಡಾ.ಮೋಹನ್ ಭಾಗವತ್ ಅವರು ಅಸ್ಪೃಶ್ಯತೆ ನಿವಾರಣೆ ಹಾಗೂ ಜನಸಂಖ್ಯೆ ನಿಯಂತ್ರಣದ ಬಗ್ಗೆ ತಳೆದ ನಿಲುವನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದರು.

    ಅಸ್ಪೃಶ್ಯತೆ ನಿವಾರಣೆ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಶ್ರಮಿಸಲಿದ್ದಾನೆ. ಜನಸಂಖ್ಯೆ ನಿಯಂತ್ರಣ ನೀತಿ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಲಿದೆ ಎಂಬುದಕ್ಕಿಂತ ಗಂಭೀರವಾಗಿ ಚರ್ಚೆಯಾಗಬೇಕಾಗಿದೆ. ಮೋಹನ್ ಭಾಗವತ್ ಅವರು ದೇಶದ ಹಿತದೃಷ್ಟಿಯಿಂದ ಈ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.

    ಮೋಹನ್​ ಭಾಗವತ್​ ಅವರ ಜನಸಂಖ್ಯೆಯ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದ ಎಐಎಂಐಎಂನ ಓವೈಸಿ ಕುರಿತು ಉಲ್ಲೇಖಿಸಿದ ರವಿ, ‘ಜನಸಂಖ್ಯೆ ನಿಯಂತ್ರಣ ನೀತಿಗೆ ಎಐಎಂಐಎಂನ ಓವೈಸಿ ವಿರೋಧ ಸಹಜ. ಮೊದಲಿನಿಂದಲೂ ಅದನ್ನೇ ಹೇಳುತ್ತಿದೆ. ಆ ಪಕ್ಷದ ಪೂರ್ವಾಶ್ರಮ ಗೊತ್ತಿರುವವರು ಯಾರೂ ಅವರನ್ನು ಗಂಭೀರವಾಗಿ ತಗೋಳೋದಿಲ್ಲ. ಹಿಂದಿನ ರಜಾಕಾರರ ಮುಂದುವರಿದ ಭಾಗವೇ ಎಂಐಎಂ. ಹೊಸದಾಗಿ ನಿರೀಕ್ಷೆ ಮಾಡುವಂತಹದ್ದೇನಿಲ್ಲ. ಮೋಹನ್ ಭಾಗವತ್ ಅವರು ದೇಶದ ಹಿತದೃಷ್ಟಿಯಿಂದ ನೀಡಿರುವ ಸಲಹೆ ಬಗ್ಗೆ ಸಂಸತ್‌‌, ವಿಧಾನಸಭೆ ಸೇರಿ ಎಲ್ಲ ಕಡೆ ಚರ್ಚೆಯಾಗಲಿ, ಆ ನಂತರ ಜಾರಿಗೆ ಬರಲಿ’ ಎಂದು ಪ್ರತಿಪಾದಿಸಿದರು.

    ಕಾರ್ಯಕಾರಿಣಿ ಸಭೆ ನಾಳೆ
    ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಶುಕ್ರವಾರ ಇಡೀ ದಿನ ನಡೆಯಲಿದ್ದು, ತ್ರಿಪುರನಿವಾಸಿನಿ ಮೈದಾನದಲ್ಲಿ ವೇದಿಕೆ ಸಜ್ಜುಗೊಳಿಸಲಾಗಿದೆ. ಬೆಳಗ್ಗೆ 10.30ಕ್ಕೆ ಸಭೆ ಉದ್ಘಾಟನೆಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ.ಅರುಣಾ, ರಾಜ್ಯಾಧ್ಯಕ್ಷ, ಕೋರ್ ಕಮಿಟಿ ಸದಸ್ಯರು ಸೇರಿ 592 ಅಪೇಕ್ಷಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸಿ.ಟಿ.ರವಿ ವಿವರಿಸಿದರು.

    ಎಲ್ಲ ಸಮುದಾಯದವರಿಗೂ ಜನಸಂಖ್ಯಾ ನೀತಿ ಕಡ್ಡಾಯ: ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಪ್ರತಿಪಾದನೆ

    ಹಾಸ್ಯಲೋಕಕ್ಕೆ ಮತ್ತೊಂದು ಬರಸಿಡಿಲು: ರಾಜು ಶ್ರೀವಾಸ್ತವ್​ ಸಾವಿನ ಬೆನ್ನಲ್ಲೇ ಕಾಮಿಡಿಯನ್ ಪರಾಗ್ ನಿಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts