More

    VIDEO: ದೇಶದ ಗಮನ ಸೆಳೆದ ಬೆಂಗಳೂರಿನ ಗಲ್ಲಿ ಕ್ರಿಕೆಟ್​: ವ್ಹಾರೆವ್ಹಾ ಎಂದ ಪ್ರಧಾನಿ ಮೋದಿ! ಏನು ವಿಶೇಷ ಅಂತೀರಾ?

    ಬೆಂಗಳೂರು: ಬಹುತೇಕ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್​ ಆಡುವುದು ಸಾಮಾನ್ಯ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಕ್ರಿಕೆಟ್​ ಆಡುತ್ತಾ, ತಮ್ಮದೇ ಆದ ರೀತಿಯಲ್ಲಿ ಕಮೆಂಟ್​ ಮಾಡುತ್ತಾ ಸಂಭ್ರಮಿಸುತ್ತಾರೆ. ಆದರೆ ಬೆಂಗಳೂರಿನ ಮಕ್ಕಳು ಆಡಿದ ಕ್ರಿಕೆಟ್​ ಮಾತ್ರ ದೇಶಾದ್ಯಂತ ಸದ್ದು ಮಾಡಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರನ್ನೂ ಈ ಕ್ರಿಕೆಟ್​ ಅಚ್ಚರಿಗೊಳಿಸಿದ್ದು, ಹೃದಯಾಳದಿಂದ ಈ ಕ್ರಿಕೆಟ್​ ತಂಡವನ್ನು ಅಭಿನಂದಿಸಿದ್ದಾರೆ.

    ಅಷ್ಟಕ್ಕೂ ಅಂಥದ್ದೇನು ಈ ಕ್ರಿಕೆಟ್​ನಲ್ಲಿ ನಡೆದದ್ದು ಅಂತೀರಾ? ಬೆಂಗಳೂರಿನ ಗಿರಿನಗರದಲ್ಲಿರುವ ಸಂಸ್ಕೃತ ಭಾರತಿ ಆವರಣದಲ್ಲಿ ನಡೆದ ಈ ಕ್ರಿಕೆಟ್​ನ ವಿಶೇಷತೆ ಎಂದರೆ ಸಂಸ್ಕೃತದಲ್ಲಿಯೇ ಕಮೆಂಟ್​ ಹೇಳಿದ್ದು!

    ಸಂಸ್ಕೃತ ಭಾರತಿ ಆವರಣದ ಸಮೀಪ ಮಕ್ಕಳು ಕ್ರಿಕೆಟ್ ಆಡುವಾಗ ಸಂಸ್ಕೃತ ವಿದ್ವಾಂಸರಾದ ಲಕ್ಷ್ಮೀನಾರಾಯಣ ಅವರು ಸಂಸ್ಕೃತದಲ್ಲಿ ಕಾಮೆಂಟರಿ ಮಾಡಿದ್ದರು. ಅವರೇನೋ ಸಹಜವಾಗಿ ಈ ಕಮೆಂಟ್​ ಮಾಡಿದ್ದರು. ಆದರೆ ಅವರ ಈ ಕಮೆಂಟ್​ಗೆ ಈ ಪರಿಯಲ್ಲಿ ಶ್ಲಾಘನೆ ವ್ಯಕ್ತವಾಗುತ್ತದೆ ಎಂದು ಅವರೂ ಅಂದುಕೊಂಡಿರಲಿಕ್ಕಿಲ್ಲ. ಸಂಸ್ಕೃತದಲ್ಲಿ ಕಮೆಂಟ್​ಮಾಡಿರುವ ಈ ವಿಡಿಯೋವನ್ನು ಅವರು, ‘ಸಂಸ್ಕೃತ ಮತ್ತು ಕ್ರಿಕೆಟ್’ ಎಂದು ಶೀರ್ಷಿಕೆ ಕೊಟ್ಟು ಟ್ವೀಟ್​ ಮಾಡಿದ್ದರು.

    ಸಂಸ್ಕೃತ ಪ್ರೇಮಿಗಳು ಈ ಟ್ವೀಟ್​ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದೂ ಅಲ್ಲದೇ ಹಲವಾರು ಮಂದಿ ಇದನ್ನು ರೀಟ್ವೀಟ್​ ಮಾಡಿಕೊಂಡಿದ್ದಾರೆ. ಈ ಟ್ವೀಟ್​ ಪ್ರಧಾನಿ ನರೇಂದ್ರ ಮೋದಿಯವರ ಕಣ್ಣಿಗೂ ಬಿದ್ದು ಅವರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರೂ ಈ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿಕೊಂಡಿದ್ದು, ದೇಶಾದ್ಯಂತ ಪ್ರಶಂಸೆ ಮಹಾಪೂರವೇ ಹರಿದು ಬರುತ್ತಿದೆ.

    ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಲಕ್ಷ್ಮೀ ನಾರಾಯಣ ಅವರು, ‘ಸಂಸ್ಕೃತ ಭಾರತೀ ಆವರಣದಲ್ಲಿ ಸಂಸ್ಕೃತವೇ ವ್ಯಾವಹಾರಿಕ ಭಾಷೆ. ಇಲ್ಲಿಯ ಗಲ್ಲಿಯಲ್ಲಿ ನಿತ್ಯ ಕ್ರಿಕೆಟ್ ಆಡೋ ವಠಾರದ ಹುಡುಗರನ್ನ ನೋಡಿ ಸಂಸ್ಕೃತದಲ್ಲೇ ಕಾಮೆಂಟರಿ ಮಾಡಿದರೆ ಹೇಗೆ ಅಂತ ಅಂದುಕೊಂಡು ಮಾಡಿದ್ದಷ್ಟೇ. ಆದರೆ ಇದು ಈ ಪರಿಯಲ್ಲಿ ವೈರಲ್​ ಆಗುತ್ತದೆ ಎಂದು ಅಂದುಕೊಂಡಿರಲೇ ಇಲ್ಲ’ ಎಂದಿದ್ದಾರೆ. (ಏಜೆನ್ಸೀಸ್​)

    VIDEO: ಆಹಾ! ‘ವರುಣ’, ಏನು ನಿನ್ನಯ ಲೀಲೆ… ನೌಕಾಪಡೆಗೆ ಸೇರ್ಪಡೆಯಾಗಲು ರೆಡಿಯಾದ ಡ್ರೋನ್​…

    ಪ್ರಧಾನಿ ಹುದ್ದೆಗೆ ಇನ್ನೊಂದು ‘ಕಣ್ಣು’? ಹೊಸ ಪಕ್ಷದ ಹೆಸರು ಘೋಷಿಸಿದ ಕೆಸಿಆರ್​: ಕುಮಾರಸ್ವಾಮಿಯೂ ಸಾಥ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts