More

    ರಾತ್ರಿ ಬೆಳಗಾಗುವುದರೊಳಗೆ ವರ್ಲ್ಡ್‌ ಫೇಮಸ್‌ ಆಯ್ತು ಈ ಕರು: ಇದನ್ನು ನೋಡಲು ಮುಗಿಬಿದ್ದ ಜನ!

    ಚಾರಿ (ಬಾಂಗ್ಲಾದೇಶ): ಈ ಚಿತ್ರದಲ್ಲಿರುವ ಕರುವನ್ನು ಒಮ್ಮೆ ನೋಡಿ. ಇದರಲ್ಲೇನಾದರೂ ವಿಶೇಷ ಕಾಣಿಸುತ್ತದಾ? ಇದೇ ಕರು ಇದೀಗ ವಿಶ್ವ ದಾಖಲೆ ಬರೆದಿದ್ದು, ಇಡೀ ವಿಶ್ವದ ಗಮನ ಸೆಳೆದಿದೆ.

    ಅಂದ ಹಾಗೆ ಈ ಕರು ಇರುವುದು ಬಾಂಗ್ಲಾದೇಶದ ಚಾರಿ ಗ್ರಾಮದಲ್ಲಿ. ಇದು ಇಷ್ಟೆಲ್ಲಾ ಖ್ಯಾತಿ ಗಳಿಸಲು ಕಾರಣ ಇದರ ಆಕಾರ. ಈ ಕರು ಕೇವಲ 26 ಕೆ.ಜಿ ತೂಕವಿದೆ. ಮಾತ್ರವಲ್ಲದೇ ಇದರ ಎತ್ತರ ಕೇವಲ 56 ಸೆಂಟಿಮೀಟರ್. ಇಷ್ಟು ಕುಬ್ಜ ಗಾತ್ರದ ಕರು ಇರುವುದು ಇದೇ ಮೊದಲು ಎನ್ನಲಾಗಿದ್ದು, ಗಿನ್ನೆಸ್‌ ದಾಖಲೆ ಹೊರಡಲು ಸಿದ್ಧವಾಗಿದೆ.

    ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಸಾಮಾಜಿಕ ಜಾಲತಾಣದ ಸ್ಟಾರ್‌ ಕೂಡ ಆಗಿದೆ ಇದು. ಇದನ್ನು ನೋಡಲು ದೂರ ದೂರದ ಊರುಗಳಿಂದ ಜನರೂ ಬರುತ್ತಿದ್ದಾರಂತೆ! ಕರೊನಾ ಇದ್ದರೂ ಲೆಕ್ಕಿಸದೇ 15 ಸಾವಿರಕ್ಕೂ ಹೆಚ್ಚು ಜನ ದೇಶ ವಿದೇಶಗಳಿಂದ ಈಗಾಗಲೇ ಬಂದು ಇದನ್ನು ನೋಡಿಕೊಂಡು ಹೋಗಿದ್ದಾರಂತೆ!

    ಸದ್ಯ ಗಿನ್ನೆಸ್‌ ರೆಕಾರ್ಡ್‌ನಲ್ಲಿ ಇರುವ ಕರುವಿನ ಎತ್ತರಕ್ಕಿಂದು 10 ಸೆಂ.ಮೀ ಚಿಕ್ಕದು ಇರುವ ಕಾರಣ, ಇದೀಗ ವಿಶ್ವದಾಖಲೆ ಬರೆಯಲು ಸಜ್ಜಾಗಿದೆ. ಈಗ ದಾಖಲೆಯಲ್ಲಿ ಇರುವ ಹಸು 23 ಇಂಚು ಇದ್ದು, ಈ ಕರು 20 ಇಂಚು ಇರುವ ಕಾರಣ, ಇದನ್ನು ಗಿನ್ನೆಸ್‌ ರೆಕಾರ್ಡ್‌ಗೆ ಸೇರಿಸಲು ಮೂರು ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.

    VIDEO: ವಿಶ್ವಖ್ಯಾತಿ ದ್ವಾರಕಾ ದೇಗುಲಕ್ಕೆ ಅಪ್ಪಳಿಸಿದ ಭಯಾನಕ ಸಿಡಿಲು: ಮುಂದಾದ್ದೆಲ್ಲಾ ಅಚ್ಚರಿ…

    ಎದುರಿಗೆ ಮೂರು ಹುಲಿಗಳು ಬಂದರೆ ಹೇಗಿರುತ್ತೆ? ಇಲ್ಲಿದೆ ನೋಡಿ ಮೈ ಝುಂ ಎನ್ನುವ ವಿಡಿಯೋ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts