More

    ಫುಟ್​ಬಾಲ್​ ತಾರೆ ಮರಡೋನಾಗೆ 5 ವಿವಾದಿತ ಮಕ್ಕಳು: ಮೃತದೇಹ ಸಂರಕ್ಷಿಸಿಡಲು ಕೋರ್ಟ್​ ಆದೇಶ

    ಲಂಡನ್​: ಖ್ಯಾತ ಫುಟ್​ಬಾಲ್​ ಆಟಗಾರ ಡಿಯೆಗೊ ಮರಡೋನಾ ಮೃತಪಟ್ಟು, ತಿಂಗಳಾದ ಮೇಲೆ ಈಗ ಅವರ ಸುತ್ತ ಇದೀಗ ಮಕ್ಕಳ ವಿವಾದ ಎದ್ದಿದೆ.

    ಕಳೆದ ನವೆಂಬರ್​ 25ರಂದು ಹೃದಯಾಘಾತದಿಂದ ಮರಡೋನಾ ಮೃತಪಟ್ಟಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಕೆಲವೇ ದಿನಗಳ ಹಿಂದೆ ಮಿದುಳಿನಲ್ಲಿ ರಕ್ತಗಟ್ಟಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಬಳಿಕ ಗುಣವಾಗಿ ಮನೆಗೆ ಮರಳಿದ್ದರು. ನಂತರ ಹೃದಯಾಘಾತದಿಂದ ಮೃತರಾಗಿದ್ದಾರೆ.

    ಫುಟ್‌ಬಾಲ್ ಜಗತ್ತಿನ ‘ಕಿರೀಟವಿಲ್ಲದ ಮಹಾರಾಜ’ ಎಂದೇ ಪ್ರಖ್ಯಾತರಾಗಿರುವ ಮರಡೋನಾ ಅವರಿಗೆ ಐದು ಮಕ್ಕಳಿದ್ದು, ಇವರ ನಿಜವಾದ ತಂದೆ ಮರಡೋನಾ ಹೌದೋ ಅಲ್ಲವೋ ಎಂಬುದನ್ನು ಇದೀಗ ಖಾತ್ರಿ ಮಾಡಬೇಕಾಗಿ ಬಂದಿದೆ.

    ಈ ಹಿನ್ನೆಲೆಯಲ್ಲಿ ಪಿತೃತ್ವವನ್ನು ಪತ್ತೆ ಹಚ್ಚುವ ಸಲುವಾಗಿ ಅವರ ಡಿಎನ್​ಎ ಅಗತ್ಯವಿದ್ದು, ಅವರ ದೇಹವನ್ನು ಸಂರಕ್ಷಿಸಬೇಕು ಎಂದು ಅರ್ಜೆಂಟೀನಾ ಕೋರ್ಟ್​ ಹೇಳಿದೆ.  ಈ ಹಿಂದೆಯೇ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಅವರ ಡಿಎನ್‌ಎ ಮಾದರಿಗಳನ್ನು ಈಗಾಗಲೇ ಸಂಗ್ರಹಿಸಿಕೊಳ್ಳಲಾಗಿದೆ ಎಂದು ಮರಡೋನಾ ಪರ ವಕೀಲರು ಮಾಹಿತಿ ನೀಡಿದರು. ಆದರೆ ಇವಿಷ್ಟೇ ಸಾಲಲಿಕ್ಕಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಕೋರ್ಟ್​, ಅವರ ದೇಹದ ಅಂತ್ಯಕ್ರಿಯೆ ಮಾಡಬಾರದು ಎಂದು ಹೇಳಿದೆ.

    ಇದನ್ನೂ ಓದಿ: ನೆನಪುಗಳಿಗೆ ಧನ್ಯವಾದ ಮರಡೋನಾ; ಸಾಮಾನ್ಯರ ನಡುವಿನ ಅಸಾಮಾನ್ಯ

    ಆರು ಜನರು ಅರ್ಜೆಂಟೀನಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಮರಡೋನಾ ತಮ್ಮ ಜೈವಿಕ ತಂದೆ ಎಂಬುದಾಗಿ ಹೇಳಿಕೊಂಡ ನಂತರ ಇಂಥದ್ದೊಂದು ಬೆಳವಣಿಗೆ ನಡೆದಿದೆ. 25 ವರ್ಷದ ಮಾಗ್ಲಿ ಗಿಲ್ ಎಂಬುವವರು, ‘ಮರಡೋನಾ ನನ್ನ ಜೈವಿಕ ತಂದೆ ಎಂಬುದು ಎರಡು ವರ್ಷಗಳ ಹಿಂದೆ ನನ್ನ ಅರಿವಿಗೆ ಬಂದಿತು’ ಎಂದಿದ್ದರೆ, ಅರ್ಜೆಂಟೀನಾದಲ್ಲಿ ನಾಲ್ಕು ಮತ್ತು ಇಟಲಿಯಲ್ಲಿ ಒಬ್ಬ ಸೇರಿದಂತೆ ಒಟ್ಟು ಐದು ಮಕ್ಕಳನ್ನು ಮರಡೋನಾ ಹೊಂದಿರುವುದು ತಿಳಿದುಬಂದಿದೆ.

    1986ರ ವಿಶ್ವಕಪ್​ ಪಂದ್ಯದಲ್ಲಿ ಅವರು ಅರ್ಜೆಂಟೀನಾಗೆ ವಿಜಯ ಲಭಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅರ್ಜೆಂಟೀನಾ ಫುಟ್​ಬಾಲ್​ ತಂಡದ ಮಿಡ್​ಫೀಲ್ಡರ್ ಹಾಗೂ ಮ್ಯಾನೇಜರ್ ಕೂಡ ಆಗಿದ್ದ ಮರಡೋನಾ, ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದೆನಿಸಿಕೊಂಡಿದ್ದರು.

    ಚಂದಿರನ ಅಂಗಳವನ್ನು ತೋಡಿ ಕಲ್ಲು-ಮಣ್ಣು ಹೊತ್ತು ತಂದ ‘ಚಾಂಗ್​ ಲಿ’

    ಪತ್ನಿಗೂ ತಾಯಿಗೂ ಸದಾ ಜಗಳ- ನಾನು ಕುಗ್ಗಿ ಹೋಗಿದ್ದೇನೆ; ಸಮಸ್ಯೆ ಹೇಗೆ ಪರಿಹರಿಸಲಿ?

    VIDEO: ನಿರ್ಮಾಣಹಂತದಲ್ಲಿ ಕಟ್ಟಡದ ಕಂಬ ಯುವಕನ ಮೇಲೆ ಬಿದ್ದ ಭಯಾನಕ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts