More

    ಸರ್ಕಾರಿ ಅಧಿಕಾರಿಗಳ ವಿರುದ್ಧ ಇನ್ಮುಂದೆ ಹೇಗೇಗೋ ದೂರು ನೀಡೋ ಹಾಗಿಲ್ಲ​- ಇಲ್ಲಿದೆ ನೋಡಿ ರೂಲ್ಸ್​

    ಬೆಂಗಳೂರು: ಸರ್ಕಾರದ ಕೆಲಸ ಎಂದರೆ ಯಾವುದೂ ಅಷ್ಟು ಸುಲಭವಾಗಿ ಆಗುವಂಥದ್ದಲ್ಲ ಎನ್ನುವುದು ಪ್ರಚಲಿತದಲ್ಲಿ ಇರುವ ಮಾತು. ಒಂದು ಚಿಕ್ಕ ಕೆಲಸಕ್ಕೂ ಹತ್ತಾರು ಬಾರಿ ಕಚೇರಿ ಅಲೆದು, ಹಲವು ಕಡೆಗಳಲ್ಲಿ ಅಲ್ಲಿರುವ ಸಿಬ್ಬಂದಿಯ ಕೈಯನ್ನು ಬೆಚ್ಚಗೆ ಮಾಡಿದರೆ ಮಾತ್ರ ಕೆಲಸ ಆಗುತ್ತದೆ ಎಂಬ ಗಂಭೀರ ಆರೋಪಗಳೂ ಇವೆ.

    ಇದೇ ಕಾರಣಕ್ಕೆ ಕೆಲಸ ಮಾಡಿಸಿಕೊಳ್ಳಲು ಲಂಚ ಕೇಳಿದರೆ, ಸರಿಯಾಗಿ ನಡೆದುಕೊಳ್ಳದಿದ್ದರೆ, ಕೆಲಸ ಮಾಡಿಕೊಡದಿದ್ದರೆ… ಹೀಗೆ ಯಾವ್ಯಾವುದೋ ಕಾರಣಗಳಿಗೆ ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರು ದಾಖಲು ಮಾಡುವ ಜನರು ಅನೇಕರು. ಬೇರೆ ಯಾವ ದಾರಿಯೂ ಕಾಣದಿದ್ದಾಗ ಭ್ರಷ್ಟ ನೌಕರರ ವಿರುದ್ಧ ಹೀಗೆ ದೂರು ದಾಖಲು ಮಾಡುವುದು ಜನಸಾಮಾನ್ಯರಿಗೆ ಇರುವ ದಾರಿಯಾದರೂ ಇದರ ದುರ್ಲಾಭವೇ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ.

    ಅನಾಮಧೇಯ ವ್ಯಕ್ತಿಗಳಿಂದ ಯಾರ್ಯಾರದ್ದೋ ಸರ್ಕಾರಿ ನೌಕರರ ವಿರುದ್ಧ ದೂರು ದಾಖಲು ಮಾಡುವುದು ನಡೆಯುತ್ತಿದೆ. ದೂರು ದಾಖಲು ಮಾಡಿದಾಗಲೆಲ್ಲಾ ಅಂಥ ನೌಕರನನ್ನು ಕರೆದು ಮಾತುಕತೆ ನಡೆಸುವುದು, ನಂತರ ಅವರ ವಿರುದ್ಧ ದಾಖಲಾಗಿರುವ ಆರೋಪ ಸುಳ್ಳು ಎಂದು ತಿಳಿಯುವುದು ಹೆಚ್ಚುತ್ತಿವೆಯಂತೆ.

    ಈ ಹಿಂದೆ ಇದೇ ಕಾರಣಕ್ಕೆ ಹೆಸರು, ವಿಳಾಸ ಕಡ್ಡಾಯ ಮಾಡಿತ್ತು. ಆದರೆ ಜಾಣ ದೂರುಗಾರರು ನಕಲಿ ಹೆಸರು ಹಾಗೂ ನಕಲಿ ವಿಳಾಸದಿಂದ ಪತ್ರ ಬರೆದು, ಸರ್ಕಾರಿ ನೌಕರರ ವಿರುದ್ಧ ದೂರು ನೀಡುತ್ತಿರುವುದು ಹೆಚ್ಚುತ್ತಿದೆ.

    ಸರ್ಕಾರಿ ಅಧಿಕಾರಿಗಳ ವಿರುದ್ಧ ಇನ್ಮುಂದೆ ಹೇಗೇಗೋ ದೂರು ನೀಡೋ ಹಾಗಿಲ್ಲ​- ಇಲ್ಲಿದೆ ನೋಡಿ ರೂಲ್ಸ್​

    ಇದೇ ಕಾರಣಕ್ಕೆ ಸರ್ಕಾರ ಮತ್ತೊಂದು ಆದೇಶ ಹೊರಡಿಸಿದೆ. ಅದೇನೆಂದರೆ ದೂರು ನೀಡಿರುವ ವ್ಯಕ್ತಿಯ ಹೆಸರು, ವಿಳಾಸವನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಮುಂದಿನ ಕ್ರಮ ಜರುಗಿಸಲಿದೆ. ಅಷ್ಟೇ ಅಲ್ಲದೆ, ತಮ್ಮ ದೂರುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು. ಹೀಗೆ ಎಲ್ಲವೂ ಸರಿಯಾಗಿದ್ದರೆ ಮಾತ್ರ ಅಂಥ ನೌಕರನ ವಿರುದ್ಧ ಪ್ರಾಥಮಿಕ ತನಿಖೆ, ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಲು ಸೂಚಿಸಿದೆ. ಈ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ.

    ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸ್ವೀಕೃತವಾಗುವ ದೂರುಗಳು ಕೆಲವು ಸಂದರ್ಭಗಳಲ್ಲಿ ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಗ್ರಹ ಪೀಡಿತವಾಗಿದ್ದು, ಪೂರಕ ಮಾಹಿತಿ, ದಾಖಲೆಗಳನ್ನು ಲಭ್ಯಪಡಿಸದಿರುವುದರಿಂದ ಹಾಗೂ ಇಂತಹ ದೂರುಗಳಿಂದಾಗಿ ಸರ್ಕಾರಿ ಅಧಿಕಾರಿ, ನೌಕರರು ದೈನಂದಿನ ಕೆಲಸ ಕಾರ್ಯಗಳನ್ನು ಮುಕ್ತ ಹಾಗೂ ನಿರ್ಭೀತರಾಗಿ ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿರುವದನ್ನು ಗಮನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂಥ ಅನಾಮಧೇಯ ಅರ್ಜಿಗಳನ್ನು ತನಿಖೆಗೆ, ವಿಚಾರಣೆಗೆ ಒಳಪಡಿಸದೇ ಕಡತಗೊಳಿಸುವಂತೆ ಹಾಗೂ ಪೂರ್ಣ ವಿಳಾಸ ಸಹಿತವಿರುವ ದೂರುಗಳನ್ನು ಮಾತ್ರ ತನಿಖೆಗೆ, ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಅದರಲ್ಲಿ ಸೂಚಿಸಲಾಗಿದೆ.

    ಪಶ್ಚಿಮ ಬಂಗಾಳದಲ್ಲಿ ಬಾಂಬ್​ ಬ್ಲಾಸ್ಟ್​: ಟಿಎಂಸಿ ಕಾರ್ಯಕರ್ತರ ಮನೆಯಲ್ಲಿಯೇ ತಯಾರು?

    ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಉನ್ನತ ಪದವೀಧರರಿಗೆ ಉದ್ಯೋಗ: 89 ಹುದ್ದೆಗಳು ಖಾಲಿ

    ನಾನು ಸೇಫ್​, ನಾನು ಸೇಫ್​- ಜಿಗಿಜಿಗಿದು ಕುಪ್ಪಳಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​

    ಕಷ್ಟಪಟ್ಟು ಓದಿಸಿದ ಮಗಳು ಬೇರೆ ಜಾತಿಯವನನ್ನು ಕಟ್ಟಿಕೊಳ್ತೇನೆ ಅಂತಿದ್ದಾಳೆ… ಸತ್ತೋಗೋಣ ಎನಿಸ್ತಿದೆ… ಏನು ಮಾಡಲ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts