More

    ಪಂಜಾಬ್‌ ಸಿಎಂಗೆ ಭಾರಿ ಶಾಕ್‌: ಕೈಕೊಟ್ಟ ಸೋದರ ಸಂಬಂಧಿ! ಹಲ ಮುಖಂಡರು ಬಿಜೆಪಿಗೆ ಸೇರ್ಪಡೆ

    ಚಂಡೀಗಢ: ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಚಟುವಟಿಕೆ ಬಲು ಜೋರಾಗಿ ನಡೆಯುತ್ತಿದೆ. ಪಂಜಾಬ್‌ನಲ್ಲಿ ಕೂಡ ಇದೀಗ ಪಕ್ಷಾಂತರ ಚಟುವಟಿಕೆ ಶುರುವಾಗಿದೆ.

    117 ಕ್ಷೇತ್ರಗಳಿರುವ ಪಂಜಾಬ್​​ನಲ್ಲಿ ಫೆಬ್ರವರಿ 14ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್​ 10ರಂದು ಮತ ಎಣಿಕೆ ನಡೆಯಲಿದೆ. ಇದರ ಬೆನ್ನಲ್ಲೇ ಕೆಲ ಕಾಂಗ್ರೆಸ್‌ ಮುಖಂಡರು ಬಿಜೆಪಿ ಸೇರಿದ್ದಾರೆ. ಅದರಲ್ಲಿ ಪ್ರಮುಖರಾದವರು ಮುಖ್ಯಮಂತ್ರಿ ಚರಣಜಿತ್​ ಸಿಂಗ್ ಛನ್ನಿಗೆ ಅವರ ಸೋದರ ಸಂಬಂಧಿ ಜಸ್ವಿಂದರ್ ಸಿಂಗ್ ದಳಿವಾಲ್​! ಇದು ಚನ್ನಿ ಅವರಿಗೆ ಭಾರಿ ಆಘಾತ ಉಂಟು ಮಾಡಿದೆ.
    ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಮ್ಮುಖದಲ್ಲಿ ದಳಿವಾಲ್‌ ಬಿಜೆಪಿ ಸೇರ್ಪಡೆಯಾದರು. ಇವರ ಜತೆಗೆ ಪಂಜಾಬ್​ ಮಾಜಿ ಶಾಸಕ ಅರವಿಂದ್​ ಖನ್ನಾ, ಶಿರೋಮಣಿ ಅಖಾಲಿ ದಳ್​​ದ ನಾಯಕ ಗುರ್ದೀಪ್​ ಸಿಂಗ್​ ಗೋಶಾ, ಅಮೃತಸರ್​​ದ ಮಾಜಿ ಕೌನ್ಸಿಲರ್​ ಧರ್ಮವೀರ್ ಸರಿನ್​ ಕೂಡ ಬಿಜೆಪಿ ಸೇರಿರುವುದು ಚೆನ್ನಿ ಅವರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

    ಕ್ಯಾಪ್ಟನ್​ ಅಮರಿಂದರ್ ಸಿಂಗ್​ ಅರ್ಧದಲ್ಲಿಯೇ ಅಧಿಕಾರ ಬಿಟ್ಟ ಬಳಿಕ, ಚರಣಜಿತ್ ಸಿಂಗ್ ಚೆನ್ನಿ ಮುಖ್ಯಮಂತ್ರಿಯಾಗಿದ್ದಾರೆ. ಪಂಜಾಬ್​​ನಲ್ಲಿ ಕಾಂಗ್ರೆಸ್ ಅಧ್ಯಕ್ಷ ನವಜೋತ್​ ಸಿಂಗ್ ಸಿಧು ಈಗಾಗಲೇ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದವರು. ಆದ್ದರಿಂದ ಮುಂದಿನ ಮುಖ್ಯಮಂತ್ರಿ ಯಾರನ್ನು ಮಾಡಬೇಕು ಎಂಬ ಬಗ್ಗೆ ಕಾಂಗ್ರೆಸ್‌ಗೆ ಇನ್ನೂ ತಲೆನೋವಾಗಿರುವ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿಯ ಹತ್ತಿರದ ಸಂಬಂಧಿಯೇ ಬಿಜೆಪಿ ಸೇರಿದ್ದು ಪಕ್ಷಕ್ಕೂ ಭಾರಿ ಆಘಾತ ಉಂಟುಮಾಡಿದೆ.

    2017ರಲ್ಲಿ ಕಾಂಗ್ರೆಸ್​​ಗೆ ಇಲ್ಲಿ 77 ಕ್ಷೇತ್ರಗಳನ್ನು ಗೆದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿತ್ತು. ಆ್ಯಪ್‌ 20 ಸೀಟ್​, ಶಿರೋಮಣಿ ಅಖಾಲಿ ದಳ 15 ಕ್ಷೇತ್ರ, ಬಿಜೆಪಿ 3 ಕ್ಷೇತ್ರದಲ್ಲಿ ಜಯಸಾಧಿಸಿತ್ತು.

    VIDEO: ‘ಬಾಳೆಹಣ್ಣು ಬೇಕೇ ಬಾಳೆಹಣ್ಣು’ ಎಂದಾಗ ಜನ ನೋಡಲಿಲ್ಲ… ಮಾರಾಟಗಾರನ ಹೊಸ ಪ್ಲ್ಯಾನ್‌ನಿಂದ ಭರ್ಜರಿ ವ್ಯಾಪಾರ!

    VIDEO: ಈ ಜನ್ಮದಲ್ಲಿ ಈತ ಯಾರ ಮೇಲೂ ಬೈಕ್‌ನಿಂದ ಕೆಸರು ಹಾರಿಸಲ್ಲ… ಅಷ್ಟಕ್ಕೂ ಆಗಿದ್ದೇನು? ವೈರಲ್‌ ವಿಡಿಯೋ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts