More

    ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಾಗುವುದಿಲ್ಲವೆ? ಲೈಂಗಿಕ ನಿರಾಸಕ್ತಿಗೂ ಇದು ಕಾರಣವೆ? ಪರಿಹಾರವೇನು?

    ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಾಗುವುದಿಲ್ಲವೆ? ಲೈಂಗಿಕ ನಿರಾಸಕ್ತಿಗೂ ಇದು ಕಾರಣವೆ? ಪರಿಹಾರವೇನು?ಮೇಡಂ. ನನಗೆ 34 ವರ್ಷ ವಯಸ್ಸು. ಗಂಡನಿಗೆ 36. ಮದುವೆಯಾಗಿ ನಾಲ್ಕು ವರ್ಷಗಳಾಗಿದೆ. ಕಳೆದ ಮೂರು ವರ್ಷದಿಂದಲೂ ಮಕ್ಕಳಾಗಲು ಪ್ರಯತ್ನಿಸುತ್ತಲೇ ಇದ್ದೇವೆ. ಆಗುತ್ತಿಲ್ಲ. ನನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯೇ ಇಲ್ಲ. ನಮಗಿಬ್ಬರಿಗೂ ಸಕ್ಕರೆ ಕಾಯಿಲೆ ಇದೆ. ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಾಗುವುದಿಲ್ಲವೇ? ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲದಿರುವುದಕ್ಕೆ ಇದೂ ಒಂದು ಕಾರಣವೆ? ನಮ್ಮ ಸಮಸ್ಯೆಗೆ ಪರಿಹಾರ ಸೂಚಿಸಿ.

    ಉತ್ತರ: ಸಕ್ಕರೆ ಕಾಯಿಲೆಗೂ ಮಕ್ಕಳಾಗದಿರುವುದಕ್ಕೂ ಸಂಬಂಧವಿಲ್ಲ. ಲೈಂಗಿಕತೆಯಲ್ಲಿ ಆಸಕ್ತಿ ಇಲ್ಲದಿರುವುದಕ್ಕೆ ಇದು ಕಾರಣವೂ ಆಗುವುದಿಲ್ಲ. ನಿಮ್ಮ ಮದುವೆಯಾಗಿ ನಾಲ್ಕು ವರ್ಷಗಳಾಗಿರುವುದರಿಂದ ಒಮ್ಮೆ ಇಬ್ಬರೂ ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಒಳಿತು. ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಒಳ್ಳೆಯದು.

    ಆದರೆ ಇಬ್ಬರೂ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ನಿಮಗೆ ಲೈಂಗಿಕ ಆಸಕ್ತಿ ಇಲ್ಲ ಎಂದಿರುವಿರಿ. ಇದಕ್ಕೆ ಸಕ್ಕರೆ ಕಾಯಿಲೆ ಕಾರಣವಲ್ಲ. ಈ ಬಗ್ಗೆ ನೀವು ಒಮ್ಮೆ ಕೌನ್ಸೆಲಿಂಗ್​ಗೆ ಹೋಗಿ ನೋಡಿ. ಬಯಕೆ ಪರಸ್ಪರ ಗಂಡ-ಹೆಂಡಿರಲ್ಲಿ ಒಡಮೂಡಿ ದೇಹ, ಮನಸ್ಸುಗಳೆರಡೂ ಸಿದ್ಧಗೊಂಡಾಗ ಲೈಂಗಿಕ ಕ್ರಿಯೆ ಸಾಧ್ಯ. ಪರಸ್ಪರರಲ್ಲಿ ಪ್ರೀತಿ ತುಂಬಿದ ನೋಟ, ಸ್ಪರ್ಶ, ಮಾತುಕತೆ ಎಲ್ಲವೂ ಇದಕ್ಕೆ ಕಾರಣವಾಗುತ್ತವೆ. ಇಬ್ಬರೂ ಒಲವಿನಿಂದ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳಿ, ಖಂಡಿತ ಮಕ್ಕಳಾಗುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts