More

    VIDEO: ಅಂಬೆಗಾಲಿಡುತ್ತಾ ಬಂದ ಕಂದಮ್ಮನ ಎದುರಿಗೆ ಬಂದು ದಾಳಿಗೆ ಸಜ್ಜಾದ ಚಿರತೆ! ಮುಂದೇನಾಯ್ತು ನೋಡಿ…

    ಲಂಡನ್‌: ಏಳು ತಿಂಗಳ ಮಗುವೊಂದು ಅಂಬೆಗಾಲಿಡುತ್ತಾ ಕೋಣೆಯ ಮುಖ್ಯ ದ್ವಾರದ ಬಳಿ ಬಂದಾಗ ಎದುರಿಗಿಂದ ಬಂದ ಚಿರತೆಯೊಂದು ದಾಳಿ ಮಾಡಲು ನಿಂತ ಶಾಕಿಂಗ್‌ ವಿಡಿಯೋ ಒಂದು ಇದೀಗ ವೈರಲ್‌ ಆಗಿದೆ.

    ಇಂಗ್ಲೆಂಡ್​ನ ವೋರ್ಸೆಸ್ಟರ್‌ಶೈರ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಬೆವ್ಡಲಿಯಲ್ಲಿನ ವೆಸ್ಟ್ ಮಿಡ್‌ಲ್ಯಾಂಡ್ಸ್ ಸಫಾರಿ ಪಾರ್ಕ್‌ನಲ್ಲಿರುವ ಚೀತಾ ಸಫಾರಿ ಲಾಡ್ಜ್‌ನಲ್ಲಿ ಈ ಘಟನೆ ಸಂಭವಿಸಿದೆ. ಸಿಸಿಟಿಯಲ್ಲಿ ಮಗು ಮತ್ತು ಚಿರತೆ ಮುಖಾಮುಖಿಯಾಗಿರುವ ವಿಡಿಯೋ ದಾಖಲಾಗಿದ್ದು, ನೋಡುಗರನ್ನು ಶಾಕ್‌ಗೊಳಿಸುತ್ತದೆ.

    ಈ ವಿಡಿಯೋದಲ್ಲಿ ಸುಮಾರು ಏಳು ತಿಂಗಳ ಮಗು ತಾನು ಇರುವ ಕೋಣೆಯಲ್ಲಿ ನೆಲದ ಮೇಲೆ ಅಂಬೆಗಾಲು ಇಡುತ್ತಾ ಬರುವುದನ್ನು ಕಾಣಬಹುದು. ಆ ಕೋಣೆಯ ಬಾಗಿಲ ಬಳಿ ಬಂದಾಗ ಚಿರತೆಯೊಂದು ದಾಳಿಗೆ ಬಂದಿರುವುದನ್ನೂ ಕಾಣಬಹುದು. ಅದೇ ವೇಳೆ ಮಗು ಜೋರಾಗಿ ಅಳುವ ಶಬ್ದ ಕೇಳಿಸುತ್ತದೆ. ಮುಂದೆ ಏನಾಯಿತು ಎಂದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುವುದಿಲ್ಲ.

    ಅಸಲಿಗೆ ಈ ಬಾಗಿಲಿಗೆ ಸುರಕ್ಷತೆಯ ದೃಷ್ಟಿಯಿಂದ ಗ್ಲಾಸ್‌ ಅಳವಡಿಸಲಾಗಿದೆ. ಚಿರತೆಗೆ ಅದು ಗ್ಲಾಸ್‌ ಎಂದು ತಿಳಿಯದ ಹಿನ್ನೆಲೆಯಲ್ಲಿ ದಾಳಿ ಮಾಡಲು ಬಂದಿದೆ. ಆದರೆ ಗ್ಲಾಸ್‌ಗೆ ಮುಖ ಬಡಿದು ಅದು ಅಲ್ಲಿಯೇ ಬಿದ್ದಿದೆ. ಇಲ್ಲಿ ಚಿರತೆಗಳು ಓಡಾಡಬಹುದು ಎನ್ನುವ ಕಾರಣಕ್ಕೆ ಸುರಕ್ಷತೆಯ ದೃಷ್ಟಿಯಿಂದ ಬಾಗಿಲುಗಳಿಗೆ ಗ್ಲಾಸ್‌ ಅಳವಡಿಸಲಾಗಿದೆ ಎಂದು ಲಾಡ್ಜ್‌ ಮಾಲೀಕರು ಹೇಳಿದ್ದಾರೆ.

    ಅದರ ವಿಡಿಯೋ ಇಲ್ಲಿದೆ ನೋಡಿ (ಕೃಪೆ: ಟೈಂ ಟ್ರೆಂಡಿಂಗ್‌ ನ್ಯೂಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts