More

    ‘ಆ ದಿನ’ ಮೂರ್ನಾಲ್ಕು ಆ್ಯಂಗಲ್​ಗಳಲ್ಲಿ ವಿಡಿಯೋ ರೆಕಾರ್ಡಿಂಗ್​ ಆಗಿದ್ಯಲ್ಲಾ? ಯಾರು ಮಾಡಿದ್ರು?

    ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರ ಸಿಡಿ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಯುವತಿಗೆ ಐದನೇ ದಿನವಾದ ಇಂದು ಕೂಡ ಪ್ರಶ್ನೆಗಳ ಸುರಿಮಳೆ ಮಾಡಲಾಯಿತು.

    ತನಿಖಾಧಿಕಾರಿ ಕವಿತಾ ಅವರು ಇಂದು ಘಟನೆ ನಡೆದಿದೆ ಎನ್ನಲಾದ ದಿನದ ಕುರಿತು ಹಲವಾರು ಪ್ರಶ್ನೆಗಳನ್ನು ಯುವತಿಗೆ ಕೇಳಿದ್ದಾರೆ.

    ಬೆಂಗಳೂರಿನ ಆಡುಗೋಡಿಯ ಟೆಕ್ನಿಕಲ್ ಸೆಲ್ ವಿಚಾರಣೆ ನಡೆಯುತ್ತಿದ್ದು, ಇಂದು ವಿಡಿಯೋ ರೆಕಾರ್ಡಿಂಗ್​ ಕುರಿತಂತೆ ಪ್ರಶ್ನೆಗಳನ್ನು ಕೇಳಿರುವ ಬಗ್ಗೆ ಮಾಹಿತಿ ದೊರೆದಿದೆ. ವಿಡಿಯೋ ಚಿತ್ರೀಕರಣ ಹಾಗೂ ಅದಕ್ಕೆ ಬಳಕೆಯಾದ ಕ್ಯಾಮೆರಾ ಕುರಿತು ಇಂದು ತನಿಖಾಧಿಕಾರಿ ಮಾಹಿತಿ ಕಲೆ ಹಾಕಿದರು.

    ವಿಡಿಯೋ ರೆಕಾರ್ಡ್ ಮಾಡಿದ ಕ್ಯಾಮೆರ ಯಾವುದು? ರಿಕಾರ್ಡಿಂಗ್​ ಮಾಡಿರುವುದು ಮೊಬೈಲ್​ ಕ್ಯಾಮೆರಾದಿಂದಲೋ ಅಥವಾ ಪ್ರತ್ಯೇಕ ಕ್ಯಾಮೆರಾದಿಂದಲೋ ಎಂಬ ಪ್ರಶ್ನೆಯನ್ನು ಯುವತಿಯ ಮುಂದಿಟ್ಟಿದ್ದಾರೆ.

    ಒಂದು ವೇಳೆ ಮೊಬೈಲ್​ನಲ್ಲಿ ದೃಶ್ಯ ಸೆರೆ ಹಿಡಿದಿದ್ದೇ ಆಗಿದ್ದರೆ ಅಂದು ಬಳಸಿರುವ ಮೊಬೈಲ್ ಯಾವುದು? ಇದು ಯಾರಿಗೆ ಸೇರಿದ್ದು ಎಂದು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ.

    ಅಂದು ನಡೆದಿರುವ ಘಟನೆಯ ಕುರಿತು 3-4 ಆ್ಯಂಗಲ್​ಗಳಲ್ಲಿ ವಿಡಿಯೋ ರೆಕಾರ್ಡಿಂಗ್​ ಆಗಿದೆ. ಹೀಗೆ ಆಗಿದ್ದರೆ ಅದು ಒಬ್ಬರೇ ಮಾಡಿದ್ದಾ ಅಥವಾ ಇನ್ನೂ ಅನೇಕ ಮಂದಿ ಇದ್ದರಾ ಎಂಬ ಪ್ರಶ್ನೆ ಕೂಡ ಈ ಸಂದರ್ಭದಲ್ಲಿ ತನಿಖಾಧಿಕಾರಿ ಯುವತಿಗೆ ಕೇಳಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ನೋಡಿದರೆ, ಎಲ್ಲಾವೂ ಮೊಬೈಲ್ ದೃಶ್ಯಗಳಂತೆ ಇಲ್ಲ, ಆದ್ದರಿಂದ ಬೇರೆ ಯಾವುದಾದರೂ ಕ್ಯಾಮೆರಾ ಬಳಸಿರುವಿರಾ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ಪ್ರಶ್ನೆಗಳಿಗೆ ಯುವತಿ ಏನು ಉತ್ತರಿಸಿದ್ದಾರೆ ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದ್ದು, ವಿಚಾರಣೆ ಮುಂದುವರೆದಿದೆ.

    ಸಿಡಿ ಪ್ರಕರಣ: ಪ್ರಕರಣ ಮುಕ್ತಾಯವಾದ ಮೇಲೆ ಬಂಧನದ ಪ್ರಶ್ನೆ ಮಾಡ್ರಪ್ಪ ಎಂದ ಪೊಲೀಸ್​ ಮಹಾನಿರ್ದೇಶಕ

    ಸಿಡಿ ಲೇಡಿ ಪರವಾಗಿ ಕೋರ್ಟ್​ನಲ್ಲಿ ವಾದಿಸುತ್ತಿರುವುದು ಜಗದೀಶ್ ಅಲ್ಲ, ಸುಮ್ಮನೇ ಬೀದಿ ರಂಪಾಟ: ಎಸ್​ಐಟಿ ದೂರು

    ಸಿಡಿ ಪ್ರಕರಣ: ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್​ಗೂ ಶುರುವಾಯ್ತು ಸಂಕಷ್ಟ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts