More

    ಗಾಂಧಿ, ಕಸ್ತೂರಬಾ ವೇಷ ತೊಟ್ಟು ಕೋವಿಡ್​ ಪರೀಕ್ಷೆಗೆ ಬಂದ ಪುಟಾಣಿಗಳು

    ರಾಜ್​ಕೋಟ್​ (ಗುಜರಾತ್​): ನಾಳೆ ಗಾಂಧಿ ಜಯಂತಿ. ಈ ಸಂದರ್ಭದಲ್ಲಿ ಗಾಂಧೀಜಿಯ ಸಂದೇಶಗಳನ್ನು ಮಕ್ಕಳು ವಿವಿಧ ರೀತಿಯಲ್ಲಿ ಹೇಳುವುದು ಸಹಜ.
    ಆದರೆ ಇಲ್ಲಿಬ್ಬರು ಪುಟಾಣಿಗಳು ಸ್ವಲ್ಪ ಡಿಫರೆಂಟ್​ ಅಗಿ ಗಾಂಧಿ ಜಯಂತಿ ಆಚರಿಸುತ್ತಿದ್ದಾರೆ. ಕರೊನಾ ವೈರಸ್​ನ ಈ ದಿನಗಳಲ್ಲಿ ಕರೊನಾ ಕುರಿತು ಸಂದೇಶಗಳನ್ನು ಈ ಮಕ್ಕಳು ಪ್ರಸಾರ ಮಾಡಲು ಬಯಸಿದ್ದಾರೆ.

    ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋಗಿರುವ ಈ ಬಾಲಕ, ಗಾಂಧೀಜಿ ವೇಷ ತೊಟ್ಟುಕೊಂಡಿದ್ದರೆ, ಈತನ ಜತೆಗೆ ಕಸ್ತೂರಬಾ ವೇಷಧಾರಿಯಾಗಿ ಬಾಲಕಿಯೊಬ್ಬಳು ಬಂದಿದ್ದಾಳೆ. ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ ಇವರು.

    ಅಂದಹಾಗೆ ಈ ಮಕ್ಕಳು ಗುಜರಾತ್‌ನ ರಾಜ್‌ಕೋಟ್‌ನ ನಿವಾಸಿಗಳು.ಎಂಟ್ಹತ್ತು ವರ್ಷದ ಈ ಮಕ್ಕಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ.

    “ನನ್ನ ಸ್ವಾಬ್‌ ಸ್ಯಾಂಪಲ್ ‌ಗಳನ್ನು ಟೆಸ್ಟ್ ‌ಗೆ ತೆಗೆದುಕೊಳ್ಳಲಾಗಿದೆ. ಈ ಪರೀಕ್ಷೆ ಬಗ್ಗೆ ಜನರು ಭಯ ಹೊಂದಬಾರದು. ನಾವು ಸಹಕಾರ ಕೊಟ್ಟಲ್ಲಿ ನಮ್ಮ ದೇಶ ಆರೋಗ್ಯಯುತವಾಗಿರಲಿದೆ” ಎಂದು ಬಾಲಕ ಹೇಳಿದ್ದಾನೆ.

    ಚೀನಿಯರ ಎದೆನಡುಗಿಸಲು ಸಜ್ಜುಗೊಂಡಿದೆ ‘ನಿರ್ಭಯ್‌’ ಸಬ್‌ಸಾನಿಕ್‌ ಕ್ಷಿಪಣಿ

    ದುರ್ಗಾವತಾರಕ್ಕೆ ಮುಸ್ಲಿಮರಿಂದ ಬೆದರಿಕೆ: ಲಂಡನ್​ನಲ್ಲಿ ಭದ್ರತೆ ಕೇಳಿದ ಸಂಸದೆ ನುಸ್ರತ್

    ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ: ಯೋಗಿ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts