More

    ಖುರ್ಚಿ ಮೇಲೆ ಕುಳಿತುಕೊಳ್ಳುತ್ತಲೇ ಕೆಳಗೆ ಬಿದ್ದ ಸಂಸದ- ವಿಡಿಯೋ ವೈರಲ್​

    ಗೋರಖ್​ಪುರ (ಉತ್ತರ ಪ್ರದೇಶ): ಈಗ ಏನು ಎಡವಟ್ಟಾದರೂ ಅದು ವೈರಲ್​ ಆಗುವ ಕಾಲ. ಅದರಲ್ಲಿಯೂ ರಾಜಕಾರಣಿಗಳ ಮೇಲೆ ಸದಾ ಕಣ್ಣಿಡುವ ಜನ, ಅವರಿಗೆ ಸ್ವಲ್ಪ ಹೆಚ್ಚೂ ಕಮ್ಮಿಯಾದರೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಬಿಡುತ್ತಾರೆ.

    ಅದೇ ರೀತಿಯ ಒಂದು ಘಟನೆ ಗೋರಖ್​ಪುರದಲ್ಲಿ ನಡೆದಿದೆ. ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್​ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಆಯತಪ್ಪಿ ಬಿದ್ದ ವಿಡಿಯೋ ಭಾರಿ ವೈರಲ್​ ಆಗಿದೆ.

    ಕಾರ್ಯಕ್ರಮದಲ್ಲಿ ರವಿ ಕಿಶನ್ ಅವರಿಗೆ ಶಾಲು ಹೊದೆಸಿ ಸನ್ಮಾನ ಮಾಡಲಾಗಿದೆ. ಸನ್ಮಾನದ ನಂತರ ಖುರ್ಚಿ ಮೇಲೆ ಕೂರಬೇಕು ಅನ್ನೋವಷ್ಟರಲ್ಲಿ ಆಯತಪ್ಪಿ ಬಿಟ್ಟಿದ್ದಾರೆ. ಕೂಡಲೇ ಕೆಳಕ್ಕೆ ಬಿದ್ದುಬಿಟ್ಟಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಇದನ್ನು ವಿಡಿಯೋ ಮಾಡಿಕೊಂಡು ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಕಳೆದ ತಿಂಗಳು ಬಾಬಾ ರಾಮದೇವ್​​ ಆನೆ ಮೇಲೆ ಕೂತು ಯೋಗ ಮಾಡಲು ಹೋಗಿ ಬಿದ್ದ ದೃಶ್ಯವೂ ಸಹ ವೈರಲ್​ ಆಗಿದ್ದು ಇಲ್ಲಿ ಉಲ್ಲೇಖಾರ್ಹ.

    ತಾಯಿ ಕಿಡ್ನಿ ನೀಡಿದರೂ ಬದುಕುಳಿಯಲಿಲ್ಲ ಕಿರುತೆರೆ ನಟಿ

    2020: ಪ್ರಧಾನಿ ನರೇಂದ್ರ ಮೋದಿ ಬರೆದರು ಹೊಸದೊಂದು ದಾಖಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts