More

    ನೂರಾರು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಭಯಾನಕ ಸರಣಿ ಹಂತಕನದ್ದು ಕೊನೆಗೂ ಆಯಿತು ಅಂತ್ಯ!

    ವಾಷಿಂಗ್ಟನ್‌: ಸ್ಯಾಮ್ಯುಯೆಲ್ ಲಿಟ್ಟಲ್‌. ಈತನ ಹೆಸರು ಕೇಳಿದರೆ ಇಡೀ ಅಮೆರಿಕ ಬೆಚ್ಚಿ ಬೀಳುತ್ತದೆ. 80 ವರ್ಷದ ಈ ವೃದ್ಧನ 40 ವರ್ಷಗಳ ಭಯಾನಕ ಇತಿಹಾಸ ಎಂಥವರ ಮೈಯಲ್ಲಿ ನಡುಕ ಹುಟ್ಟಿಸುತ್ತದೆ.

    40 ವರ್ಷದ ವಯಸ್ಸಿನಲ್ಲಿ ಅಪರಾಧ ಲೋಕಕ್ಕೆ ಕಾಲಿಟ್ಟಿದ್ದ ಲಿಟ್ಟಲ್​ ನೂರಕ್ಕೂ ಅಧಿಕ ಕೊಲೆ ಮಾಡಿದ್ದಾನೆ. ಅದರಲ್ಲಿ ಲೆಕ್ಕಕ್ಕೆ ಸಿಕ್ಕಿದ್ದು 93 ಮಾತ್ರ. ಅಂದರೆ ಉಳಿದ ಕೊಲೆಗಳಲ್ಲಿ ಸಾಕ್ಷ್ಯಾಧಾರದ ಕೊರತೆ ಇದೆ.

    ಅಮೆರಿಕದ 19 ರಾಜ್ಯಗಳಲ್ಲಿ ಸಿಕ್ಕಸಿಕ್ಕವರನ್ನು ಕೊಲೆ ಮಾಡಿರುವ ಈತನ ಅಂತ್ಯ ಕೊನೆಗೂ ಆಗಿದೆ. 2014ರಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿ ಇದ್ದ ಈತ ಈಗ ವಯೋಸಹಜ ಖಾಯಿಲೆಯಿಂದ ಬಳಲಿ ಮೃತಪಟ್ಟಿದ್ದಾನೆ. 2014ರಲ್ಲಿ ಈತನಿಗೆ ಗಲ್ಲುಶಿಕ್ಷೆಯನ್ನು ವಿಧಿಸಲಾಗಿತ್ತು.
    ಈ ಹಿನ್ನೆಲೆಯಲ್ಲಿ ಜೈಲಿನ ಹಿಂದೆ ಕೊನೆಯ ದಿನಗಳನ್ನು ಎಣಿಸುತ್ತಿದ್ದ. ಆದರೆ ಸಾವು ಗಲ್ಲುಶಿಕ್ಷೆಗಿಂತ ಮೊದಲೇ ಬಂದಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಈತನನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಮೃತಪಟ್ಟಿದ್ದಾನೆ.

    ಎಷ್ಟು ಕೊಲೆ ಮಾಡಿದರೂ ಸುಳಿವು ನೀಡದೇ ತಪ್ಪಿಸಿಕೊಳ್ಳುವಲ್ಲಿ ಭಾರಿ ಯಶಸ್ವಿಯಾಗುತ್ತಿದ್ದ ಸ್ಯಾಮ್ಯುಯೆಲ್. ಎಲ್ಲಿಯೂ ಸಾಕ್ಷ್ಯಾಧಾರಗಳನ್ನು ಬಿಟ್ಟು ಕೊಡುತ್ತಿರಲಿಲ್ಲ. ಆದ್ದರಿಂದ ಕೊಲೆಯಲ್ಲಿ ಈತನೇ ಭಾಗಿಯಾಗಿದ್ದ ಎಂದು ತಿಳಿಯುತ್ತಿದ್ದರೂ ಕೋರ್ಟ್​ನಿಂದ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳ್ಳುತ್ತಿದ್ದ.

    2014ರಲ್ಲಿ ನಡೆದ ಮೂರು ಕೊಲೆಗಳಲ್ಲಿ ಮಾತ್ರ ಈತ ಸಿಕ್ಕಿಬಿದ್ದ. ಈ ಕೊಲೆ ಪ್ರಕರಣಗಳಲ್ಲಿ ಸ್ಯಾಮ್ಯುಯೆಲ್ ಡಿಎನ್‌ಎ ಹೊಂದಾಣಿಕೆಯಾಗಿತ್ತು. ಆಗ ಆತನನ್ನು ಬಂಧಿಸಿ ಬಾಯಿ ಬಿಡಿಸಿದಾಗ 93 ಜನರನ್ನು ಹತ್ಯೆ ಮಾಡಿರುವುದಾಗಿ ಕೋರ್ಟ್​ಗೆ ಹೇಳಿದ್ದಾನೆ. ಆದರೆ ಈತ ಮಾಡಿರುವ ಹತ್ಯೆಯ ಸಂಖ್ಯೆ ಇನ್ನೂ ಹೆಚ್ಚಿದೆ ಎನ್ನಲಾಗಿದೆ.

    ಈತನ ಟಾರ್ಗೆಟ್​ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಆಗಿದ್ದರು. ಬಡವರು, ಡ್ರಗ್ಸ್​ ಮಾರಾಟಗಾರರು ಹಾಗೂ ಕಪ್ಪು ವರ್ಣೀಯರನ್ನು ಈತ ಹೆಚ್ಚು ಟಾರ್ಗೆಟ್​ ಮಾಡುತ್ತಿದ್ದ ಎನ್ನಲಾಗಿದೆ.

    ನೀನು ಬೇಡ, ಗರ್ಭದಲ್ಲಿರುವ ಮಗು ಬೇಕು ಅಂತಿದ್ದಾರೆ- ಡಿವೋರ್ಸ್​ ಆದ್ರೆ ಮುಂದೇನು?

    ಪತ್ನಿಯ ಸಮೀಪ ಹೋದಾಗಲೆಲ್ಲಾ ಪ್ರೇಯಸಿಯ ನೆನಪು ಕಾಡಿ ಹಿಂಜರಿಯುತ್ತಿದ್ದೇನೆ- ನಾನೇನು ಮಾಡಲಿ?

    ಮಗನ ಬದಲು ನಾಯಿಯ ಹೆಸರಿಗೆ ಕೋಟ್ಯಂತರ ರೂಪಾಯಿ ಆಸ್ತಿ ಬರೆದ ರೈತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts