More

    ವಿಮಾನವಲ್ಲ… ಹದ್ದುಗಳ ಮೈನವಿರೇಳಿಸುವ ಕಸರತ್ತು- ವಿಡಿಯೋ ನೋಡಿ…

    ವಾಷಿಂಗ್ಟನ್‌: ವಿಮಾನಗಳು ಹಾರಾಟ ನಡೆಸುತ್ತಿದ್ದರೆ ಅವು ಹದ್ದುಗಳೋ, ವಿಮಾನಗಳೋ ಎಂದು ಗುರುತಿಸುವುದು ಕಷ್ಟ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ವೈಮಾನಿಕ ಪ್ರದರ್ಶನಗಳು ಮೈನವಿರೇಳುತ್ತವೆ.

    ಆದರೆ ಇಲ್ಲಿ ಕಾಣಿಸುತ್ತಿರುವುದು ಹದ್ದುಗಳ ಸೆಣಸಾಟ. ಎರಡು ಹದ್ದುಗಳು ಕಸರತ್ತಿನಲ್ಲಿ ಭಾಗಿಯಾಗಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್‌ ನಂದಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

    ವನ್ಯಜೀವಿಗಳು ಹಾಗೂ ಪಕ್ಷಿಗಳ ಕುರಿತಂತೆ ಹಲವಾರು ಸುಂದರ, ಮನಮೋಹಕ, ಭಯಾನಕ ದೃಶ್ಯಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿರುವ ಸುಶಾಂತ್‌ ನಂದಾ ಅವರು, ಈ ಹದ್ದುಗಳ ಅದ್ಭುತ ವಿಡಿಯೋಗಳನ್ನೂ ಹಂಚಿಕೊಂಡಿದ್ದಾರೆ.

    ಬಾಲ್ಡ್‌ ಹದ್ದುಗಳ ಈ ಸೂಪರ್‌ ಸ್ಟಂಟ್‌ ಅನ್ನು ನೋಡಿ ಆನಂದಿಸಿ ಎಂದು ನಂದಾ ಟ್ವೀಟ್ ಮಾಡಿದ್ದಾರೆ. ಅಮೆರಿಕದಲ್ಲಿ ಕಂಡು ಬರುವ ಈ ಬಾಲ್ಡ್‌ ಹದ್ದುಗಳು, ಅಮೆರಿಕ ಸಂಯುಕ್ತ ಸಂಸ್ಥಾನದ ಲಾಂಛನದಲ್ಲಿರುವ ಅಧಿಕೃತ ಪಕ್ಷಿಯಾಗಿದೆ.

    ಇದರ ರೆಕ್ಕೆಗಳು 1.8 ರಿಂದ 2.3 ಮೀಟರ್‌ ಅಗಲ ಇರುತ್ತದೆ. ಈ ಹದ್ದಿನ ತೂಕ 3 ಕೆ.ಜಿಯಿಂದ 6.3 ಕೆ.ಜಿಯವರೆಗೂ ಇರುತ್ತದೆ. ಈ ಹದ್ದುಗಳು 20 ವರ್ಷಗಳ ಕಾಲ ಜೀವಿಸಬಲ್ಲುದು. ಪ್ರತಿ ಗಂಟೆಗೆ ಇವುಗಳು 120-160 ಕಿಲೋಮೀಟರ್‌ ವೇಗದವರೆಗೆ ಚಲಿಸುವ ಸಾಮರ್ಥ್ಯ ಹೊಂದಿವೆ. ಈ ಹದ್ದಿನ ವೈಜ್ಞಾನಿಕ ಹೆಸರು ಹ್ಯಾಲಿಯಾಟಸ್‌ ಲ್ಯೂಕೋಸೆಫಾಲಸ್‌.

    ‘ಪರಸ್ಪರ ಒಪ್ಪಿಗೆಯ ಡಿವೋರ್ಸ್‌ಗೆ‌ ವಕೀಲರೇ ಬೇಕೆ? ಜೀವನಾಂಶ ಕೊಡುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts