More

    ಅಗ್ನಿವೀರರಿಗೆ ಬಂಪರ್​ ಆಫರ್​: ನಾಲ್ಕು ವರ್ಷಗಳ ಸೇವೆಯಿಂದ ಮರಳಿದ ಬಳಿಕ ಸರ್ಕಾರಿ ಉದ್ಯೋಗ

    ಚಂಡೀಗಢ: ಯುವಕರಿಗೆ ಸೇನೆಯಲ್ಲಿ ಕೆಲಸ ನೀಡುವ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಅಗ್ನಿಪಥ್​ಗೆ ಒಂದೆಡೆ ಭಾರಿ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ, ಕೆಲವು ಸರ್ಕಾರ, ಕಂಪೆನಿಗಳು ಬಂಪರ್​ ಯೋಜನೆ ಘೋಷಿಸಿವೆ.

    ಸೇನೆಯಲ್ಲಿ ಅಗ್ನಿವೀರರಾಗಿ ಸೇವೆ ಸಲ್ಲಿಸಿದ ಹರಿಯಾಣದ ಯುವಕರಿಗೆ ಸರ್ಕಾರದ ಗ್ರೂಪ್​ ಸಿ ಹುದ್ದೆ ನೀಡುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್​ ಘೋಷಿಸಿದ್ದಾರೆ. ಹರಿಯಾಣದ ಅಗ್ನಿವೀರರನ್ನು ರಾಜ್ಯ ಸರ್ಕಾರದ ಗ್ರೂಪ್-ಸಿ ಹುದ್ದೆಗಳಿಗೆ ಭರ್ತಿ ಮಾಡಲಾಗುವುದು. ಸೇನೆಯಲ್ಲಿ ಉತ್ತಮ ತರಬೇತಿ ಪಡೆದವರಿಗೆ ಪೊಲೀಸ್​ ಇಲಾಖೆಯಲ್ಲೂ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದ್ದು, ಈ ಕುರಿತು ಟ್ವೀಟ್​ ಕೂಡ ಮಾಡಿದ್ದಾರೆ.

    ಅಗ್ನಿಪಥ್​ ಯೋಜನೆಗೆ ಸೇರಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ನಂತರ ಶೇ.25ರಷ್ಟು ಮಂದಿ ಸೇನೆಯಲ್ಲಿ ಕಾಯಂ ಹುದ್ದೆ ಪಡೆದುಕೊಳ್ಳಲಿದ್ದು, ಉಳಿದವರಿಗೆ ಹಲವಾರು ರೀತಿಯ ಸೌಲಭ್ಯಗಳನ್ನು ನೀಡಿ ಅವರ ಸೇವೆಯನ್ನು ಅಲ್ಲಿಗೆ ಸ್ಥಗಿತಗೊಳಿಸಲಾಗುತ್ತದೆ. ಹೀಗೆ ನಾಲ್ಕು ವರ್ಷ ಸೇವೆ ಸಲ್ಲಿಸಿ ಮರಳುವ ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

    ‘ನೀವು ದೇಶದ ಬಗ್ಗೆ ಗಮನಹರಿಸಿ, ನಿಮ್ಮ ಬಗ್ಗೆ ನಾವು ಕಾಳಜಿ ವಹಿಸಲಿದ್ದೇವೆ. ದೇಶ ಸೇವೆ ಮಾಡಿ ಬಂದ ಅಗ್ನಿವೀರರಿಗೆ ಸರ್ಕಾರಿ ಉದ್ಯೋಗ ಗ್ಯಾರೆಂಟಿ ಎಂದು ಟ್ವೀಟ್​ನಲ್ಲಿ ಅವರು ತಿಳಿಸಿದ್ದಾರೆ. ಇದನ್ನೇ ಇನ್ನೂ ಹಲವು ರಾಜ್ಯಗಳು ಮಾಡುವ ನಿರೀಕ್ಷೆ ಇದೆ.

    ‘ಅಗ್ನಿಪಥ್’​ಗೆ ನೇಮಕಾತಿ ಶುರು: ಏನೆಲ್ಲಾ ಸೌಲಭ್ಯಗಳಿವೆ? ಅರ್ಹತೆ ಏನು? ವೇತನವೆಷ್ಟು? ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ…

    ‘ಒಂದೂವರೆ ಲಕ್ಷ ಯುವಕರ ನೇಮಕ, ಒಂದು ಕೋಟಿ ರೂ. ಪರಿಹಾರ: ಗಲಭೆಕೋರರಿಗಿಲ್ಲ ಅವಕಾಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts