More

    ಬಾಡಿಗೆ ಮನೆ ಕೇಳಿ ಬಲೆ ಬೀಸಿದ್ದ ಎಸಿಬಿ ಅಧಿಕಾರಿಗಳು: ಶಿವಮೊಗ್ಗದ ಕೃಷಿ ಅಧಿಕಾರಿಯ ಬೇಟೆಯಾಡಿದ್ದೇ ರೋಚಕ

    ಶಿವಮೊಗ್ಗ: ರಾಜ್ಯದ ವಿವಿಧೆಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿವಿಧ ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಿ ಭ್ರಷ್ಟಾಚಾರದ ಆರೋಪ ಹೊತ್ತವರಿಗೆ ಬಿಸಿ ಮುಟ್ಟಿಸುತ್ತಿದೆ. ಪ್ರತಿಯೊಬ್ಬ ಆರೋಪಿಯನ್ನು ಗುರುತು ಹಿಡಿಯುವುದು ಏಕಾಏಕಿ ಸಾಧ್ಯವಾಗದ ಮಾತು. ಸಂದೇಹ ಬಂದ ಅಧಿಕಾರಿಗಳ ಪ್ರತಿಯೊಂದು ಚಲನವಲನಗಳ ಮೇಲೆ ತಿಂಗಳುಗಟ್ಟಲೆ ನಿಗಾ ಇಟ್ಟೇ ಬಲೆ ಬೀಸಲಾಗುತ್ತದೆ.

    ಅದೇ ರೀತಿ ಗದಗ ಜಿಲ್ಲೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕನಾಗಿರುವ ಶಿವಮೊಗ್ಗ ಮೂಲದ ಟಿ.ಎಸ್.ರುದ್ರೇಶಪ್ಪನ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇವರ ಮನೆಯಿಂದ ಸುಮಾರು 7 ಕೆಜಿ ಬಂಗಾರ ಪತ್ತೆಯಾಗಿದೆ ಎನ್ನಲಾಗಿದೆ. ಒಟ್ಟು 3.5 ಕೋಟಿ ರೂ. ಮೌಲ್ಯದ ಚಿನ್ನ ಮತ್ತು 15 ಲಕ್ಷ ರೂ. ನಗದು ಮನೆಯಲ್ಲಿ ದಾಳಿಯ ವೇಳೆ ಪತ್ತೆಯಾಗಿದೆ. ಆದಾಯಕ್ಕಿಂತಲೂ ಶೇ. 400ರಷ್ಟು ಅಕ್ರಮ ಆಸ್ತಿ ಇವರ ಬಳಿ ಇದೆ!

    ಇವರ ಬಗ್ಗೆ ಸಂದೇಹಗಳು ಮೂಡಿರುವ ಬೆನ್ನಲ್ಲೇ, ಇವರ ಮೇಲೆ ನಿಗಾ ವಹಿಸಲು ಎಸಿಬಿ ಅಧಿಕಾರಿಗಳು ಬಳಸಿಕೊಂಡಿರುವ ಮಾರ್ಗ ಅವರ ಮನೆಯನ್ನು ಬಾಡಿಗೆಗೆ ಕೇಳುವುದು. ಮನೆ ಬಾಡಿಗೆ ಪಡೆಯುವ ನೆಪದಲ್ಲಿ ರುದ್ರೇಶಪ್ಪನ ಮೇಲೆ ಕಣ್ಣಿಟ್ಟಿದ್ದರು ಎಸಿಬಿ ಅಧಿಕಾರಿಗಳು. ಇದಾಗಿದ್ದು ಒಂದು ತಿಂಗಳ ಹಿಂದೆ.

    ಶಿವಮೊಗ್ಗದ ಚಾಲುಕ್ಯ ನಗರದಲ್ಲಿ ರುದ್ರೇಶ್‌ ಮನೆಯಿದ್ದು, ಮನೆ ಬಾಡಿಗೆ ಕೇಳುವ ನೆಪದಲ್ಲಿ ಎಸಿಬಿ ಅಧಿಕಾರಿಗಳು ಹೋಗಿದ್ದರು. ಮನೆ ಬಾಡಿಗೆಗೆ ಬೇಕೆಂದು ಹೇಳಿದಾಗ, ಮನೆ ತುಂಬಾ ದೊಡ್ಡದಿದೆ, ಅಷ್ಟೊಂದು ದೊಡ್ಡ ಮನೆ ಬೇಕಾ ಎಂದು ರುದ್ರೇಶ್‌ ಕೇಳಿದ್ದರು. ಅದಕ್ಕೆ ಅಧಿಕಾರಿ, ಹೌದು ನಮ್ಮದು ದೊಡ್ಡ ಕುಟುಂಬ ಮಾತ್ರವಲ್ಲದೇ ದೊಡ್ಡ ಅಡಕೆ ತೋಟವಿದೆ. ಅದಕ್ಕಾಗಿ ಬೇಕು ಎಂದು ಬಾಡಿಗೆಗೆ ಪಡೆದುಕೊಂಡಿದ್ದರು.

    ಮನೆ ಬಾಡಿಗೆ ಪಡೆದು ರುದ್ರೇಶ್‌ ಮೇಲೆ ಕಣ್ಣಿಟ್ಟಿದ್ದ ಅಧಿಕಾರಿಗಳು ಆಸ್ತಿಯ ಮಾಹಿತಿ ಸಂಗ್ರಹಿಸಿ ಕೊನೆಗೆ ದಾಳಿ ನಡೆಸಿದ್ದಾರೆ.

    VIDEO: ಸೆಲ್ಫಿ ಕೇಳುವ ನೆಪದಲ್ಲಿ ನಟಿ ಕವಿತಾ ಗೌಡ ಕಿಡ್ನಾಪ್‌! ಸಿಸಿಟಿವಿಯಲ್ಲಿ ಭಯಾನಕ ದೃಶ್ಯ; ಅಪಹರಣದ ರಹಸ್ಯ ಬಯಲು

    ಮೈಸೂರಿನ ಆಸ್ತಿ ಅರಸರದ್ದೇ: ಸರ್ಕಾರಕ್ಕೆ ಸುಪ್ರೀಂನಲ್ಲಿ ಭಾರಿ ಹಿನ್ನಡೆ- ಜಿಲ್ಲಾಡಳಿತಕ್ಕೂ ಎದುರಾಗಿದೆ ದೊಡ್ಡ ಸಂಕಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts