More

    ಸಾವಿನ ಬಾಯಿಗೆ ಹೋಗಿ ಬಂದ ನಾಲ್ಕು ವರ್ಷದ ಕಂದ: 50 ಅಡಿ ಕೊಳವೆ ಬಾವಿಯಲ್ಲಿ ಬಿದ್ದವ ಬದುಕಿದ

    ರಾಜಸ್ಥಾನ: ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಆದರೆ ಅದೃಷ್ಟ ಇದ್ದ ಮಕ್ಕಳು ಮಾತ್ರ ಬಚಾವಾಗಿ ಬರುತ್ತಿದ್ದಾರೆ. ಅಂಥದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಕೊಳವೆಬಾವಿಯಲ್ಲಿ ಇದ್ದ ನಾಲ್ಕು ವರ್ಷದ ಕಂದಮ್ಮ 26 ಗಂಟೆಗಳ ಬಳಿಕ ಬಾಲಕ ಸೇಫ್ ಆಗಿ ಹೊರಕ್ಕೆ ಬಂದಿದ್ದಾನೆ!


    ರಾಜಸ್ಥಾನದ ಸಿಕಾರ್ ಜಿಲ್ಲೆಯ ಋತುಶ್ಯಾಮ್‌ ಜೀ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜರ್ನಿಯಾ ಕಿ ಧನಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯ ತೋಟದಲ್ಲಿದ್ದ ಕೊಳವೆಬಾವಿ ಬಳಿ ಆಟವಾಡುತ್ತಿದ್ದ ಬಾಲಕ ಅದರೊಳಕ್ಕೆ ಬಿದ್ದುಬಿದ್ದಾನೆ. ಅದನ್ನು ನೋಡಿದ ಸ್ಥಳೀಯರು ಮನೆಯವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಅಥವಾ ಎನ್‌ಡಿಆರ್‌ಎಫ್ ಟೀಂ ಸತತ 26 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿತು.

    ಬೋರ್‌ವೆಲ್‌ಗೆ ಸಮಾನಾಂತರವಾಗಿ ಸುರಂಗವನ್ನು ಅಗೆಯುವುದರೊಂದಿಗೆ ರಕ್ಷಣಾ ತಂಡವು ಅವನನ್ನು ಹೊರತೆಗೆಯಲು ವಿವಿಧ ರೀತಿಯಲ್ಲಿ ಪ್ರಯತ್ನಿತು. ಹಗ್ಗ, ಬಲೆ ಇತ್ಯಾದಿಗಳನ್ನು ಬಿಟ್ಟು, ಆತನಿಗೆ ಅದನ್ನು ಹಿಡಿದುಕೊಳ್ಳಲು ಹೇಳಲಾಯ್ತು. ಬಾಲಕ ಸುಮಾರು 50 ಅಡಿ ಆಳದಲ್ಲಿ ಬಿದ್ದದ್ದು ಕಾಣಿಸಿತು. ಕ್ಯಾಮೆರಾದ ಮೂಲಕ ನಿರಂತರವಾಗಿ ನಿಗಾ ಇರಿಸಲಾಯಿತು.

    ಪೈಪ್ ಮೂಲಕ ಆಮ್ಲಜನಕವನ್ನು ನೀಡಲಾಯಿತು, ಸುಮಾರು ಹನ್ನೆರಡು ಆಮ್ಲಜನಕ ಸಿಲಿಂಡರ್‌ಗಳನ್ನು ಬಳಸಲಾಯಿತು. ಜೊತೆಗೆ ಆತನಿಗೆ ಹಗ್ಗದ ಸಹಾಯದಿಂದ ನೀರು, ಹಾಲು, ಬಿಸ್ಕೆಟ್‌ಗಳನ್ನು ಸಹ ನೀಡಲಾಯಿತು

    26 ಗಂಟೆಗಳ ಬಳಿಕ ಅಂತೂ ಬಾಲಕನನ್ನು ರಕ್ಷಣೆ ಮಾಡಲಾಗಿದೆ. ಸಾವಿನ ದವಡೆಯಿಂದ ಬಾಲಕ ಹೊರ ಬಂದಿದ್ದಾನೆ. ಸದ್ಯ ಬಾಲಕ ಆರೋಗ್ಯವಾಗಿದ್ದಾನೆ.

    ಎಂಬಿಬಿಎಸ್‌ ಕಲಿಯಲು ಯೂಕ್ರೇನ್‌, ರಷ್ಯಕ್ಕೆ ಹೋಗುವುದೇಕೆ? ಭಾರತದಲ್ಲಿ ಇಲ್ಲದ್ದು ಅಂಥದ್ದೇನಿದೆ ಅಲ್ಲಿ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts