More

    ಕರೊನಾಕ್ಕೆ ಹೆದರಿ 24 ಗಂಟೆಯಲ್ಲಿ 10 ಡೋಸ್‌ ಲಸಿಕೆ ಪಡೆದ ಪ್ರೊಫೆಸರ್‌! ಇದನ್ನು ಕೊಟ್ಟವರ ವಿರುದ್ಧ ತನಿಖೆ ಶುರು…

    ವೆಲ್ಲಿಂಗ್ಟನ್ (ನ್ಯೂಜಿಲೆಂಡ್‌) : ಈಗ ಜಗತ್ತಿನಾದ್ಯಂತ ಕರೊನಾ ಲಸಿಕೆಯದ್ದೇ ಮಾತು. ಎರಡು ಡೋಸ್‌ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಪ್ರತಿ ಡೋಸ್‌ಗೆ ಇಂತಿಷ್ಟು ಅವಧಿಯನ್ನು ನೀಡಲಾಗಿದೆ. ಆದರೆ ಇಲ್ಲೊಬ್ಬ ಆಸಾಮಿ ಒಂದೇ ದಿನದಲ್ಲಿ ಬರೋಬ್ಬರಿ 10 ಡೋಸ್‌ ಲಸಿಕೆ ಪಡೆದು ಇಕ್ಕಟ್ಟಿನಲ್ಲಿ ಸಿಲುಕಿದ್ದಾನೆ.

    ಆಕ್ಲೆಂಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ನಿಕ್ಕಿ ಟರ್ನರ್ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಕೋವಿಡ್‌ಗೆ ಸದಾ ಹೆದರುತ್ತಿದ್ದ ಇವರು, ವೈರಸ್‌ ತಮ್ಮ ಹತ್ತಿರ ಸುಳಿಯಲೇ ಬಾರದು ಎನ್ನುವ ಕಾರಣಕ್ಕೆ ಬೇರೆ ಬೇರೆ ಕೇಂದ್ರಗಳಿಗೆ ಹೋಗಿ 24 ಗಂಟೆಯೊಳಗೆ 10 ಬಾರಿ ಲಸಿಕೆ ಪಡೆದುಕೊಂಡಿದ್ದಾನೆ!

    10ನೇ ಬಾರಿ ಲಸಿಕೆ ಪಡೆಯುವ ವೇಳೆ ಅಲ್ಲಿರುವವರಿಗೆ ಸಂದೇಹ ಬಂದು ಪ್ರಶ್ನಿಸಿದಾಗ ತನ್ನ ತಪ್ಪನ್ನು ನಿಕ್ಕಿ ಒಪ್ಪಿಕೊಂಡಿದ್ದಾನೆ. ಈ ರೀತಿ ಲಸಿಕೆ ಒಂದೇ ಬಾರಿ ಪಡೆಯಲು ನಿಖರ ಕಾರಣವನ್ನು ಆತ ಹೇಳದಿದ್ದರೂ, ಇದಕ್ಕೆ ಕರೊನಾ ಭಯವೇ ಕಾರಣ ಎನ್ನಲಾಗಿದೆ.

    ಇದೀಗ ಈತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಒಂದೇ ಬಾರಿ ಎರಡು ಡೋಸ್‌ ಲಸಿಕೆ ಪಡೆಯುವುದೇ ಅಪಾಯಕಾರಿ. ಇಂಥ ಸ್ಥಿತಿಯಲ್ಲಿ 10 ಲಸಿಕೆ ಪಡೆದಿರುವುದು ಆಘಾತಕಾರಿ ಎಂದಿರುವ ಇಲ್ಲಿಯ ಆರೋಗ್ಯ ಇಲಾಖೆ, ಪ್ರೊಫೆಸರ್‌ಗೆ ತುರ್ತು ಚಿಕಿತ್ಸೆ ನೀಡಲು ಮುಂದಾಗಿದೆ.

    ಲಸಿಕೆ ನೀಡುವಾಗ ಹಲವಾರು ನಿಯಮಗಳನ್ನು ಪಾಲಿಸಬೇಕಿದೆ. ಲಸಿಕೆ ಪಡೆದಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಡಲಾಗುತ್ತಿದೆ. ಆದರೆ ಇದರ ಹೊರತಾಗಿಯೂ ಒಬ್ಬ ವ್ಯಕ್ತಿ 24 ಗಂಟೆಯ ಒಳಗೆ 10 ಕಡೆಗಳಲ್ಲಿ ಲಸಿಕೆ ಪಡೆಯುವಲ್ಲಿ ಹೇಗೆ ಯಶಸ್ವಿಯಾದ, ಇದು ಲಸಿಕಾ ಕೇಂದ್ರಗಳ ಕರ್ತವ್ಯಲೋಪ ಎಂದಿರುವ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ. ಇದೇ ರೀತಿ ಇನ್ನೆಷ್ಟು ಮಂದಿ ಹೆಚ್ಚಿನ ಲಸಿಕೆ ಪಡೆದುಕೊಂಡಿದ್ದಾರೋ ಎಂದು ಕಳವಳ ವ್ಯಕ್ತಪಡಿಸಿರುವ ಇಲಾಖೆ ಈ ಬಗ್ಗೆಯೂ ಪರಿಶೀಲನೆ ನಡೆಸುತ್ತಿದೆ. ಇದು ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ, ಈ ರೀತಿ ಹೆಚ್ಚಿಗೆ ಲಸಿಕೆ ಪಡೆದವರು ಇದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಮಾಧ್ಯಮಗಳನ್ನು ಇಲಾಖೆ ಜಾಹೀರಾತು ನೀಡಿದೆ.

    VIDEO: ನದಿಗೆ ಉರುಳಿದ ಎಪಿಎಸ್‌ಆರ್‌ಟಿಸಿ ಬಸ್‌: ಕನಿಷ್ಠ 9 ಮಂದಿ ಸಾವು- ಹಲವರ ಸ್ಥಿತಿ ಚಿಂತಾಜನಕ

    ಹೆಲಿಕಾಪ್ಟರ್‌ ದುರಂತ ನಡೆದ ಗ್ರಾಮ ದತ್ತುಪಡೆದ ಸೇನೆ: ಗ್ರಾಮಸ್ಥರನ್ನು ದೇವರು ಎಂದು ಬಣ್ಣಿಸಿ ಹೀಗೊಂದು ನಮನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts